ಹಡಪದ ಅಪ್ಪಣ್ಣನವರ ವಚನಗಳು ಸಮಾಜಕ್ಕೆ ಸ್ಪೂರ್ತಿ
ತಾಳಿಕೋಟೆ:ಜು.22: ಪಟ್ಟಣದ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಮತ್ತು ಗುರುಪೂರ್ಣಿಮಾವನ್ನು ಅತ್ಯಂತ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಎಸ್.ಎಂ.ಸಜ್ಜನ ಅವರು ಮಾತನಾಡಿ ಶಿವಶರಣ ಹಡಪದ ಅಪ್ಪಣ್ಣ ಅವರು ವಚನದ ಮೂಲಕ
ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು, ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು, ಎನ್ನ ಅರಿವು ನಿಮ್ಮ ಘನದೊಳಗೆ ಸವೆದು, ನಿಶ್ಚಲ ನಿಜೈಕ್ಯವಾಗಿ ಬಸವಪ್ರಿಯ ಕೂಡಲ ಚೆನ್ನಸಂಗಯ್ಯ, ನೀನಾನೆಂಬುದು ಏನಾಯಿತ್ತೆಂದರಿಯೆ ಎಂದು ಹೇಳಿದಂತೆ ಎಲ್ಲರೂ ಧರ್ಮದ ದಾರಿಯಲ್ಲಿ ನಡೆಯುವದರೊಂದಿಗೆ ಸಾಗಬೇಕು ಅವರ ಆದರ್ಶ, ವಚನಗಳು ಮತ್ತು ಮೌಲ್ಯಗಳು ಇಂದಿನ ಸಮಾಜಕ್ಕೆ ಮತ್ತು ವಿದ್ಯಾಥಿಗಳಿಗೆ ಸ್ಪೂರ್ತಿದಾಯಕವಾಗಿದ್ದು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದ ಅವರು ಗುರು ಎಂಬ ಸ್ಥಾನ ಅತ್ಯಂತ ಮಹತ್ವದ್ದಾಗಿದೆ ವಿದ್ಯಾ ಬುದ್ದಿ ಜೊತೆಗೆ ಸಂಸ್ಕಾರವನ್ನು ಕಲಿಸುವ ತಂದೆ ತಾಯಿಗಳೂ ಸಹ ಗುರುವಿನ ಸ್ಥಾನದಲ್ಲಿದ್ದು ಇದನ್ನು ವಿದ್ಯಾರ್ಥಿಗಳು ಅರೀತುಕೊಂಡು ಬಾಳಿದರೆ ಜೀವನ ಸಾರ್ಥಕವಾಗಲಿದೆ ಎಂದರು.
ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಸವರಾಜ ಸಜ್ಜನ, ಶ್ರೀಮತಿ ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕರಾದ ಶಿವಾನಂದ ಸುಣದೋಳ್ಳಿ, ಬೆಸ್ಟ್ ಪಿ.ಯು ಕಾಲೇಜ್ ಪ್ರಾಚಾರ್ಯರಾದ ಕಿಶೋರಗೌಡ, ಸಿ.ಬಿ.ಎಸ್.ಇ ಪ್ರಾಚಾರ್ಯರಾದ ಜಯಚಂದ್ರ, ಬಿ.ಇಡಿ ಕಾಲೇಜ್ ಪ್ರಾಚಾರ್ಯರಾದ ಶ್ರೀಮತಿ ಜಿ.ಎನ್.ಪಾಟೀಲ, ಆಯ್.ಟಿ.ಆಯ್.ಕಾಲೇಜ್ ರಾಜು ಹಜೇರಿ, ಎಲ್ಲಾ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.