ಗಣಿತಶಾಸ್ತ್ರದ ಮಹತ್ವದ ಸ್ಥಿರ ಚಿಹ್ನೆπ
ಕಲಬುರಗಿ:ಜು.22:ಗಣಿತಶಾಸ್ತ್ರ ಕೇವಲ ಅದೊಂದು ವಿಷಯವಾಗಿರದೆ,ಜೀವನಕ್ಕೆತುಂಬಾ ಹತ್ತಿರವಾಗಿದೆ. ಲೆಕ್ಕಾಚಾರವಿಲ್ಲದ ಬದುಕು ಪರಿಪೂರ್ಣವಾಗಲಾರದು.ಗಣಿತಅಧ್ಯಯನವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿಕಾರ್ಯಮಾಡುತ್ತದೆ. ಪೈ(π)ಒಂದುಗಣಿತಶಾಸ್ತ್ರದ ಮಹತ್ವದ ಸ್ಥಿರ ಚಿಹ್ನೆಯಾಗಿದ್ದು, ಅದರ ಮೊತ್ತ3.142. ಇದು ವೃತ್ತದ ಸುತ್ತಳತೆ ಮತ್ತು ವ್ಯಾಸದಅನುಪಾತವಾಗಿದೆ. ಇದನ್ನುಗಣಿತಶಾಸ್ತ್ರಜ್ಞ ವಿಲಿಯಂಜೋನ್ಸ್ ವ್ಯಾಪಕವಾಗಿ ಬಳಸಿ, ಪ್ರಸಿದ್ಧಗೊಳಿಸಿದ್ದಾರೆ ಎಂದುಉಪನ್ಯಾಸಕಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಖಾದಿ ಚೌಕ್‍ನಲ್ಲಿರುವ’ಸಕ್ಸಸ್‍ಕಂಪ್ಯೂಟರತರಬೇತಿಕೇಂದ್ರ’ದಲ್ಲಿ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಜರುಗಿದ ‘ಪೈ ದಿನಾಚರಣೆ’ಯಲ್ಲಿಅವರು ಮಾತನಾಡುತ್ತಿದ್ದರು.
ಗಣಿತಎನ್ನುವದುಕಬ್ಬಿಣದಕಡಲೆಯಲ್ಲ. ಅದನ್ನುತುಂಬಾಆಸಕ್ತಿಯಿಂದಅಧ್ಯಯನ ಮಾಡಿದರೆ ಸರಳವಾಗಿದೆ. ಇದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಮೂಡಿರುವ ಭಯವನ್ನು ಶಿಕ್ಷಕರು ಮತ್ತು ಪಾಲಕರು ಹೋಗಲಾಡಿಸಬೇಕು. ಗಣಿತದಿಂದತಾರ್ಕಿಕ ಸಾಮಥ್ರ್ಯ ವೃದ್ಧಿಯಾಗುತ್ತದೆ. ‘ಪೈ’ನ ಮೊತ್ತ3.14 ಆಗಿರುವುದರಿಂದ ‘3’ನ್ನು ಮಾರ್ಚ್ ತಿಂಗಳಾಗಿ, ’14’ನ್ನು ದಿನಾಂಕವನ್ನಾಗಿ ಪರಿಗಣಿಸಿ ಈ ದಿನವನ್ನು ಮಾರ್ಚ-14ರಂದು ಆಚರಿಸಲಾಗುತ್ತದೆಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯಅಧ್ಯಕ್ಷಅಸ್ಲಾಂ ಶೇಖ್, ಸೈಯದ್ ಹಮೀದ್, ಸೊಹೆಲ್ ಶೇಖ್ ಸೇರಿದಂತೆ ಮತ್ತಿತರರಿದ್ದರು.