ಗುರು ಜಗತ್ತಿನ ಅದ್ಭುತ ಶಕ್ತಿ: ಕೊಳಮಲಿ
ವಿಜಯಪುರ, ಜು.22:ಕಲ್ಲಿನಂತೆ ಇರುವವರನ್ನು ತಮ್ಮದೇ ಆದ ವಿಶಿಷ್ಟ ಶಕ್ತಿಯ ಮೂಲಕ ಸುಂದರ ಮೂರ್ತಿಯನ್ನಾಗಿ ಮಾಡಿ ಜಗತ್ತಿಗೆ ಅರ್ಪಿಸಿದ ಕೀರ್ತಿ ಗುರುಗಳಿಗೆ ಸಲ್ಲುತ್ತದೆ. ಗುರು ಈ ಜಗತ್ತಿನ ಅದ್ಭುತವಾದ ಶಕ್ತಿ. ಮೇಣದಬತ್ತಿಯೂ ತನ್ನ ದೇಹವನ್ನು ತಾನೇ ಸುಟ್ಟುಕೊಂಡು ಜಗತ್ತಿಗೆ ಬೆಳಕ ನೀಡುವ ಹಾಗೆ ಗುರುಗಳು ತಮ್ಮ ಶ್ರೇಷ್ಠವಾದ ಕರ್ತವ್ಯವನ್ನು ನಿರ್ವಹಿಸಿ ಜಗತ್ತಿಗೆ ಮಾದರಿಯಾಗಿದ್ದಾರೆ. ಗುರುಗಳಿಗೆ ಜಗತ್ತಿನಲ್ಲಿ ಪೂಜ್ಯನೀಯ ಸ್ಥಾನವಿದೆ ಎಂದು ಸಾಹಿತಿ ಜಾನಪದ ವಿದ್ವಾಂಸ ಪೆÇ್ರ. ಎ.ಎಚ್. ಕೊಳಮಲಿ ಹೇಳಿದರು
ನಗರದ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಗುರುಪೂರ್ಣಿಮೆಯ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳು ಖುಷಿಯುತ್ತಿವೆ. ಯುವ ಜನಾಂಗದಲ್ಲಿ ಸಂಸ್ಕøತಿ ಸಂಸ್ಕಾರ ಕೊರತೆ ಎದ್ದು ಕಾಣುತ್ತಿದೆ. ಪ್ರಸ್ತುತ ಸಮಾಜಕ್ಕೆ ಮೌಲ್ಯಾಧಾರಿತವಾದ ಶಿಕ್ಷಣವನ್ನು ಬೋಧಿಸುವ ಗುರುಗಳ ಅವಶ್ಯಕತೆಯಿದೆ ಎಂದು ಹೇಳಿದರು
ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಯಪ್ರಭು ಕೊಳಮಲಿ ಮಾತನಾಡಿ, ನಮ್ಮ ಕನಕ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಪಠ್ಯದ ಜೊತೆಗೆ ಮೌಲ್ಯ ಶಿಕ್ಷಣವನ್ನು ನಿರಂತರವಾಗಿ ಬೋಧಿಸುತ್ತೇವೆ. ಪರಿಪೂರ್ಣ ವ್ಯಕ್ತಿತ್ವಕ್ಕೆ ನಮ್ಮ ಶಿಕ್ಷಣ ಸಂಸ್ಥೆ ಅಡಿಗಲ್ಲು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿ ಸಮೂಹ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.