ಯಾವ ಸ್ವಾರ್ಥ ಇಲ್ಲದೇ ಸೇವೆ ಸಲ್ಲಿಸುವವನೇ ನಿಜವಾದ ಉದ್ಯಮಿ:ಆರ್. ಲಕ್ಷ್ಮಣ
ವಿಜಯಪುರ,ಜು.22: ಒಂದು ಸಂಘವನ್ನು ಹುಟ್ಟು ಹಾಕುವದು ಬಹಳ ಸುಲಭ. ಆದರೆ ಆ ಸಂಘವನ್ನು ಬೆಳೆಸುವದು ಬಹಳ ಕಷ್ಟದ ಕೆಲಸ. ಸಂಘವನ್ನು ಬೆಳೆಸುವುದರೊಂದಿಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ಸಂಘವನ್ನು ಮುನ್ನೆಡಿಸಿಕೊಂಡು ಹೋಗುವದು ಮುಖ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಶಾಮಿಯಾನ ಡೇಕೋರೇಶನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ದಿ ಸಂಘ, ಗಂಗಾವತಿ ಅಧ್ಯಕ್ಷ ಆರ್. ಲಕ್ಷ್ಮಣ ಅವರು ತಿಳಿಸಿದರು.
ನಗರದ ಮನ್ನತ್ ಪ್ಯಾಲೇಸ್ ಹಾಲ್‍ನಲ್ಲಿ ವಿಜಯಪುರ ಜಿಲ್ಲಾ ಮಂಟಪ, ಮೈಕ್, ಲೈಟ್ ಮತ್ತು ಪ್ಲಾವರ್ ಡೇಕೋರೇಟರ್ಸ್ ಮಾಲೀಕರ ಸಂಘÀ ಹಾಗೂ ದಾವಣಗೇರಿ ಕರ್ನಾಟಕ ರಾಜ್ಯ ಶಾಮಿಯಾನ ಡೇಕೋರೇಶನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ದಿ ಸಂಘ ಕೇಂದ್ರ ಕಚೇರಿ, ಇವರ ಸಹಯೋಗಲ್ಲಿ 27ನೇ ವಾರ್ಷಿಕ ಸ್ನೇಹ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿ, ಸದ್ಯ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಇದ್ದು, ಅದೇ ರೀತಿ ನಮ್ಮ ಕ್ಷೇತ್ರದಲ್ಲಿಯೂ ಸ್ಪರ್ಧೆ ಇದೆ. ಆದರೆ ಸಂಘದ ಅಡಿಯಲ್ಲಿ ಬರುವ ಎಲ್ಲ ಉದ್ದಿಮೆಗಳಾದ ನಾವು ಒಬ್ಬರನೊಬ್ಬರನ್ನು ಬಿಟ್ಟುಕೊಡದೇ ತಮ್ಮ ವ್ಯಾಪಾರದಲ್ಲಿ ತಮ್ಮದೇ ಆದ ಸೇವೆ ಮಾಡುವ ಯಾವ ಸ್ವಾರ್ಥ ಇಲ್ಲದೇ ಸೇವೆ ಸಲ್ಲಿಸುವವನೇ ನಿಜವಾದ ಉದ್ದಿಮೆ ಆಗುತ್ತಾನೆ. ಅದೇ ರೀತಿ ಆತನಿಗೆ ಯಶಸ್ವು ಕಟ್ಟಿಟ್ಟ ಬುತ್ತಿ. ಅದೇ ರೀತಿ ನಮ್ಮ ಸಂಘದ ಅಡಿಯಲ್ಲಿ ಸರಕಾರದ ದೊರೆಯುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ ಎಂದರು.
2023-24ನೇ ಸಾಲಿನಲ್ಲಿ ನಿಧನ ಹೊಂದಿದ ಸಂಘದ ಹಿರಿಯರು ಹಾಗೂ ಸದಸ್ಯರಾದ ಕುತುಬುದ್ದೀನ್ ಮಕಾನದಾರ, ಅಬ್ದುಲ್ ರಜಾಕ ಬಾಗವಾನ, ನೀಲಕಂಠ ಬಾಬಾನಗರ, ಷಣ್ಮುಖಯ್ಯ ಹಿರೇಮಠ, ಶಾಮರಾವ ಹೊಸಮನಿ, ಬಸವರಾಜ ಬಿರಾದಾರ, ಅಬ್ದುಲ್‍ಅಜೀಜ ಬೀಳಗಿ ಅವರ ಸವಿನೆನಪಿಗಾಗಿ ಒಂದು ನಿಮಿಷಗಳ ಕಾಲ ಮೌನ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 25ಕ್ಕೂ ಹೆಚ್ಚು ಸಂಘದ ಪದಾಧಿಕಾರಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ಅಜೀಜ್ ಎಚ್. ಢಾಲಾಯತ್ ಅವರು ಮಾತನಾಡಿ, ಸಂಘವನ್ನು ವಿಜಯಪುರ ಜಿಲ್ಲೆಯಲ್ಲಿ ಹುಟ್ಟು ಹಾಕಿ, ಸದ್ಯಕ್ಕೆ ರಾಜ್ಯದ ದಾವಣಗೆರೆಯವರೆಗೆ ಹಬ್ಬಿಕೊಂಡಿರುವದು ಸಂತಸ ತಂದಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ವ್ಯಾಪಾರಿಗಳು ಹೊಸ ಹೊಸ ವಿನ್ಯಾಸ, ಸೌಂಡ್ ಸಿಸ್ಟಮ್, ಡೆಕೋರೇಶನ್ ಇನ್ನು ಮುಂತಾದ ಸ್ತರಗಳನ್ನು ಬೆಳೆಸಲು ಸರಕಾರ ಮಟ್ಟದಿಂದ ಸಹಾಯಧನ, ಸೌಲಭ್ಯ, ತರಬೇತಿಗಳ ಅವಶ್ಯಕತೆ ಇದ್ದು, ಅದನ್ನು ಸರಕಾರವು ನಮ್ಮ ಸಂಘಕ್ಕೆ ನೀಡಿ ಸಂಘದ ಪ್ರತಿಯೊಬ್ಬ ವ್ಯಾಪಾರಿಗಳು ಬೆಳೆಯುವ ನಿಟ್ಟಿನಲ್ಲಿ ಸಹಕಾರಿಯಾಗಬೇಕೆಂದು ತಮ್ಮ ಬೇಡಿಕೆ ಮುಂದಿಟ್ಟರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಯ್ಯ ಹಿರೇಮಠ ಮಾತನಾಡಿ, ಸಂಘದಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಸದಸ್ಯತ್ವವನ್ನು ಹೊಂದಿದ್ದು, ಪ್ರತಿವರ್ಷ ಪ್ರತಿಯೊಂದು ಜಿಲ್ಲೆಯಲ್ಲಿ ಸ್ನೇಹ ಸಮ್ಮೇಳನ ಮಾಡಿಕೊಂಡು ಬಂದಿದ್ದು, ಈ ಸಮ್ಮೇಳನದಲ್ಲಿ ಹೊಸದಾಗಿ ಸದಸ್ಯತ್ವ ಮಾಡಿಕೊಂಡು ಸಂಘವನ್ನು ಇನ್ನಷ್ಟು ಬಲಿಷ್ಠ ಹಾಗೂ ಸುಭದ್ರವಾಗಿ ಮಾಡುವಲ್ಲಿ ಸಂಘವನ್ನು ಹಗಲಿರುಳು ಶ್ರಮಿಸುತ್ತಾ, ಇದಕ್ಕೆ ಪ್ರತಿಯೊಬ್ಬರು ಸಲಹೆ ಸೂಚನೆಗಳನ್ನು ಕೊಡುತ್ತಾ ಮಗುವಿನ ಮೇಲೆ ಹೇಗೆ ತಾಯಿ ಪ್ರೀತಿ ಇರುತ್ತದೆ. ಅದೆ ರೀತಿ ಪ್ರತಿಯೊಬ್ಬ ಸದಸ್ಯರು ಪ್ರೀತಿ, ಪ್ರೇಮ, ಸ್ನೇಹ ಭಾವನೆಯನ್ನು ಹೊಂದಿದ್ದು, ನಮ್ಮ ಸಂಘದಲ್ಲಿ ಮೇಲು-ಕೀಳು, ಶ್ರೀಮಂತ -ಬಡವರ ಎನ್ನುವ ಭಾವನೆ ಬರದೆ ಹಾಗೆ ಯಶಸ್ವಿಯಾಗಿ ಸಂಘವನ್ನು ಬೆಳೆಸಿಕೊಂಡು ಬಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ರಫೀಕ ಪುಣೇಕರ, ಮುಖ್ಯ ಅತಿಥಿಗಳಾಗಿ ರಾಜ್ಯ ಶಾಮಿಯಾನ ಕ್ಷೇಮಾಭಿವೃದ್ದಿ ಸಂಘದ ಸಂಸ್ಥಾಪಕರಾದ ಮೆಹಬೂಬ ಮುಲ್ಲಾ, ಗೌರವ ರಾಜ್ಯಧ್ಯಕ್ಷÀ ಶಿವಕುಮಾರ ಹಿರೇಮಠ, ಉಪಾಧ್ಯಕ್ಷÀ ಏಜಾ ಅಹ್ಮದ ಗುಡಗೇರಿ ಭಾಗವಹಿಸಿದ್ದರು.
ಅತಿಥಿಗಳಾಗಿ ರಾಜ್ಯ ಶಾಮಿಯಾನ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ, ಸಹ ಕಾರ್ಯದರ್ಶಿ ನವೀನ, ಖಜಾಂಚಿ ವಿಜಯಕುಮಾರ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಗುಂಡಯ್ಯಸ್ವಾಮಿ ಹಿರೇಮಠ, ಎಂ.ರಾಜೇಸಾಬ್ ಕೆ.ಬಿ.ಎನ್., ಮಂಜುನಾಥ ಕೋರಿ, ಉಪಾಧ್ಯಕ್ಷರಾದ ಶಫೀವುಲ್ಲಾ ಖಾನ್, ಇಮ್ತಿಯಾಜ್ ಮುಲ್ಲಾ, ಅಬ್ದುಲ್ ಖಾದರ ಗುಡಗೇರಿ, ಗಣಪತಿ ಮಾಡೇಕರ, ಬಾವುರಾಜ ಬಳಗಾರ, ಹಾರುನರಶೀದ ಮಾಶ್ಯಾಳಕರ, ವಿರೇಶ ಕಲಾದಗಿ, ಮೊಹಮ್ಮದಹಾಸೀಮ ಜಕಲಿ, ಮೊಹಮ್ಮದರಫೀಕ ಮುರಾಳ, ಮುನ್ನಾ ಅತ್ತಾರ, ಮೃತ್ಯುಂಜಯ ಕನನಂದಿ, ಅಬ್ದುಲ್ ಗಫಾರ್ ಹವಾಲ್ಧಾರ, ಡೊಂಗ್ರಿ ಕಟಬರ, ದಾವುದ ಕನಸಾನಿ, ದಾವಲಸಾಬ ಬಿರಿ, ನರೇಂದ್ರ ಗೌತಮ ಚೋಪ್ರಾ ಹಾಗೂ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಾಹಿಲ್ ಮುರಾಳ ಸ್ವಾಗತಿಸಿದರು. ಸುರೇಶ ಬಿಜಾಪುರ ನಿರೂಪಿಸಿ ವಂದಿಸಿದರು.