ಅಟಲಬಿಹಾರಿ ವಾಜಪೇಯಿ ಶಾಲೆಯಲ್ಲಿ ಮಕ್ಕಳ ಸಂಸತ್
ಸಂಜೆವಾಣಿ ವಾರ್ತೆ,
ವಿಜಯಪುರ,ಜು.23:ಮಕ್ಕಳು, ಮಕ್ಕಳಿಂದ, ಮಕ್ಕಳಿಗಾಗಿ ಆಯ್ಕೆಯಾದ ಸದಸ್ಯರ ಒಂದು ಸಂಸ್ಥೆ ಅಥವಾ ಸಂಘವೇ ಶಾಲಾ ಮಕ್ಕಳ ಸಂಸತ್ ಆಗಿದೆ. ಮಕ್ಕಳ ಸಂಸತ್‍ನಲ್ಲಿ ಮಕ್ಕಳೇ ಸಂಪೂರ್ಣ ಭಾಗೀದಾರರಾಗಿರುತ್ತಾರೆ. ತಮ್ಮ ಹಕ್ಕುಗಳನ್ನು ಪಡೆಯುವ ಮೂಲಕ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಕಲಿಯುವ ವೇದಿಕೆ. ಮಕ್ಕಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಣ ಮೌಲ್ಯವಾಗಿದೆ ಎಂದು ಸಂಸ್ಥೆಯ ಚೇರ್‍ಮನ್ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅಟಲ್ ಬಿಹಾರಿ ಶಾಲೆಯಲ್ಲಿ ಕುಮಾರ ಮಹೇಶ ಸಾತಿಹಾಳ ನಾಯಕ ವಿಧ್ಯಾರ್ಥಿಯಾಗಿ ಹಾಗೂ ಕುಮಾರಿ ಸಮನ್ವಿತಾ ಪೂಜೇರಿ ವಿಧ್ಯಾರ್ಥಿನಿ ನಾಯಕಿಯಾಗಿ ಆಯ್ಕೆಯಾಗಿ ಶಾಲಾ ಕರ್ತವ್ಯಗಳನ್ನು ಪಾಲಿಸುವುದಾಗಿ ಶಾಲಾ ಮುಖ್ಯ ಗುರುಗಳ ನೇತೃತ್ವದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇವರ ಮೆಚ್ಚುಗೆಯನ್ನು ಕಂಡು ಶ್ರೀ ಸಿದ್ದೇಶ್ವರ ಸಂಸ್ಥೆಯ ಅದ್ಯಕ್ಷರಾದ ಹಾಗೂ ವಿಜಯಪುರದ ಶಾಸಕರಾದ ಶ್ರೀ ಬಸನಗೌಡ ಆರ್ ಪಾಟೀಲ್ ( ಯತ್ನಾಳ),ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಶ್ರೀ ಸಿದ್ದೇಶ್ವರ ಸಂಸ್ಥೆಯ , ಶಾಲಾ ನಾಮನಿರ್ದೇಶಿತ ಅಧ್ಯಕ್ಷ ಬಸವರಾಜ ಸುಗೂರ , ಸಂಸ್ಥೆಯ ಗೌರವಾನ್ವಿತ ಹಣಕಾಸು ಕಾರ್ಯದರ್ಶಿ ಸದಾನಂದ ದೇಸಾಯಿ, ಜಂಟಿ ಕಾರ್ಯದರ್ಶಿ ಎಮ್.ಎಮ್ ಸಜ್ಜನ, ಸಂಸ್ಥೆಯ ಕೋಶಾಧಿಕಾರಿ ಶಿವಾನಂದ ನೀಲಾ ಮತ್ತು ಶಾಲಾ ಆಡಳಿತ ಅಧಿಕಾರಿ ಡಾ. ಎಚ್ ವೆಂಕಟೇಶ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಐಶ್ವರ್ಯ ಸಂಗಮ ಹರ್ಷ ವ್ಯಕ್ತಪಡಿಸಿದರು