ವಿಶ್ವ ವಿದ್ಯಾಲಯಗಳಲ್ಲಿ ಮತಿಯ ಭಾವನೆ ಉಂಟು ಮಾಡುತ್ತಿರುವ ಕಾಂಗ್ರೆಸ್ ನಡೆಗೆ ಅಷ್ಠಗಿ ಖಂಡನೆ
ಕಲಬುರಗಿ:ಜು.22:ರಾಷ್ಟ್ರದಲ್ಲಿ ಪ್ರಾಚೀನ ಕಾಲದಿಂದಲೂ ಶಾಲಾ ಕಾಲೇಜು ವಿಶ್ವವಿದ್ಯಾನಿಲಯಗಳಲ್ಲಿ ಸರಸ್ವತಿ ಪೂಜೆ ಗುರುವಂದನ, ರಾಷ್ಟ್ರ ನಾಯಕರ ಪೂಜೆಗಳು ಸರ್ವೇಸಾಮಾನ್ಯವಾಗಿವೆ. ಎಲ್ಲಾ ಕಡೆಯೂ ವಿದ್ಯಾರ್ಥಿಗಳು ವಿವಿಧ ಧರ್ಮಕ್ಕೆ ಸೇರಿದವರಾಗಿದ್ದು, ಅವರಿಗೆ ಸಂವಿಧಾನಬದ್ಧವಾಗಿ ತಮ್ಮ ತಮ್ಮ ಧರ್ಮಗಳ ಆಚರಣೆ ಮಾಡುವ ಸಂವಿಧಾನ ಬದ್ಧ ಹಕ್ಕು ಇರುತ್ತದೆ. ಆದರೆ ಕಡೆಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವ್ಯಾಸ ಮಹರ್ಷಿ ಸ್ಮರಣೆಯ ಗುರು ಪೂಜಾ ಕಾರ್ಯಕ್ರಮಕ್ಕೆ ಕೋಮು ಬಣ್ಣ ಹಚ್ಚುತ್ತಿರುವ ಕಾಂಗ್ರೆಸ್ನ ನಡೆ ಸರಿಯಲ್ಲ.
ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮು ಭಾವನೆ ತುಂಬುವಂತಹ ಕೀಳು ಮಟ್ಟದ ರಾಜಕೀಯ ಕಾಂಗ್ರೆಸ್ ಪಕ್ಷ ಮಾಡುತ್ತಿದ್ದು ಇದನ್ನು ನಿಲ್ಲಿಸಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಅಂಬಾರಾಯ ಅಷ್ಠಗಿ ಹಾಗೂ ಕಲ್ಬುರ್ಗಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮರೆಪ್ಪ ಬಡಿಗೇರ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಗುರು ಪೂರ್ಣಿಮೆ ಆಚರಣೆಗೆ ವಿಶೇಷ ಮಹತ್ವವಿದ್ದು ಬೌದ್ಧರು ಜೈನರು ಮತ್ತು ಹಿಂದುಗಳು ಈ ಪವಿತ್ರ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ. ಹಿಂದೂಗಳ ಹಾಗೂ ಇತರೆ ಧರ್ಮಿಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಹ ಯಾವುದೇ ಕಾರ್ಯವನ್ನು ನಾವು ಸಹಿಸುವುದಿಲ್ಲ.ಆದ್ದರಿಂದ
ಕಾಂಗ್ರೆಸ್ ಪಕ್ಷವು ವಿದ್ಯಾರ್ಥಿಗಳ ಹಕ್ಕುಗಳಿಗೆ ಚ್ಯುತಿ ತರುವಂತಹ ಕೆಲಸ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಮಾಡುತ್ತಿದ್ದು ಇದು ಖಂಡನಾರ್ಹವಾಗಿದ್ದು, ವಿನಾಕಾರಣ ಕೋಮು ಭಾವನೆ ಉಂಟು ಮಾಡುವಂತಹ ಕಾರ್ಯವನ್ನು ರಾಜ್ಯದಲ್ಲಿ ಕಾಂಗ್ರೆಸ್ ಮಾಡುತ್ತಿದ್ದು ಈ ಕೂಡಲೇ ಅದನ್ನು ನಿಲ್ಲಿಸಬೇಕೆಂದು ಅಂಬಾರಾಯ ಅಷ್ಠಗಿ ಹಾಗೂ ಮರೆಪ್ಪ ಬಡಿಗೇರ್ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.