ದಲಿತ ಸೇನೆ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ
ಕಾಳಗಿ.ಜು. 23: ಕರ್ನಾಟಕ ರಾಜ್ಯ ಸರಕಾರವು 2023-2024 ನೇ ಸಾಲಿನ ಎಸ್ ಸಿ ಎಸ್ ಪಿ – ಟಿಎಸ್ ಪಿ ಮೀಸಲು ಅನುದಾನವನ್ನು ಈಗಾಗಲೇ ಗ್ಯಾರಂಟಿ ಅನ್ಯ ಯೋಜನೆಗಳಿಗೆ ಬಳಸಿಕೊಂಡಿರುವ ಅನುದಾನವನ್ನು ಕೂಡಲೇ ಹಿಂಪಡೆದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣಕ್ಕೆ ಬಳಸಲು ಮತ್ತು ಪ. ಜಾತಿ ಪ. ಪಂಗಡ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹಧನ ತಡೆಹಿಡಿದಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡುವ ಮ?ಲಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ದಲಿತ ಸೇನೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಮಾಡಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ ರಸ್ತೆ ತಡೆದು ಪ್ರತಿಭಟಿಸಿದರು.
ಪ್ರತಿಭಟನೆ ಉದ್ದೇಶಿಸಿ ದಲಿತ ಸೇನೆ ತಾಲೂಕು ಅಧ್ಯಕ್ಷ ನಾಗರಾಜ ಬೇವಿನಕರ್ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಮಿಸಲಿಟ್ಟ ಅನುದಾನವನ್ನು ಗ್ಯಾರಂಟಿ ಹಾಗೂ ಅನ್ಯ ಯೋಜನೆಗಳಿಗೆ ಬಳಕೆ ಮಾಡಿರುವುದನ್ನು ಮರಳಿ ಹಿಂಪಡೆದು ಪ. ಜಾತಿ ಮತ್ತು ಪ. ಪಂಗಡದವರ ಕಲ್ಯಾಣಕ್ಕಾಗಿ ಬಳಕೆ ಮಾಡಬೇಕು. ಎಸ್ ಎಸ್ ಎಲ್ ಸಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದವರಿಗೆ ಪೆÇ್ರೀತ್ಸಹ ಧನವನ್ನು ನೀಡುವದನ್ನು ತಡೆಹಿಡಿದಿರುವದನ್ನು ಹಿಂಪಡೆದು ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ಧನವನ್ನು ಯಥಾ ಪ್ರಕಾರ ಪ್ರಾರಂಭಿಸಬೇಕು. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಮತ್ತು ಉನ್ನತ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ಧನ ನೀಡಲು ಕುಟುಂಬದ ವಾರ್ಷಿಕ ಆದಾಯ ಮಿತಿ 6 ಲಕ್ಷ ಮಿರಬಾರದೆಂಬ ಷರತ್ತು ವಿಧಿಸಿ 2023-24 ನೇ ಸಾಲಿನಿಂದ ಜಾರಿಗೆ ಬರುವಂತೆ ಸಮಾಜ ಕಲ್ಯಾಣ ಆದೇಶ ಹೊರಡಿಸಿದೆ ಈ ನಿಯಮವನ್ನು ರಾಜ್ಯ ಸರ್ಕಾರವು ಹಿಂಪಡೆದು ಈ ಮೊದಲ್ಲಿದ ನಿಯಮಗಳ್ಳನೇ ಮುಂದುವರಿಸಿ ವಿದ್ಯಾರ್ಥಿಗಳ ಹೆಚ್ಚಿನ ವಿದ್ಯಾಬ್ಯಾಸಕ್ಕಾಗಿ ಪೆÇ್ರೀತ್ಸಹ ಧನವನ್ನು ಮುಂದುವರಿಸಬೇಕು ಎಂದರು.
ದಲಿತ ಸೇನೆ ವಿ. ಒಕ್ಕೂಟ ಜಿಲ್ಲಾಧ್ಯಕ್ಷ ಮೋಹನ ಚಿನ್ನ ಮಾತನಾಡಿ, ತಾಲೂಕಿನಲ್ಲಿ ಹಾಡು ಹಗಲೇ ಅಕ್ರಮ ಸವಳು ಗಣಿಗಾರಿಕೆ ಮೂಲಕ ನೈಸರ್ಗಿಕ ಸಂಪತ್ತು ಲೂಟಿ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕಾಳಗಿ ತಾಲೂಕು ಘೋಷಣೆಯಾಗಿ 6-7ವರ್ಷ ಕಳೆದರೂ ಕೂಡ ಇನ್ನೂ ತಾಲೂಕಿಗೆ ಸಂಬಂಧಿಸಿದ ಕಛೇರಿಗಳು ಪ್ರಾರಭಿಸಿಲ್ಲ. ಇದರಿಂದ ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುವಂತಾಗಿದೆ ಸರ್ಕಾರ ಶೀಘ್ರವೇ ತಾಲೂಕು ಕಛೇರಿಗಳು ಪ್ರಾರಂಭಿಸಬೇಕು. ಕೊಡದೂರ, ಸಾಲಹಳ್ಳಿ, ಮಂಗಲಗಿ, ಟೆಂಗಳಿ, ಗಡಿಕೇಶ್ವರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ವಜ್ರಗಾಂವ್, ಗಡಿಕೇಶ್ವರ, ಸಾಲಹಳ್ಳಿ, ಟೆಂಗಳಿ, ಪಸ್ತಪೂರ, ಗಂಜಗೇರಾ ಗ್ರಾಮಗಳಲ್ಲಿ ಜೆಜೆಎಮ್ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ಇದನ್ನು ಪರೀಶಿಲನೆ ಮಾಡಿ ಗುಣಮಟ್ಟದ ಕಾಮಗಾರಿ ಮಾಡುವರೆಗೂ ಅನುದಾನ ತಡೆಹಿಡಿಯಬೇಕು. ಮಳೆಗಾಲದಿಂದ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಚರಂಡಿ ತುಂಬಿ ರಸ್ತೆಯ ಮೇಲೆ ಹರಿಯುತ್ತಿದ್ದು ಡೆಂಗೂ, ಮಲೇರಿಯಾ ರೋಗ ಹರಡುವುದಕ್ಕಿಂತ ಮೊದಲೇ ಗ್ರಾಮಾಡಳಿತ ಎಚ್ಚೆತ್ತು ಫಾಂಗಿಗ್, ಬ್ಲಿಚಿಂಗ್ ಫೌಡರ್ ಸಿಂಪರಣೆ ಮಾಡಿ ಸ್ವಚ್ಚತೆ ಕಾಪಾಡಬೇಕು. ಕುಡ್ಡಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಕೋಣೆಯಲ್ಲಿ ಪರ್ಸಿಗಳು ಕಿತ್ತುಹೊಗಿದ್ದು ಮಕ್ಕಳು ಮಣ್ಣಿನ ನೆಲದ ಮೇಲೆ ಕುಳಿತುಕೊಳ್ಳುವಂತಾಗಿದೆ ಶೀಘ್ರವೇ ದುರಸ್ತಿ ಮಾಡಬೇಕು. ಸರ್ಕಾರ ಉಚಿತ ರೇಶನ್ ನೀಡುತ್ತಿದ್ದರೂ ತಾಲೂಕಿನ ಎಲ್ಲಾ ಗ್ರಾಮಗಳ ನ್ಯಾಯಬೆಲೆ ಅಂಗಡಿ ವಿತರಕರು ಟೊಕನ್ ನೆಪದಲ್ಲಿ ಒಬ್ಬರಿಂದ 50ರಿಂದ 100ರೂ. ವಸೂಲಿ ಮಾಡುತ್ತಿದ್ದಾರೆ. ಪ್ರತಿ ಸದಸ್ಯನಿಗೆ 5ಕೆ.ಜಿ ಅಕ್ಕಿ ಬದಲು 3-4ಕೆ.ಜಿ ಅಕ್ಕಿ ವಿತರಣೆ ಮಾಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಹಣ ಪಡೆಯುತ್ತಿರುವ ನ್ಯಾಯಬೆಲೆ ಅಂಗಡಿಗಳ ಪರವಾನಿಗೆ ರದ್ದುಪಡಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳು ಬಗೆಹರಿಸುವಂತೆ ಆಗ್ರಹಿಸಿದರು.
ಇದೇ ವೇಳೆ ಗ್ರೇಡ್-2 ತಹಶಿಲ್ದಾರರ ರಾಜೇಶ್ವರಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ದಲಿತ ಸೇನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಖತಲಪ್ಪ ಅಂಕನ, ದಲಿತ ಸೇನೆ ತಾಲೂಕು ಚಿಂಚೋಳಿ ಅಧ್ಯಕ್ಷ ರಾಘವೇಂದ್ರ ಹೂವಿನಬಾವಿ, ರಮೇಶ್ ಕುಡ್ಡಳ್ಳಿ, ಜೈಭೀಮ ಸಂಗನ, ಮಲ್ಲು ಮಡಕಿ, ಮಾರುತಿ ತೆಗಲತಿಪ್ಪಿ, ಹಣಮಂತ ಸಾಲಹಳ್ಳಿ, ದೇವರಾಜ ಕೋಡ್ಲಿ, ಹಣಮಂತ ಸಂಗನ, ಕೃಷ್ಣ ತೆಂಗಳಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು.