ಬೀದಿ ವ್ಯಾಪಾರಿಗಳ ಬೇಡಿಕೆಗೆ ಆಗ್ರಹಿಸಿ ವಿನೂತನ ಪ್ರತಿಭಟನೆ
ಕಲಬುರಗಿ, ಜು.22- ಮಹಾನಗರದ ಬೀದಿ ಬದಿ ವ್ಯಾಪಾರಿಗಳಿಗೆ ಅಗತ್ಯ ನೆರವು ಮತ್ತು ಮೂಲ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟನ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ನೆತೃತ್ವದಲ್ಲಿ ಬೃಹತ ಪ್ರತಿಭಟನಾ ಮೆರವಣಿಗೆಯ ಮೂಲಕ ತೆರಳಿ ಮಹಾನಗರ ಪಾಲಿಕೆಯ ಎದುರು ಗೊಲಿ-ಗೋಟಿ ಆಡುವ ಮೂಲಕ ವಿನೂತನ ಪ್ರತಿಭಟನೆ ಕೈಗೊಳ್ಳಲಾಯಿತು.
ಈಗಾಗಲೇ ಪಾಲಿಕೆಯಿಂದ ನೀಡಿಲಾದ ಗೂಡಂಗಡಿ ಸ್ಥಳಗಳಲ್ಲಿಯೇ ವ್ಯಾಪಾರ ಮಾಡಲು ಬೀದಿ ವ್ಯಾಪಾರಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಮತ್ತು 2014, 2019 ಕಾಯ್ದೆಯನ್ವಯ ಎಲ್ಲ ನೆರವು ಮತ್ತು ಸೌಲಭ್ಯ ನೀಡÀಬೇಕು ಎಂದು ಪ್ರತಿಭಟನೆ ನೆತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂತಿ ಅವರು, ಒತ್ತಾಯಿಸಿದರು.
ಡೇ-ನಲ್ಕ್ ಯೋಜನೆ ಆಯುಕ್ತಾಲಯ ಉದ್ಯಮಶೀಲತೆ ಮತ್ತು ಜೀವನೋಪಾಯ ಅಭಿಯಾನ ನಿರ್ದೇಶಕರು ದಿನಾಂಕ: 08.01.2019ರಂದು ದೀನದಯಾಳ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ನಗರದ ಬೀದಿ ವ್ಯಾಪಾರಸ್ಥರ ಬೆಂಬಲ ಉಪಘಟಕದಡಿ ಬೀದಿಬದಿ ವ್ಯಾಪಾರಸ್ಥರ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ಬಿಡುಗಡೆಗೊಳಿಸಬೇಕು.
ಕಲಬುರಗಿ ಮಹಾನಗರ ಪಾಲಿಕ ವ್ಯಾಪ್ತಿಯಲ್ಲಿನ ಎಲ್ಲ ಬೀದಿ ವ್ಯಾಪಾರಿಗಳಿಗೆ ಪರವಾನಿಗೆ ನೀಡಬೇಕು ಮತ್ತು ಬೀದಿ ವ್ಯಾಪಾರಿಗಳ ಅಭಿವೃದ್ದಿಗಾಗಿ ಮಿಸಲಿಟ್ಟ 50 ಲಕ್ಷ ರೂ.ಗಳ ವಿಶೇಷ ಅನುದಾನವನ್ನು ವಿಳಂಭ ಮಾಡದೇ ಸಮರ್ಪಕವಾಗಿ ಬಳಕೆ ಮಾಡಬೇಕು.
ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಿಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಲಯದ ಜಿಲ್ಲಾ ನಗರಾಭಿವೃದ್ಧಿ ಕೋಶ, ಕಲಬುರಗಿ ವತಿಯಿಂದ ಕೂಡ ಸೂಕ್ತವಾದ ನಿರ್ದೇಶನದನ್ವಯ ತಕ್ಷಣವೇ ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲು ಪಾಲಿಕೆ ಮತ್ತು ಪೆÇಲೀಸ್ ಆಯುಕ್ತರು ಮುಂದಾಬೇಕು.
ಸುಪರ ಮಾರುಕಟ್ಟೆ ಚೌಪಟ್ಟಿ, ಹಳೇ ಜೈಲ್ ಪ್ರದೇಶದಲ್ಲಿ ವ್ಯಾಪಾರ ನಡೆಸಲು ಈಗಾಗಲೇ 250 ಜನರ ಬೀದಿ ವ್ಯಾಪಾರಿಗಳಿಗೆ ಮಂಜೂರು ಮಾಡಲಾಗಿರುವ ನಿಗಧಿಪಡಿಸಲಾದ ಸÀ್ಥಳಗಳÀಲ್ಲಿಯೇ ವ್ಯಾಪಾರ ನಡೆಸಲು ತುರ್ತಾಗಿ ಅಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು.
ನಗÀರದ ಕಣ್ಣಿ ಮಾರ್ಕೇಟ್, ಕೆ.ಎಂ.ಎಫ್, ಡೈರಿ, ರಾಮಮಂದಿರ, ಶಹಾಬಜಾರ, ಖರ್ಗೆ ಬಂಕ್, ಈ ಪ್ರದೇಶಗಳಲ್ಲಿನ ಮಂದಿರ ಈ ಪ್ರದೇಶದಲ್ಲಿ ರಸ್ತೆ ಮದ್ಯದಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರನ್ನು ಪ್ರತ್ಯೇಕವಾಗಿ ಸ್ಥಳಗಳನ್ನು ನಿಗಧಿಪಡಿಸಿ ಅವರು ತಮ್ಮ ವ್ಯಾಪಾರ ಮುಂದುವರೆಸಲು ಅನುಕೂಲ ಮಾಡಿಕೊಡಬೇಕು.
ಪ್ರಮುಖ ಹಬ್ಬಗಳಾದ ದಸರಾ, ದೀಪಾವಳಿ, ಗಣೇಶ ಚತುರ್ತಿ, ರಮಜಾನ್ ಇತರ ಧಾರ್ಮಿಕ ಹಬ್ಬಗಳಲ್ಲಿ ಮಹಿಳೆಯರು ಪೂಜಾ ಸಾಮಾನುಗಳು ಆಗಿರಬಹುದು, ಅಥವಾ ಯಾವುದೇ ವಸ್ತು ಖರೀದಿ ಮಾಡಲು ಆಗಮಿಸುವ ಗ್ರಾಹಕರಿಗೆ ಆಗುತ್ತಿರುವ ಕಳ್ಳತನ, ಮೋಬೈಲ್ ಮತ್ತು ಹಣದ ಕಳ್ಳತನ, ಸೇರಿದಂತೆ ವಂಚನೆಗಳನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು ಎಂಬ ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಪಾಲಿಕೆ ಆಯುಕ್ತರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಚಂದ್ರಾಹಾಸ ಜಿತ್ರೆ, ಕನ್ನಡಪರ ಹೋರಾಟಗಾರರಾದ ಮಂಜುನಾಥ ನಾಲ್ವಾರಕರ, ಸಚೀನ್ ಫರಹತಾಬಾದ, ದತ್ತು ಭಾಸಗಿ, ರವಿ ಧಿಗ್ಗಾವಿ, ಸಂದೀಪ ಭರಣಿ, ಆನಂತ ತೇಗನೂರ, ನಿರಂಜನ್, ಮನೋಹರ ಬಿದನೂರ, ವೆಂಕಟೇಶ ಕಾಂಬಳೆ, ಬಾಬು ಪರೀಟ ಸೇರಿದಂತೆ ಹಲವರಿದ್ದರು. ಅಲ್ಲದೇ ಕನ್ನಡಪರ ಸಂಘಟನೆಗಳು ಹಾಗೂ ಚಪ್ಪಲ ಬಜಾರ, ಸರಾಫ್ ಬಜಾರ, ಕಿರಾಣ ಬಜಾರ, ಕಪಡಾ ಬಜಾರ, ದತ್ತ ಮಂದಿರ ಜನತಾ ಬಜಾರ, ಸಿಟಿ ಬಸ್ ಸ್ಟ್ಯಾಂಡ್ ರಸ್ತೆಗಳ ಮತ್ತು ಪುಟ್-ಪಾಥ ಬಿದಿ ವ್ಯಾಪಾರಿಗಳು ಭಾಗವಹಿಸಿದ್ದರು
ಮತ್ತು ಚಂದ್ರಾಹಾಸ ಜಿತ್ರೆ ಅಶೋಕರೆಡ್ಡಿ, ಲಿಂಗರಾಜ ಕಡೆ ಮತ್ತು ಕನ್ನಡಪರ ಹೋರಾಟಗಾರರಾದ ಸಚೀನ್ ಫರಹತಾಬಾದ, ದತ್ತು ಭಾಸಗಿ, ಮಂಜುನಾಥ ನಾಲವಾರಕ, ವಿಎಚ್ ವಾಲಿಕಾರ, ವೆಂಕಟೇಶ ಕಾಂಬಳೆ, ಬಾಬು ಪರೀಟ ಸೇರಿದಂತೆ ಹಲವರಿದ್ದರು.