ಅಪ್ಪಣ್ಣನವರ ಬದುಕು ಸಾರ್ಥಕ ಬದುಕಾಗಿತ್ತು:ಪಾಟೀಲ
ತಾಳಿಕೋಟೆ:ಜು.22:ವಚನ ಸಾಹಿತ್ಯವೆಂಬುದು ಅನುಭವದ ಬಧುಕಿನ ಜೀವನವಾಗಬೇಕು ಸಮಾಜ ಸುದಾರಣೆಗಾಗಿ ಬಸವಣ್ಣನವರ ಕಾಲದ ಅನುಭವ ಮಂಟಪ ಸಜ್ಜಾಗಿತ್ತು ಅಂತಹ ಅನುಭವ ಮಂಟಪದ ಉಸ್ತುವಾರಿ ವಹಿಸಿದವರು ಶಿವಶರಣ ಡಪದ ಅಪ್ಪಣ್ಣನವರಾಗಿದ್ದರೆಂದು ಶ್ರೀ ಸಂಗಮಾರ್ಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಚೀನ್ ಪಾಟೀಲ ಅವರು ಹೇಳಿದರು.
ರವಿವಾರರಂದು ತಾಳಿಕೋಟೆ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರೀ ಕಾಳಿಕಾದೇವಿ ಮಂದಿರದಲ್ಲಿ ಏರ್ಪಡಿಸಲಾದ ಹಡಪದ ಅಪ್ಪಣ್ಣನವರ 890ನೇ ಜಯಂತ್ಯೋತ್ಸವ ಹಾಗೂ ಗುರುಪೂರ್ಣಿಮಾದಿನದ ಅಂಗವಾಗಿ ವೇಧವ್ಯಾಸರ ಭಾವಚಿತ್ರಗಳಿಗೆ ಪುಷ್ಪಹಾರ ಹಾಕಿ ಗೌರವಿಸಿ ಜ್ಯೋತಿ ಬೆಳಗಿಸುವದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಚನಗಳು ಎಂಬವವು ಇಡೀ ಜೀವನದ ಸಂವಿದಾನದಂತೆ ಸ್ಥಾನಮಾನವಾಗಿವೆ 12ನೇ ಶತಮಾನದಲ್ಲಿ ಎಲ್ಲರೂ ಒಂದೇಡೆ ಸೇರಿ ಪ್ರಭುದೇವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದಂತಹ ಅಂದಿನ ಮಹಾ ಮನೆಯ ಸಭೆಯಲ್ಲಿ ವಚನಗಳಿಗೆ ಅಂಕಿತ ಹಾಕುವ ಕಾರ್ಯ ಬಸವಣ್ಣನವರದ್ದಾಗಿತ್ತೆಂದು ಹೇಳಿದ ಪಾಟೀಲರು ಶರಣರೆಲ್ಲರೂ ಊಟ ಮಾಡಿದ ಮೇಲೆ ಪ್ರತಿಯೊಬ್ಬರಿಗೂ ಎಲೆ ಅಡಿಕೆಯಂತಹ ತಾಂಭೂಲವನ್ನು ಕೊಡುವ ವ್ಯವಸ್ಥೆ ಅಪ್ಪಣ್ಣನವರು ಮಾಡುತ್ತಿದ್ದರು, ಹಡಪದ ಎಂದರೆ ತಾಂಭೂಲು ಅನ್ನುವ ಅರ್ಥಕೊಡುತ್ತದೆ ಎಂದು ಹಡಪದ ಅಪ್ಪಣ್ಣನವರ ಹಾಗೂ ಬಸವಣ್ಣನವರ ಆತ್ಮೀಯತೆಯ ಭಾವನೆ ಹೇಗಿತ್ತೆಂಬುದನ್ನು ಬಹು ಮಾರ್ಮಿಕವಾಗಿ ವಿವರಿಸಿದರು.
ಇನ್ನೋರ್ವ ಅತಿಥಿ ನಿವೃತ್ತ ಪ್ರಾಚಾರ್ಯರಾದ ಡಾ.ಜಿ.ಎಂ.ಘೀವಾರಿ ಅವರು ಮಾತನಾಡಿ ಜಂಗಮ ದಾಸೋಹಗಳಂತಹ ಕಾರ್ಯಗಳನ್ನು ಮಾಡಿ ನುಡಿದಂತೆ ನಡೆದವರ ಸಾಲಿನಲ್ಲಿ ಹಡಪದ ಅಪ್ಪಣ್ಣನವರು ಅಗ್ರಗಣ್ಯರಾಗಿದ್ದರು ಅವರು ಬರೆದಂತಹ 250 ಕ್ಕೂ ಮೇಲ್ಪಟ್ಟ ವಚನಗಳು ಆದರ್ಶಪ್ರೀಯವಾಗಿದ್ದವು ಶತಮಾನದ ಮಹಾ ಮಾನವತವಾದಿ ಬಸವಣ್ಣನವರ ಆಪ್ತಕಾರ್ಯದರ್ಶಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣನವರು ಬಸವಣ್ಣನವರಿಗೆ ಅನೇಕ ಸಲಹೆ ಸೂಚನೆಗಳನ್ನು ನೀಡುತ್ತಾ ಅವರ ಸೇವಾ ಕಾರ್ಯದಲ್ಲಿಯೇ ತೊಡಗಿ ಹೆಸರು ಗಳಿಸಿದ್ದ ಹಡಪದ ಅಪ್ಪಣ್ಣನವರು ತಮ್ಮ ಪತ್ನಿ ಲಿಂಗಮ್ಮಳಿಗೆ ವಚನಗಳನ್ನು ಮಂಡಿಸುವ ಕಾರ್ಯಗಳನ್ನೂ ಸಹ ಒದಗಿಸಿಕೊಟ್ಟಿದ್ದರಲ್ಲದೇ ಮೇಲು ಕೀಳು ಬೇದ ಭಾವ ಅಂದಿನ ದಿನಗಳಲ್ಲಿ ಇದ್ದಂತಹ ಅನಿಷ್ಠ ಪದ್ದತಿಗಳನ್ನು ನಿರ್ಮೂಲನೆ ಮಾಡಲು ಮುಂದಾಗಿ ಎಲ್ಲರೂ ಸರಿ ಸಮಾನರಾಗಿ ಇರಬೇಕೆಂಬುದನ್ನು ಸಾರಿದ 12ನೇ ಶತಮಾನದ ಶರಣರು ಅಂದಿನ ಸಾಮಾಜಿಕ ಕ್ರಾಂತಿ ಇಂದು ವಿಶ್ವದ ಜನರೇ ಅನುಸರಿಸುತ್ತಿರುವದನ್ನು ಎಲ್ಲರೂ ಕಾಣುತ್ತೇವೆಂದರು.
ಇನ್ನೋರ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ ತಾಳಿಕೋಟೆ ತಾಲೂಕಾ ಅಧ್ಯಕ್ಷರಾದ ಆರ್.ಎಲ್.ಕೊಪ್ಪದ ಅವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್‍ನಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಾಗಿಬರಲಾಗಿದೆ ಅಂತಹ ಮಹತ್ವದ ಕಾರ್ಯಕ್ರಮಗಳಲ್ಲಿ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮವೂ ಕೂಡಾ ಒಂದಾಗಿದೆ ಎಂದು ಮಾನವ ಜನ್ಮ ಸೇವೆಗಾಗಿ ಜನ್ಮತಾಳಿದ ನಮ್ಮ ಸೇವಾ ಕಾರ್ಯವನ್ನು ಆತ್ಮೀಯ ಭಾವನೆಯಿಂದ ನಡೆಸಿಕೊಂಡು ಸಾಗಬೇಕು ಇದು ಅಲ್ಲದೇ ನೆಲ ಜಲ ಕನ್ನಡದ ಭಾಷೆಯ ಬಗ್ಗೆ ಹೆಚ್ಚಿಗೆ ಕಾಳಜಿ ವಹಿಸಿ ಕನ್ನಡ ಭಾಷೆಯನ್ನು ಎಲ್ಲರಲ್ಲಿ ಮೂಡಿಸಿ ಬೆಳವಣಿಗೆಯತ್ತ ಕೊಂಡೊಯುವದೇ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನದ್ದಾಗಿದೆ ಪರಿಷತ್ತಿನಿಂದ ನಡೆದುಕೊಂಡು ಬಂದಂತಹ ಕೆಲವು ಕಾರ್ಯಕ್ರಮಗಳ ವಿವರಣೆಯನ್ನು ವಿವರಿಸಿದರು.
ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷರಾದ ಸುನೀಲ್ ಹಡಪದ, ವಿಶ್ವಕರ್ಮ ಸಮಾಜದ ಉದಯಕುಮಾರ ಸೋನಾರ, ನಿವೃತ್ತ ಶಿಕ್ಷಕ ಸಂಗಣ್ಣ ಸಿಂಧಗಿ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ಪ್ರಭುಗೌಡ ಚೌದ್ರಿ, ಅತಿಥಿಗಳಾಗಿ ಆಗಮಿಸಿದ ಇವರುಗಳಿಗೆ ಕಸಾಪ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದು ಅಲ್ಲದೇ ಹಿರೂರಿನ ಶತಾಯುಷಿ ನೂರು ವರ್ಷಕ್ಕೂ ಮೇಲ್ಪಟ್ಟು ವಯೋಮಿತಿ ಹೊಂದಿದ ಯಮನಪ್ಪ ಹಡಪದ ಅವರಿಗೂ ಸನ್ಮಾನಿಸಿ ಗೌರವಿಸಲಾಯಿತು.
ಆರ್.ಬಿ.ದಾನಿ ಪ್ರಾಸ್ಥಾವಿಕ ಮಾತನಾಡಿದರು. ಕರವೇ ಸಂಘಟನೆಯ ಜೈಭೀಮ ಮುತ್ತಗಿ ನಿರೂಪಿಸಿದರು.