ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಳ ಸಭಾಭವನ ಉದ್ಘಾಟನೆ
ಸಂಜೆವಾಣಿ ವಾರ್ತೆ
ಹನೂರು ಜು 23 :- ಪಟ್ಟಣದಲ್ಲಿ “ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಳ ಸಭಾಭವನ”ದ ಉದ್ಘಾಟನೆಯನ್ನು ಬಾಳೆ ಹೊನ್ನೂರು ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನ ಪೀಠ ಜಗದ್ಗುರು ರಂಭಾಪುರಿ ವೀರ ಸಿಂಹಾಸನಾಧೀಶ್ವರ ಡಾ. ವೀರ ಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ರವರು ನೇರವೇರಿಸಿದರು.
ನೂತನ ಭವನದ ಉದ್ಘಾಟನೆಯನ್ನು ನೆರವೇರಿಸಿದ ಶ್ರೀ ವೀರ ಸಿಂಹಾಸನ ಜಗದ್ಗುರು ರಂಭಾಪುರಿ ಶ್ರೀಗಳು ಮಾತನಾಡಿ ಹನುರು ಪಟ್ಟಣದಲ್ಲಿರುವ ಚಿಕ್ಕಮಠವು ಶ್ರೀ ಧನಗೂರು ವೀರ ಸಿಂಹಾಸನ ಸಂಸ್ಥಾನ ಮಠಕ್ಕೆ ಸೇರಿದ ಶಾಖ ಮಠ ವಾಗಿದ್ದು ತನ್ನದೇ ಆದ ಧಾರ್ಮಿಕ ಪರಂಪರೆ ಇತಿಹಾಸವನ್ನು ಹೊಂದಿದೆ. ಪ್ರಸ್ತುತ ಗೌರಿ ದೇವಿಯ ಪ್ರತಿಷ್ಠಾಪನೆಗಾಗಿ ಗೌರಿಗುಡಿ ಹಾಗೂ ಸಾಮಾಜಿಕ ಧಾರ್ಮಿಕ ಮಂಗಳ ಕಾರ್ಯಗಳಿಗಾಗಿ ಉತ್ತಮ ಸೇವಾ ಕಾರ್ಯ ಚಟುವಟಿಕೆಗಳಿಗೆ ಭವನ ಸದ್ಬಳಕೆಯಾಗಲಿ ಎಂದು ಆಶೀರ್ವಚನ ನೀಡಿದರು.
ಪಟ್ಟಣದಲ್ಲಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ ಜಗದ್ಗುರುಗಳ ಸಾರೋಟ ಮೆರವಣಿಗೆ ಬೆಳ್ಳಿರಥದ ಮೂಲಕ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮಹಿಳೆಯರ ಪೂರ್ಣಕುಂಭ ಹಾಗೂ ವೀರಗಾಸೆಯ ಕಲಾತಂಡದೊಂದಿಗೆ ವಾದ್ಯ ಮೇಳದೊಂದಿಗೆ ವಿಜೃಂಭಣೆಯಿಂದ ಸಂಭ್ರಮಾ ಸಡಗರದಿಂದ ಜರುಗಿತು.
ವೀರಭದ್ರಸ್ವಾಮಿ ಅಧ್ಯಕ್ಷರು ಮತ್ತು ಮಹದೇವಸ್ವಾಮಿ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿಸಲಾಗಿತ್ತು.
ದಿವ್ಯ ಸಮ್ಮುಖದಲ್ಲಿ ಕನಕಪುರ ತಾಲೂಕು ಮರಳೆಗವಿಮಠ ನಿ.ಪ್ರ.ಸ್ವ. ಡಾ. ಶ್ರೀ ಮುಮ್ಮಡಿ ಶಿವರುದ್ರಸ್ವಾಮಿಗಳು, ಮಲೈ ಮಹದೇಶ್ವರ ಬೆಟ್ಟ ಶ್ರೀ ಸಾಲೂರು ಬೃಹನ್ಮಠಾಧ್ಯಕ್ಷರು ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ಧನಗೂರು ವೀರ ಸಿಂಹಾಸನ ಮಠ ಶ್ರೀ ಮುಮ್ಮಡಿ ಷಡಕ್ಷರದೇಶಿಕೇಂದ್ರ ಶಿವಾಚಾರ್ಯಸ್ವಾಮಿಗಳು ಅವರ ಸಮ್ಮುಖದಲ್ಲಿ ಕಾರ್ಯಕ್ರಮಗಳು ಜರಗಿತು.
ಈ ಸಂದರ್ಭದಲ್ಲಿ ಅಜ್ಜಿಪುರ ಪಟ್ಟದ ಮಠ ಶ್ರೀ ನಂದೀಶಶಿವಾಚಾರ್ಯಸ್ವಾಮಿಗಳು, ಮುಡುಕುತೊರೆ ತೋಪಿನ ಮಠ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಬಂಡಳ್ಳಿ ದೊಡ್ಡಮಠ ಶ್ರೀ ಡಾ. ಫಲಹಾರಪ್ರಭುದೇವಸ್ವಾಮಿಗಳು, ಕುಂದೂರು ದೊಡ್ಡಮಠ |ಶ್ರೀ ಇಮ್ಮಡಿ ಬಸವರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು, ಪೂರಿಗಾಲಿ ಮಠ ಶ್ರೀ ಶಿವಾನಂದ ಶಿವಾಚಾರ್ಯಸ್ವಾಮಿಗಳು, ಗವಿಮಠಚಿದರವಳ್ಳಿಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಮದುವನಹಳ್ಳಿ ಜಾಲಿಕಂತೆ ಮಠ ಶ್ರೀ ಶಿವಕುಮಾರಸ್ವಾಮಿಗಳು, ದೇವಪಟ್ಟಣ ಮಠ ಶ್ರೀ ಶಾಂತಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು, ಸೋಸಲೆ ತೋಪಿನ ಮಠ ಶ್ರೀ ಇಮ್ಮಡಿ ಷಡಕ್ಷರಸ್ವಾಮಿಗಳು, ಗೋಪಿ ಶೆಟ್ಟಿಯವರು ಪಟ್ಟದ ಮಠಧ ಶ್ರೀ ಬಸವಣ್ಣಸ್ವಾಮಿಗಳು,
ಗುಂಡೆಗಾಲ ಮಠ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿಗಳು, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಸಮಾಜ ಸೇವಕ ನಿಶಾಂತ್, ಹನೂರು ಪಟ್ಟಣದ ಬಿಕ್ಷದ ಮಠಾಧ್ಯಕ್ಷರು ಹಾಗೂ ಶ್ರೀ ಮದ್ದೀರಶೈವ ಸದ್ಧರ್ಮ ಸಮಾಜ ಟ್ರಸ್ಟ್ ನ ಅಧ್ಯಕ್ಷರು, ಸದಸ್ಯರುಗಳು ಮತ್ತು ಸಮಾಜದ ಜನಭಾಂದವರು ಹಾಗೂ ಇನ್ನಿತರ ಮಠದ ಸ್ವಾಮಿಗಳವರು ಹಾಜರಿದ್ದರು.