ಕಲಬುರಗಿ, ಯಾದಗಿರ ಜಿಲ್ಲೆ: ಆಯುಷ್ಮಾನ್ ಯೋಜನೆಯಲ್ಲಿ 215 ಆಸ್ಪತ್ರೆಗಳು
ಕಲಬುರಗಿ,ಜು.22- ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಕಲಬಯರಗಿ ಮತ್ತು ಯಾದಗಿರ ಜಿಲ್ಲೆಗಳಲ್ಲಿ ಕ್ರಮವಾಗಿ 125 ಮತ್ತು 53 ಸರ್ಕಾರಿ ಆಸ್ಪತ್ರೆಗಳು ಸೇವೆ ಸಲ್ಲಿಸುತ್ತಿವೆ ಇದರಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಖಾಸಗಿ 35 ಆಸ್ಪತ್ರೆಗಳು ಯಾದಗೀರ ಜಿಲ್ಲೆಯಲ್ಲಿ 2 ಆಸ್ಪತ್ರೆಗಳು ಈ ಯೋಜನೆಯಲ್ಲಿ ಒಟ್ಟು 215 ಆಸ್ಪತ್ರೆಗಳಿಂದ ಆರೋಗ್ಯ ಸೇವೆ ಪಡೆಯಲು ಅವಕಾಶ ಇರುತ್ತದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ ಅವರು, ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ
ಈ ಉಭಯ ಜಿಲ್ಲೆಗಳಲ್ಲಿ ಸಾಮಾನ್ಯ ಸರಳ ದ್ವಿತೀಯ ಆರೋಗ್ಯ ಆರೈಕೆಗಳು, ಕ್ಲಿಷ್ಟಕರ ದ್ವಿತೀಯ ಆರೋಗ್ಯ ಆರೈಕೆಗಳು, ತೃತೀಯ ಆರೋಗ್ಯ ಆರೈಕೆಗಳು ಮತ್ತು ತುರ್ತು ಆರೋಗ್ಯ ಆರೈಕೆಗಳ ಸೇವೆಯ ಸೌಲಭ್ಯ ಸಿಗಲಿದೆ.
ಈ ಯೋಜನೆಯ ಜಾರಿಯಾಗಿ ಐದು ವರ್ಷಗಳಾಗಿದ್ದು, ಸೂಕ್ತ ರೀತಿಯಲ್ಲಿ ಸೇವೆ ಲಭ್ಯ ಆಗುತ್ತಿಲ್ಲ ಎಂಬ ಬಿ.ಜಿ.ಪಾಟೀಲ ಅವರ ಪ್ರಶ್ನೆಗೆ ಸಚಿವರು, ಈ ಕುರಿತು ಯಾವುದೇ ಮಾಹಿತಿ ಸ್ವೀಕೃತಗೊಂಡಿಲ್ಲ ಸರ್ಕಾರದ ಗಮನಕ್ಕೂ ಬಂದಿರುವುದಿಲ್ಲ ಎಂದು ಅವರು, ಲಿಖಿತ ಉತ್ತರ ನೀಡಿದ್ದಾರೆ.