ನಾಗಠಾಣದಲ್ಲಿ ರಾಷ್ಟ್ರೀಯ ಧ್ವಜ ಸ್ವೀಕಾರ ದಿನ ಆಚರಣೆ
ವಿಜಯಪುರ,ಜು. 22:ರಾಷ್ಟ್ರೀಯ ಧ್ವಜ ಸ್ವೀಕಾರ ದಿನ. ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಮಕ್ಕಳಾದ ಅನುಶ್ರೀ, ಶ್ರೀನಿಧಿ, ಸಾಕ್ಷಿ, ದೀಪಾ, ಪವಿತ್ರಾ, ಶಾಂತಮ್ಮ, ಸಾಕ್ಷಿ ಅವರು ರಾಷ್ಟ್ರಧ್ವಜ ಪ್ರದರ್ಶಿಸಿ ಗಮನ ಸೆಳೆದರು.
ನಮ್ಮ ಭಾರತದ ರಾಷ್ಟ್ರೀಯ ಧ್ವಜವು ಮೇಲ್ಭಾಗದಲ್ಲಿ ಕೇಸರಿ, ಮಧ್ಯದಲ್ಲಿ ಬಿಳಿ ಮತ್ತು ಕೆಳಭಾಗದಲ್ಲಿ ಕಡು ಹಸಿರು ಬಣ್ಣ ಹೊಂದಿದ್ದು, ತ್ರಿವರ್ಣ ಧ್ವಜವಾಗಿದೆ. ಬಿಳಿಭಾಗದ ಮಧ್ಯದಲ್ಲಿ ಅಶೋಕ ಚಕ್ರವನ್ನು ಹೊಂದಿದೆ. ರಾಷ್ಟ್ರವನ್ನು ಪ್ರತಿನಿಧಿಸುವ ಭಾರತೀಯ ಧ್ವಜದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಜುಲೈ 22 ರಂದು ರಾಷ್ಟ್ರೀಯ ಧ್ವಜ ಸ್ವೀಕಾರ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.1947 ರ ಜುಲೈ 22 ರಂದು ಸಂವಿಧಾನ ಸಭೆಯಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ಅಳವಡಿಸಿಕೊಳ್ಳಲಾಯಿತು.
ಧ್ವಜದಲ್ಲಿರುವ ಕೇಸರಿ ಬಣ್ಣವು ಭಾರತೀಯರ ಧೈರ್ಯ, ತ್ಯಾಗ ಮತ್ತು ಆತ್ಮವನ್ನು ಪ್ರತಿನಿಧಿಸುತ್ತದೆ. ಬಿಳಿ ಬಣ್ಣವು ಶಾಂತಿ, ಸತ್ಯ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಹಸಿರು ಬಣ್ಣವು ಸಮೃದ್ಧಿ, ಬೆಳವಣಿಗೆ ಮತ್ತು ಫಲವತ್ತತೆಯನ್ನು ಪ್ರತಿನಿಧಿಸುತ್ತದೆ.
ಅಶೋಕ ಚಕ್ರದ ಕಡ್ಡಿಗಳು ದಿನದ ಇಪ್ಪತ್ನಾಲ್ಕು ಗಂಟೆಗಳನ್ನು ಪ್ರತಿನಿಧಿಸುವುದರಿಂದ ಈ ಚಕ್ರವನ್ನು ‘ಸಮಯದ ಚಕ್ರ’ ಎಂದೂ ಕೂಡಾ ಕರೆಯಲಾಗುತ್ತದೆ.
ಭಾರತೀಯ ಧ್ವಜವು ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯ ಸಂಕೇತವಾಗಿದೆ. ಇದು ಜನರಿಗೆ ಸ್ಫೂರ್ತಿಯ
ಮೂಲವಾಗಿದೆ. ಇದು ಭಾರತದ ಸ್ವಾತಂತ್ರ್ಯವನ್ನು ಸಾಧಿಸಲು ಮಾಡಿದ ತ್ಯಾಗವನ್ನು ನೆನಪಿಸುತ್ತದೆ. ಇದು ಇತಿಹಾಸ ಮತ್ತು ಸಂಸ್ಕøತಿಯನ್ನು ನೆನಪಿಸಿ, ಭಾರತಕ್ಕೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ.