ಶ್ರೀರೇಣುಕಾ ಯಲ್ಲಮ್ಮ ದೇವಿಯ ತಿಂಗಳ ಹುಣ್ಣಿಮೆ ಪೂಜೆ
ಬಂಗಾರಪೇಟೆ, ಜು. ೨೫- ಪಟ್ಟಣದ ಗೌತಮ್ ನಗರ್ ದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ೧೩೮ ನೇ ತಿಂಗಳ ಹುಣ್ಣಿಮೆ ಪೂಜೆಯನ್ನು ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಸೇವಾ ಟ್ರಸ್ಟ್ ವತಿಯಿಂದ ಹಾಗೂ ಬಂಗಾರ ಪೇಟೆ ನಿವಾಸಿಗಳಾದ ಬಸಮ್ಮ ಶ್ರೀಮತಿ ಶಶಿಕಲಾ ಜಗದೀಶ್ ಕುಮಾರ್(ಯಡಿಯೂರಪ್ಪ ) ಮೌನೇಶ್, ಮಾಲೀಕರು – ಗುರು ಬಸವೇಶ್ವರ ಟೂರ್ರ್ಸ್ ಅಂಡ್ ಟ್ರಾವೆಲ್ಸ್, ಮತ್ತು ಕ್ಯಾಟರಿಂಗ್, ಮತ್ತು ದೇವಿ ಕುಮಾರಿ ಚರಣ್ ಃ ಇ ಒ ಐ ರವರ ಕುಟುಂಬದ ವತಿಯಿಂದ ಬೆಳಿಗ್ಗೆ ೭-೦೦ ಗಂಟೆಗೆ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಸಂಜೆ ೭ ಗಂಟೆಗೆ ಮಹಾಮಂಗಳಾರತಿ ಮತ್ತು ಅನ್ನದಾನ ವನ್ನು ಆಯೋಜಿಸಲಾಯಿತು.
ಹಾಗೂ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ,ಏರ್ಪಡಿಸಿದ್ದು ಬಹಳ ವಿಜೃಂಭಣೆ ಯಿಂದ ನಡೆಯಿತು.ಪೂಜಾ ಸೇವಕರ್ತರಾದ ಜಗದೀಶ್ ಕುಮಾರ್ ರವರು ಮಾತನಾಡಿ ತಾಯಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಆರಾಧನೆ ಯಿಂದ ಮನಸಿಗೆ ನೆಮ್ಮದಿ ಸಿಗುತ್ತದೆ. ಹಾಗೂ ನಮ್ಮ ಎಷ್ಟೋ ಕಷ್ಟಗಳು ಪರಿಹಾರವಾಗಿದೆ. ನಮ್ಮ ಕುಟುಂಬ ದ ಪ್ರತಿಯೊಬ್ಬರು ಸಹ ದೇವಾಲಯದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬರುತ್ತಿದ್ದೇವೆ. ಆದ್ದರಿಂದ ಎಲ್ಲರೂ ಸಹ ಭಕ್ತಿ ಭಾವದಿಂದ ದೇವಸ್ಥಾನ ಗಳಿಗೆ ಮೊರೆಹೊಗಬೇಕು ಎಂದರು.
ಟ್ರಸ್ಟಿನ ವತಿಯಿಂದ ಪೂಜಾ ಸೇವಾಕರ್ತರಾದ ಶಶಿಕಲಾ ಶ್ರೀ ಜಗದೀಶ್ ಕುಮಾರ್ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಟ್ರಸ್ಟಿನ ಅಧ್ಯಕ್ಷರು ಆದ ಎಂ ನಾರಾಯಣ ಸ್ವಾಮಿ, ಬಿ ಜಿ ವಿವೇಕಾನಂದ, ಗಜೇಂದ್ರ, ಉಪೇಂದ್ರ, ವಿ ನಾರಾಯಣ ಸ್ವಾಮಿ, ವೆಂಕಟಾಚಲಪತಿ, ದಯಾಕರ್, ಸತ್ಯ ನಾರಾಯಣ, ಚಲಪತಿ, ಅಶೋಕ್ ಕುಮಾರ್, ನಲ್ಲೂರು ರಮೇಶ್, ಅರ್ಚಕರು ಷಣ್ಮುಗ ನಾಥನ್, ಕವಿ ವಿ ಲಕ್ಷ್ಮಯ್ಯ, ಹಾಗೂ ಭಕ್ತಾದಿಗಳು ಭಾಗವಸಿದ್ದರು.