ಕೆಟ್ಟು ನಿಂತ ಅಂಬುಲೆನ್ಸ್ ಆರಂಭಿಸಲು ಆಗ್ರಹ
ಸೇಡಂ, ಜು,22 ತಾಲ್ಲೂಕಿನ ಮುಧೋಳ್ ಗ್ರಾಮದಲ್ಲಿ ಆರೋಗ್ಯ ಕವಚ 108 ಆಂಬುಲೆನ್ಸ್ ಸುಮಾರು 3 ತಿಂಗಳಿಂದ ಕೆಟ್ಟು ಹೋಗಿದ್ದು ಸಾರ್ವಜನಿಕರ ಸೇವೆಗಾಗಿ ಸಿಗದಂತಾಗಿದೆ ಎಂದು ಡಿ ಎಂ ಎಸ್ ಎಸ್ ಮುಧೋಳ ವಲಯ ಅಧ್ಯಕ್ಷ ಭೀಮು ಮುಧೋಳ್ ಆರೋಪಿಸಿದ್ದಾರೆ.
ಸುಮಾರು 2 ಲಕ್ಷ ಜನಗಳಿಗೆ ಸುಮಾರು 4 ಆಂಬುಲೆನ್ಸ್ ಇರಬೇಕಿತ್ತು ಆದರೆ ಕೇವಲ ಎರಡು ಮಾತ್ರ ಸೇವೆ ಸಲಿಸುತ್ತಿವೆ ಅದರಲ್ಲಿ 2 ಕೆಟ್ಟು ನಿಂತಿದೆ ಇನ್ನೊಂದು ಸೇಡಂ ಆಂಬುಲೆನ್ಸ್ ಮಾತ್ರ ಹಗಲು ಇರುಳು ಅನ್ನದೆ ತನ್ನ ಪಾಡಿಗೆ ತಾನು ಓಡಾಡ್ತಾ ಇದೆ .ಮುಧೋಳ್ ಗ್ರಾಮದಲ್ಲಿ ಇದ್ದ ಆಂಬುಲೆನ್ಸ್ ಮಾತ್ರ ಕೆಟ್ಟು ನಿಂತರು ಕ್ಯಾರೆ ಎನ್ನದ ಅಧಿಕಾರಿಗಳು ಇದಕ್ಕೆ ಕೂಡಲೇ ಪರಿಹಾರ ಕಂಡು ಸಾರ್ವಜನಿಕರ ಸೇವೆ ಒದಗಿಸಲು ಕೆಲಸ ಮಾಡಬೇಕು ಇಲ್ಲದಿದ್ದರೆ ಸೇಡಂ ತಾಲೂಕಿನ ಆರೋಗ್ಯ ಇಲಾಖೆಯ ಅಧಿಕಾರಿ ಆಫೀಸ್ ಮುಂದೆ ಧರಣಿ ಕುಳಿತು ಹೋರಾಟ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ