ಯಂಭತ್ನಾಳ:ಹಡಪದ ಅಪ್ಪಣ್ಣ ಜಯಂತಿ ಆಚರಣೆ
ವಿಜಯಪುರ:ಜು.22:ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯಂಭತ್ನಾಳ ಗ್ರಾಮದಲ್ಲಿ ಶ್ರೀ ನಿಜಶರಣ ಶ್ರೀ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಊರಿನ ಮುಖಂಡರಾದ ಎಸ್.ಎಸ್. ಮಂಗಾನವರ ಹಡಪದ ಅಪ್ಪಣ್ಣನವರ ಕುರಿತು ಮಾತನಾಡಿದರು.
ಎಸ್.ಆರ್. ಮಾತಾಳಿ, ಸಿದ್ದು ಹೊಸಮನಿ, ಗ್ರಾಮ ಪಂಚಾಯತಿ ಸದಸ್ಯರಾದ ಬಸು ಯಂಭತ್ನಾಳ, ಶರಣಯ್ಯ ಹಿರೇಮಠ, ಹಡಪದ ಸಮಾಜ ಮುಖಂಡರಾದ ವೀರೇಶ ಹಡಪದ, ಮಂಜುನಾಥ ಹಡಪದ, ಮಲ್ಲಿಕಾರ್ಜುನ ಹಡಪದ, ಭೀಮಪ್ಪ ಹಡಪದ, ಶ್ರೀಶೈಲ ಹಡಪದ ಉಪಸ್ಥಿತರಿದ್ದರು.