ಮಹಾಪ್ರಬಂಧ ರಚನೆಯಲ್ಲಿ ಸಾಮಾಜಿಕ ವಿಷಯಗಳಿರಲಿ: ಅರವಿಂದ ಮಾಲಗತ್ತಿ
ಸಂಜೆವಾಣಿ ನ್ಯೂಸ್
ಮೈಸೂರು: ಜು.23:- ಮಹಾಪ್ರಬಂಧ ರಚಿಸುವಾಗ ಸಾಮಾಜಿಕ ವಿಷಯಗಳನ್ನು ಸೇರಿಕೊಂಡಾಗ ಮಾತ್ರ ಸಂಶೋಧನ ಮೌಲ್ಯವೂ ಹೆಚ್ಚುತ್ತದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪೆÇ್ರ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ ಸಂಶೋಧನಾ ವಿದ್ಯಾರ್ಥಿ ವೇದಿಕೆ ಅರಿವು ಉದ್ಘಾಟನೆ ಹಾಗೂ ಶತಮಾನಕ್ಕೆ ಮುನ್ನುಡಿ ಬ್ಲಾಗ್ ಅನಾವರಣವನ್ನು ಮಾಡಿ ಅವರು ಮಾತನಾಡಿದರು.
ಸಂಶೋಧನೆಯಲ್ಲಿ ಸಿದ್ಧ ಮಾದರಿ ಅನ್ನುವುದಿಲ್ಲ. ವಿಷಯದ ಅಳಕ್ಕೆ ಇಳಿದಷ್ಟೂ ಹೊಸ ಮಾದರಿಗಳು ಹುಟ್ಟುಕೊಳ್ಳುತ್ತವೆ. ಸ್ವ ಮಾನದಂಡಗಳನ್ನು ಯಾರೂ ಕಂಡುಕೊಳ್ಳುತ್ತಾರೋ ಅವರು ಮೂಲಭೂತವಾಗಿ ಉತ್ಕೃಷ್ಟ ಸಂಶೋಧಕರಾಗಿ ಹೊರಹೊಮ್ಮುತ್ತಾರೆ. ಸಾಂದರ್ಭಿಕ ಸಂಶೋಧನೆಗಳು ಉತ್ತಮ. ನಿರ್ದಿಷ್ಠ ಸಂಶೋಧನೆ ಅನ್ನುವುದು ಅಧ್ಯಯನ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಆದರೆ ಪೂರ್ವಗ್ರಹವಾಗಿ ಸಂಶೋಧನೆ ಮಾಡಲು ಹೋಗಬಾರದು. ಜಾತಿ ಬಿಟ್ಟು ಸಂಶೋಧಕರಾಗಿ ಕೆಲಸ ಮಾಡಬೇಕು.ಸಮಾಜಮುಖಿಯಾಗಿ ಸಂಶೋಧನೆಗಳಾಗಬೇಕಿದೆ. ಇಲ್ಲದಿದ್ದರೇ ಮಹಾಪ್ರಬಂಧ ಕಸವೇ ಹೊರತು ಸಂಶೋಧನೆ ಎನಿಸಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಪಿಎಚ್‍ಡಿ ಮಾಡುವವರು ಸಂಶೋಧನೆಯನ್ನು ಸಮಾಜನಿಷ್ಠಗೊಳಿಸಿಕೊಳ್ಳಬೇಕಾಗಿದೆ ಎಂದರು.
ಕೇವಲ ಅಧ್ಯಯನವೇ ಸಂಶೋಧನೆ ಅಲ್ಲ. ವಿಮರ್ಶೆ, ವಿಶ್ಲೇಷಣೆಗಳೂ ಸಂಶೋಧನೆಯ ಅಂಗಗಳು. ಸಂಶೋಧನೆ ಎನ್ನುವುದು ಒಂದು ಹೊಳಹು ಅಷ್ಟೆ. ಈ ಹೊಳಹುಗಳ ಬೆನ್ನತ್ತಿ ಸಂಶೋಧಕರು ಅಧ್ಯಯನಶೀಲರಾಗಿ ಸಂಶೋಧನೆ ಮಾಡಬೇಕಾಗಿದೆ. ಗುಣಮಟ್ಟದ ಸಂಶೋಧನೆಗಳು ಹೊರಬರಬೇಕಾದರೇ ಕನಿಷ್ಠ ಪಕ್ಷ ಪದವಿ ವ್ಯಾಸಂಗದ ಸಮಯದಿಂದಲೇ ಸಂಶೋಧನೆ ಕುರಿತು ಪಾಠ ಮಾಡಿ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಇಲ್ಲವಾದರೆ ಸಂಶೋಧನೆಯ ಗುಣಮಟ್ಟ ಕಡಿಮೆಯಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳೆಲ್ಲರೂ ಮೂಲಭೂತವಾಗಿ ಸಂಶೋಧಕರಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಶತಮಾನದ ಮುನ್ನುಡಿ ಎನ್ನುವ ಹೆಸರಿನಿಂದ ಪ್ರಾರಂಭಿಸಿರುವ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬ್ಲಾಗ್ ಕೇವಲ ಅಧ್ಯಯನ ಸಂಸ್ಥೆಯ ಬ್ಲಾಗ್ ಆಗಿ ಉಳಿಯಬಾರದು. ರಾಜ್ಯಕ್ಕೆ ವಿಸ್ತಾರ ಗೊಳ್ಳಬೇಕು. ದಿನ ನಿತ್ಯ ಚಟುವಟಿಯಿಂದ ಕೂಡಿರಬೇಕು. ನಿರಂತರವಾಗಿ ಹರಿಯುವ ನೀರಿನಂತೆ ಇರಬೇಕು. ವಿವಿಯಲ್ಲಿ ಏನೇ ವಿಷಯಗಳು ಇದ್ದರೂ ಬ್ಲಾಗ್‍ನಲ್ಲಿ ಚರ್ಚೆಗೆ ಒಳಪಡಿಸಿ. ವಿಚಾರದಲ್ಲಿ ಮಡಿವಂತಿಕೆಯನ್ನು ಇಟ್ಟುಕೊಳ್ಳಬಾರದು. ಎಲ್ಲವನ್ನೂ ಸಮಾನಾಗಿ ಸ್ವೀಕರಿಸಿ ಚರ್ಚೆಗೆ ಒಳಪಡಿಸಬೇಕು. ಯಾವುದೇ ಭಾಷೆಗೆ ಸಂಬಂಧಿಸಿದ ವಿಷಯಗಳನ್ನು ಬ್ಲಾಗ್‍ನಲ್ಲಿ ವಿಸ್ತರಿಸಿಕೊಳ್ಳಿ, ಇದರಿಂದ ನೀವೂ ಸಂಶೋಧನಾ ವಿದ್ಯಾರ್ಥಿಗಳು ವಿಸ್ತಾರಗೊಳ್ಳಬಹುದು ಎಂದು ಕಿವಿಮಾತನ್ನೂ ಹೇಳಿದರು.
ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಿ ಪೆÇ್ರ.ಎನ್.ಕೆ.ಲೋಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಾರಾಂಗ ನಿರ್ದೇಶಕ ಪೆÇ್ರ.ಎಂ.ನಂಜಯ್ಯ ಹೊಂಗನೂರು, ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಅಧ್ಯಕ್ಷೆ ಪೆÇ್ರ.ಎಸ್.ಡಿ.ಶಶಿಕಲಾ, ಡಾ.ಎಸ್.ರೇಣುಕಾ, ಡಾ.ಎಚ್.ಎಲ್.ಶೈಲಾ, ಡಾ.ಕೆ.ಎಂ.ವರದರಾಜನ್, ಡಾ.ಕೆ.ಎಸ್ ಅಜಿ ಮತ್ತಿತರರು ಹಾಜರಿದ್ದರು.