ಗುರುವಿನಿಂದ ಕಲಿತ ವಿದ್ಯೆ ಕೊನೆಯವರೆಗೂ ಇರುತ್ತದೆ
ಸೈದಾಪುರ : ಜು.22:ತಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಆದರೆ ಗುರುವಿನಿಂದ ಕಲಿತ ವಿದ್ಯ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ ಎಂದು ಸೋಮೇಶ್ವರಾನಂದ ಶ್ರೀಗಳು ಆಶೀರ್ವಚನ ನೀಡಿದರು.
ಪಟ್ಟಣದ ಶ್ರೀ ಸಿದ್ದಚೇತನಾಶ್ರಮ ಶ್ರೀ ಸಿದ್ದಾರೂಢಮಠದಲ್ಲಿ ಗುರು ಪೂರ್ಣಿಮ ನಿಮಿತ್ತ ಗುರುವಂದನಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ವಿವೇಕದ ಬೆಳಕು ಹರಿಸಿ ವ್ಯಕ್ತಿಯನ್ನು ಸುಜ್ಞಾನದ ಕಡೆ ಕೊಂಡಯ್ಯುವ ಮಾಹನ್ ದೈವಿ ಗುರು. ಸನಾತನ ಧರ್ಮ ಸಂಸ್ಕøತಿಯಲ್ಲಿ ತಂದೆ-ತಾಯಿ ನಂತರದ ಸ್ಥಾನವನ್ನು ಗುರುವಿಗೆ ನೀಡಲಾಗಿದೆ. ಕೇವಲ ಶಿಕ್ಷಣ ನೀಡಿದ ಗುರುಗಳಲ್ಲದೆ ನಮಗೆ ಸನ್ಮಾರ್ಗ, ನೀತಿ ಮತ್ತು ನಮ್ಮ ಏಳಿಗ್ಗೆಯನ್ನು ಬಯಸುವ ಪ್ರತಿಯೊಬ್ಬರು ಗುರುಗಳಾಗಿರುತ್ತಾರೆ. ಪರಮಾತ್ಮಾನ ಅವತಾರ ರೂಪವಾಗಿದ್ದಾರೆ. ಸ್ಥಳ, ಸಮಯ ಹಾಗೂ ವ್ಯಕ್ತಿ ಬದಲಾದರು ಗುರುವಿನ ಸ್ಥಾನ ಬದಲಾಗದು. ಗುರುವಿನ ಮಾರ್ಗದಲ್ಲಿ ನಡೆದು ಸುಜ್ಞಾನ ಬೆಳಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂದು ತಿಳಿಸಿದರು.
ನಂತರ ಸೈದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರಿಂದ ಮಠದ ಪೀಠಾಧಿಪತಿ ಸೋಮೇಶ್ವರಾನಂದ ಸ್ವಾಮಿಜಿಯವರಿಗೆ ತುಲಭಾರ ಮತ್ತು ಪಾದ ಪೂಜೆ ಮತ್ತು ಭಕ್ತಿ ಗೀತೆ ಗಾಯನ ಮೂಲಕ ಗುರುವಂದನಾ ಸಲ್ಲಿಸಲಾಯಿತು.
ಈ ವೇಳೆ ಸುಭಾಷ್ ಶೇಠ ದೋಕಾ, ನಾರಾಯಣಪ್ಪ ಪಾಲಾದಿ, ವಿಶ್ವನಾಥರೆಡ್ಡಿ ಚಿಗಾನೂರು, ಬನ್ನಯ್ಯ ಕೆ.ಬಿ, ಮಹಿಪಾಲರೆಡ್ಡಿ ದುಪ್ಪಲ್ಲಿ, ಮಲ್ಲಣ್ಣಗೌಡ ಮುನಗಲ್, ಸಿದ್ದಲಿಂಗಯ್ಯ ಸ್ವಾಮಿ, ಗಂಗಾಧರ ಚಂದ್ರಗಿರಿ, ಮಲ್ಲುಗೌಡ ಸೈದಾಪುರ, ನೀಲಕಂಠಗೌಡ ಕ್ಯಾತ್ನಾಳ್, ಬಾಲಪ್ಪ ವಿಶ್ವಕರ್ಮ, ವೀರರೆಡ್ಡಿಗೌಡ ಬಾಲಛೇಡ್, ಮಲ್ಲಿಕಾರ್ಜುನ ಬಳೆ, ಷಣ್ಮುಖ ತಾಂಬಳ್ಕೂರ್, ಬಸವರಾಜ ಸಜ್ಜನ್, ತಾಯಪ್ಪ ಚಿಗಿರಿ, ದೇವು ಕಲಾಲ್, ನಾರಾಯಣ ಬಾಲಛೇಡ್, ಹಾಗೂ ಹೆಗ್ಗಣಗೇರಾ, ನೀಲಹಳ್ಳಿ, ರಾಂಪೂರು, ಬೆಳಗುಂದಿ, ಗೊಂದಡಗಿ, ಬಾಲಛೇಡ್ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.