ವಾಡಿ ಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ
ವಾಡಿ:ಜು.22: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ 890ನೇ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಜಿಲ್ಲಾ ಹಿಂದುಳಿದ ವರ್ಗಗಳ ಮಾಜಿ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ ಶಿವಶರಣ ಹಡಪದ ಅಪ್ಪಣ್ಣನವರು ಸರಳ ಜೀವನವನ್ನು ಪ್ರತಿಪಾದಿಸಿ ಅದರಂತೆ ಬದುಕಿ ತೋರಿಸಿದರು. ನಮಗಿರುವ ಸಂಪತ್ತು ತಮ್ಮ ಕುಟುಂಬಕ್ಕೆ ಎಷ್ಟು ಬೇಕೋ ಅಷ್ಟನ್ನು ಉಪಯೋಗಿಸಿ ಉಳಿದದನ್ನು ಮಠಕ್ಕೆ, ಸಮಾಜಕ್ಕೆ ಕೊಟ್ಟು ನಿಸ್ವಾರ್ಥವಾದ ಜೀವನ ನಡೆಸಿ ತಮ್ಮ ಕಾಯಕದಲ್ಲಿ ಕೈಲಾಸ ಕಂಡವರು ಎಂದರು.
ನುಡಿದಂತೆ ನಡೆ ಎಂಬ ಸಿದ್ಧಾಂತದಲ್ಲಿ ಬದುಕಿದವರಾಗಿದ್ದರು,
ಶೋಷಿತ ಸಮುದಾಯಗಳನ್ನು ಒಟ್ಟುಗೂಡಿಸಿ ಅವುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಅವರ ಕನಸಾಗಿತ್ತು ಅದರಂತೆ ಇಂದು ನಾವು ಬಾಳಬೇಕಾಗಿದೆ ಎಂದು ಹೇಳಿದರು.
ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ 12ನೇ ಶತಮಾನದ ಶರಣರು ಕಾಯವನ್ನೇ ಕೈಲಾಸ ಮಾಡಿಕೊಂಡು ಸತ್ಯಶುದ್ಧವಾದ ದುಡಿಮೆಯನ್ನು ಮಾಡಿದರೆ ಕಾಯಕವೇ ಕೈಲಾಸ ವಾಗುತ್ತದೆ. ಇಲ್ಲದಿದ್ದರೆ ಹೊಟ್ಟೆಪಾಡಾಗುತ್ತದೆ ಎಂದು ಅವರು ಹೊಟ್ಟೆಪಾಡಿಗಾಗಿ ಚಿಂತಿಸಿದವರಲ್ಲ. ಹಸಿವು,ಕಾಮ,ಕ್ರೋಧ, ಮದ,ಮತ್ಸರ ಮತ್ತು ವ್ಯಸನಗಳನ್ನೆಲ್ಲಾ ಬದಿಗೊತ್ತಿ ಬದುಕಿ ನಮಗೆಲ್ಲ ಮಾನವೀಯತೆ ಸಾರಿದರು.
ಈ ಭೂಮಿಯ ಮೇಲೆ ಮೇಲೂ ಕೀಳೆಂಬ ಭಾವನೆಯನ್ನು ಹೊಡೆದುಹಾಕಿ ದೇವರ ನಾಮವನ್ನು ಜಪಿಸಿ ಮನು ಕುಲಕ್ಕೆ ಹಲವು ವಚನಗಳ ಮೂಲಕ ಭಕ್ತಿಪ್ರಿಯರನ್ನಾಗಿಸಿದ ಶ್ರೇಯಸ್ಸು ಶಿಶರಣರಾದ ಹಡಪದ ಅಪ್ಪಣ್ಣ ನಂತಹ ಶರಣರಿಗೆ ಸಲ್ಲುತ್ತದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮುಖಂಡರಾದ ವಿಠಲ ನಾಯಕ,ಶರಣಗೌಡ ಚಾಮನೂರ,ಶಿವಶಂಕರ ಕಾಶೆಟ್ಟಿ, ದತ್ತಾ ಖೈರೆ, ಸನ್ನಿ ವಾಲಿಯ,ಆನಂದ ಇಂಗಳಗಿ, ಅಯ್ಯಣ್ಣ ದಂಡೋತಿ, ಮಲ್ಲಿಕಾರ್ಜುನ ಸಾತಖೇಡ,ಆನಂದ ಶಿರವಾಳ,ಬಸವರಾಜ ಹೇಮಾನಿ, ದೇವದಾಸ,
ಅಂಬ್ರೇಷ್ ಹಡಪದ, ಶರಣಬಸಪ್ಪ ಹಡಪದ,ಭೀಮಾಶಂಕರ ಹಡಪದ,ಸಂತೋಷ ಹಡಪದ, ಲಕ್ಷ್ಮಣ ಹಡಪದ, ಚಂದ್ರಶೇಖರ ಹಡಪದ, ಗಿರಿಮಲ್ಲಪ್ಪ ಹಡಪದ, ಅಶೋಕ ಹಡಪದ, ಪಂಡಿತ್ ಹಡಪದ, ಲಕ್ಮಣ ಹಡಪದ ಸೇರಿದಂತೆ ಇತರರು ಇದ್ದರು.