ಸಮಾಜ ಸೇವಾ ಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ
ಕೋಲಾರ,ಜು.೨೩- ಕರ್ನಾಟಕ ರಾಜ್ಯದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆ ಸಲ್ಲಿಸಿದ ೪೫ ಗಣ್ಯರಿಗೆ ಪುನೀತ್ ರಾಜ ರತ್ನ ರಾಜ್ಯ ಪ್ರಶಸ್ತಿ ಮತ್ತು ಕೋಲಾರ ಜಿಲ್ಲೆಯಾದ್ಯಂತ ಎಸ್‌ಎಸ್‌ಎಲ್‌ಸಿ ತರಗತಿಯಲ್ಲಿ ೫೮೦ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಮಾಣ ಪತ್ರ, ಪಿ ಯು ಸಿ ತರಗತಿಯಲ್ಲಿ ೫೬೦ ಅಂಕ ಪಡೆದ ೧೭ ಕೋಲಾರ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಮಹಿಳಾ ಸ್ವ ಸಹಾಯ ಸಂಘಗಳು ಸದಸ್ಯರುಗಳು ಸ್ವಯಂ ಪ್ರೇರಿತವಾಗಿ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿರುವಂತಹ ಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ನವ ಕರ್ನಾಟಕ ಸ್ವಾಭಿಮಾನ ವೇದಿಕೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಟಿ ಚೆನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಂಸ್ಥಾಪಕ ಅಧ್ಯಕ್ಷ ರಾಮಾಂಜನಪ್ಪ ಎಂ.ಎಚ್ ಮಾತನಾಡಿ, ಕೋಲಾರ ಜಿಲ್ಲೆಯ ಗಡಿಭಾಗ ಗಡಿಭಾಗದಲ್ಲಿ ಹಲವಾರು ಸಮಸ್ಯೆಗಳಿವೆ ಯುವಕರಿಗೆ ಉದ್ಯೋಗ ಒದಗಿಸಬೇಕು ಕೋಲಾರ ಜಿಲ್ಲೆಯ ದಂತ ಎಲ್ಲಾ ತಾಲೂಕುಗಳಲ್ಲಿ ಕನ್ನಡಿಯರಿಗಾಗಿ ಕನ್ನಡ ಭಾಷೆ ಉಳಿಸಲು ಬೆಳೆಸಲು ಕನ್ನಡಿಗರ ಕಾರ್ಯಕ್ರಮಗಳನ್ನು ಮಾಡಲು ತಾಲೂಕಿಗೊಂದು ಕನ್ನಡ ಭವನಗಳನ್ನು ನಿರ್ಮಾಣ ಮಾಡಬೇಕು ಗಡಿಭಾಗದಲ್ಲಿ ಕನ್ನಡ ಶಾಲೆಗಳನ್ನು ಉಳಿಸುವಂತಹ ಪ್ರಯತ್ನ ಮಾಡಬೇಕು ಎಂದರು.
ರೋಟರಿ ಅಧ್ಯಕ್ಷ ನಾಗನಂದ್ ಕೆಂಪರಾಜ್ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಗಡಿಭಾಗದಲ್ಲಿ ನವ ಕರ್ನಾಟಕ ಸ್ವಾಭಿಮಾನ ವೇದಿಕೆ ಸಂಸ್ಥಾಪಕ ಅಧ್ಯಕ್ಷ ರಾಮಾಂಜನಪ್ಪ ಕರ್ನಾಟಕ ರಾಜ್ಯದಂತ ವಿವಿಧ ಕ್ಷೇತ್ರಗಳಲ್ಲಿ ೪೫ ಸಾಧಕರಿಗೆ ಪುನೀತ್ ಅವರ ಹೆಸರಲ್ಲಿ ರಾಜ್ಯ ರತ್ನ ರಾಜ್ಯ ಪ್ರಶಸ್ತಿ ಆಯ್ಕೆ ಮಾಡಿಕೊಳ್ಳುವುದು ಪ್ರಶಂಸೆ ಕೋಲಾರ ಜಿಲ್ಲೆಯ ದತ್ತ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿ ವರ್ಷದಂತೆ ೫೦ ರಿಂದ ೬೦ ಮಕ್ಕಳನ್ನು ಗುರುತಿಸಿ ನಮ್ಮ ಜಿಲ್ಲೆಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ನಾಡು ನುಡಿ ನೆಲ ಜನ ಸಮಸ್ಯೆ ಬಂದಾಗ ನಾವೆಲ್ಲ ಕನ್ನಡಿಗರು ಒಂದಾಗಬೇಕು ಅದ್ಭುತ ಕಾರ್ಯಕ್ರಮವನ್ನು ಪ್ರತಿ ವರ್ಷ ಮಾಡುವಂತಾಗಲಿ ಎಂದು ಶ್ಲಾಘಸಿದರು.
ಪ್ರತಿಭಾ ಪುರಸ್ಕಾರದಲ್ಲಿ ಸನ್ಮಾನಿತರಾದ ವಿದ್ಯಾರ್ಥಿಗಳು ಜಿಲ್ಲೆಗೆ ಮಾದರಿಯಾಗಿ ನಿಷ್ಠಾವಂತ ಅಧಿಕಾರಿಯಾಗಿ ಜಿಲ್ಲೆಗೆ ನಿಮ್ಮಗಳ ಸೇವೆ ದೊರೆಯಲಿ ಎಂದು ಆಶಿಸಿದರು.
ಸಂಘಟನೆಯ ಕಾರ್ಯಧ್ಯಕ್ಷ ನರಸಿಂಹಯ್ಯ ಸಿ.ಎಸ್, ಅಶ್ವಿನಿ ಪಿ, ಕಾರ್ಮಿಕ ಘಟಕ ಮಹಿಳಾ ಅಧ್ಯಕ್ಷೆ ಮಂಜುಳ, ಮಹೇಂದ್ರ ಕಂಪನಿ ಹೀರೋ ಸ್ಪೇಸ್ ನಾಗರಾಜ್, ಶ್ರೀರಾಮ್, ರಾಜ್ಯ ವಕ್ತಾರ ಬಿ.ಟಿ ಪ್ರಸಾದ್, ಜಿಲ್ಲಾ ಅಧ್ಯಕ್ಷ ರವಿಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಶಬರೀನ್ ತಾಜ್, ತಾಲೂಕು ಅಧ್ಯಕ್ಷ ಶ್ರೀನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಧಿಕ್ ಅಹಮದ್, ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಸಿಎಂ, ಶ್ರೀನಿವಾಸಪುರ ತಾಲೂಕು ಯುವ ಅಧ್ಯಕ್ಷ ಸಾಬೀರ್, ಮುಳಬಾಗಿಲು ತಾಲೂಕು ಅಧ್ಯಕ್ಷ ಅಶೋಕ, ಬಂಗಾರಪೇಟೆ ತಾಲೂಕು ಪ್ರವೀಣ್, ಮುಳಬಾಗಿಲು ಗೌರವಾಧ್ಯಕ್ಷ ಶಫಿ ಉಲ್ಲಾ ಉಪಸ್ಥಿತರಿದ್ದರು.
