ತನು ಮನ ಭಾವ ಶುದ್ದ ವಿರಲಿ:ಸ್ವಾಮಿಜಿ
ತಾಳಿಕೋಟೆ:ಜು.22: ಯಾವುದೇ ಕೆಲಸ ಕಾರ್ಯಗಳು ಶುದ್ದತೆಯಿಂದ ನಡೆಯಬೇಕಾದರೆ ನಮ್ಮಲ್ಲಿ ತನುಮನ ಶುದ್ದ ಭಾವವೆಂಬುದು ಇರಬೇಕೆಂದು ಸ್ಥಳೀಯ ಶ್ರೀ ಮಹಾಂತರುದ್ರ ಸ್ವಾಮಿಗಳು(ವಿಭೂತಿಮಠ) ಅವರು ನುಡಿದರು.
ರವಿವಾರರಂದು ಸ್ಥಳೀಯ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ ವತಿಯಿಂದ ಏರ್ಪಡಿಸಲಾದ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ಮಾನವರಾದ ನಮ್ಮಲ್ಲಿ ಬಟ್ಟೆ ಬರೆಗಳನ್ನು ಬದಲಾವಣೆ ಮಾಡಿಕೊಳ್ಳಿ ಆದರೆ ಆಡು ಭಾಷೆ ಎಂಬುದು ಪಕ್ವವಾಗಿರಲಿ ಎಂದರು. ಯಾವ ರೀತಿ ಗಂದದ ಕಲ್ಲಿಗೆ ತಿಕ್ಕಿ ತಿಕ್ಕಿದಂತೆ ಪರಿಮಳವೆಂಬುದು ಹೆಚ್ಚುತ್ತದೆಯೋ ಅದರಂತೆ ಮಕ್ಕಳಲ್ಲಿ ಭಕ್ತಿ ಶ್ರದ್ದೆ ಎಂಬುದನ್ನು ಅಳವಡಿಸಿದರೆ ಮಕ್ಕಳು ಒಳ್ಳೆಯ ಸಂಸ್ಕಾರವಂತರಾಗಿ ಬಾಳಿ ಬಧುಕಲಿದ್ದಾರೆಂದರು. ಸಾಯಿಬಾಬಾ ಕಾರ್ಯಕ್ರಮ ಎಂಬುದು ಗುರುಪೂರ್ಣಿಮಾ ಉತ್ಸವದಲ್ಲಿ ಅವರ ಭಾವಚಿತ್ರವಿಟ್ಟು ಮಹಾ ಪೂಜೆ ಗೈದಿದ್ದನ್ನು ನೋಡಿದರೆ ಬಹಳೇ ಸಂತಸ ತಂದಿದೆ ಸಾಯಿಬಾಬಾರವರಿಗೆ ಭಕ್ತಿ ಶ್ರದ್ದೆಯಿಂದ ನಡೆದುಕೊಂಡರೆ ಬೇಕು ಬೇಡಿಕೆಗಳನ್ನು ಇಡೇರಿಸಿಕೊಳ್ಳಬಹುದಾಗಿದೆ ಎಂದ ಶ್ರೀಗಳು ಕೆಲವು ಕಿರುಕಥೆಗಳನ್ನು ಹೇಳಿ ಭಕ್ತರ ಮನವನ್ನು ಪರಿವರ್ತನೆಗೊಳಿಸಿದರು.
ಇನ್ನೋರ್ವ ಜ್ಯೋತಿಷ್ಯ ಶಾಸ್ತ್ರ ಪರಿಣಿತರಾದ ವೇ.ವಸಂತ ಜೋಶಿ ಅವರು ಮಾತನಾಡಿ ಇಂದು ಗುರುಪೂರ್ಣಿಮಾ ಮಹಾ ಕಾರ್ಯಕ್ರಮವಿದ್ದರೂ ವೇಧವ್ಯಾಸರು ಹುಟ್ಟಿದ ಜನ್ಮದಿನವೂ ಇಂದಾಗಿದೆ ವೇಧ ಅಂದರೆ ಜ್ಞಾನ ಜ್ಞಾನವೆಂಬುದಕ್ಕೆ ಬಹಳೇ ಪ್ರಾಮುಖ್ಯತೆ ಇದೆ ಎಂದರು. ಅಲ್ಲಮ ಪ್ರಭುಗಳು ಹೇಳಿದಂತಹ ವಚನಗಳನ್ನು ಪ್ರಸ್ಥಾಪಿಸಿದ ಶ್ರೀಗಳು ಮನುಷ್ಯರಲ್ಲಿ ಛಲವೆಂಬುದು ಇರಲಿ ಗುಣಾತ್ಮಕ ಗುಣವಿರಲಿ ಈ ಮಾನವ ಜೀವನದಲ್ಲಿ ದೇವರು ಒಳ್ಳೆಯ ಅವಕಾಶ ಕೊಟ್ಟಿದ್ದಾನೆ ಕಾರಣ ಅತೀಯಾದ ವಿಚಾರವನ್ನಿಟ್ಟುಕೊಳ್ಳದೇ ಒಳ್ಳೆಯ ಛಲವೆಂಬುದನ್ನು ಇಟ್ಟುಕೊಂಡು ನಡೆದರೆ ಅದಕ್ಕೆ ದೇವರು ಒಲಿದೇ ಒಲಿಯುತ್ತಾನೆಂದರು.
ಇನ್ನೋರ್ವ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ ಕಮಿಟಿಯ ಸದಸ್ಯರಾದ ಜಿ.ಜಿ.ಕಾದಳ್ಳಿ, ಹಿರಿಯ ಪ್ರತ್ರಕರ್ತ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಕಳೆದ 20 ವರ್ಷಗಳಿಂದಲೂ ತಾಳಿಕೋಟೆಯ ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ ವತಿಯಿಂದ ಮಹಾ ಪೂಜೆ ಗೈಯಲಾಗುತ್ತಾ ಸಾಗಿಬರಲಾಗಿದೆ ಈ ಸಂಸ್ಥೆಯ ವತಿಯಿಂದ ಯಾವುದೇ ಹಣದ ಬಗ್ಗೆ ಆಕಾರಣೆ ಮಾಡದೇ ಭಕ್ತರಿಂದ ತಾನಾಗಿ ಬಂದ ಹಣದಿಂದ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ಬರಲಾಗಿದೆ ಇಂತಹ ವ್ಯವಸ್ಥೆಯಲ್ಲಿ ನಡೆಯಬೇಕಾದರೆ ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟಿನ ಗೌರವಾಧ್ಯಕ್ಷರಾದ ಡಾ.ಎನ್.ಎಲ್.ಶೆಟ್ಟಿ ಅವರೇ ಕಾರಣಿಬೂತರಾಗಿದ್ದು ಅವರು ಹಾಕಿದ ಮಾರ್ಗದರ್ಶನ ಮೇಲೆ ನಡೆದ ಕಾರಣ ಉಚಿತವಾಗಿ ಶ್ರೀ ಸಾಯಿ ಮಂದಿರ ನಿರ್ಮಾಣ ಮಾಡಲು ಸಾಲಂಕಿ ಮನೆತನದವರು ಜಾಗೆಯನ್ನು ನೀಡಿದ್ದಾರೆ ಮುಂಬರುವ ದಿನಮಾನಗಳಲ್ಲಿ ಶ್ರೀ ಸಾಯಿಬಾಬಾರವರ ಮಂದಿರ ನಿರ್ಮಾಣ ಮಾಡುವ ಕುರಿತು ಯೋಚನೆಯೂ ಕೂಡಾ ಸಂಸ್ಥೆಯ ಆಡಳಿತ ಮಂಡಳಿಯವರ ಹಾಗೂ ಸದಸ್ಯರಲ್ಲಿಯೂ ಇದೆ ಅದಕ್ಕೆ ಸಾಯಿಬಾಬಾರವರು ಆಶಿರ್ವದಿಸಬೇಕಾಗಿದೆ ಎಂದರು.
ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯ ಭೋರಮ್ಮ ಕುಂಭಾರ, ಹಾಗೂ ಆನಂದ ಕುಲಕರ್ಣಿ ಅವರು ಕೆಲವು ಸಾಯಿಬಾಬಾರವರ ಪವಾಡಗಳ ಕುರಿತು ವಿವರಿಸಿದರಲ್ಲದೇ ಸಾಯಿಬಾಬಾ ಸಂಸ್ಥೆ ಬೆಳೆಯಲು ಮುಂದಾಗಿದ್ದರ ಕುರಿತು ಈ ಹಿಂದಿನಿಂದ ಬಂದ ಸ್ಥಿತಿಗತಿಗಳ ಕುರಿತು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ ಕಮಿಟಿಯ ಗೌರವಾಧ್ಯಕ್ಷರಾದ ಡಾ.ಎನ್.ಎಲ್.ಶೆಟ್ಟಿ, ಅಧ್ಯಕ್ಷರಾದ ಬಸನಗೌಡ ಮದರಕಲ್ಲ, ಉಪಾಧ್ಯಕ್ಷರಾದ ಎಂ.ಜಿ.ಪಾಟೀಲ, ಸಿ.ಬಿ.ತಿಳಗೂಳ, ಸತೀಶ ದಪ್ತೆದಾರ, ಸುಭಾಸ ಸಾಲಂಕಿ, ಶಿವಲಿಂಗ ಸಾಲಂಕಿ, ಕೆ.ಸಿ.ಸಜ್ಜನ, ಬಿ.ಆರ್.ಲೋಕರೆ, ಕಾಶಿನಾಥ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಶ್ರೀ ಸಾಯಿಭಕ್ತ ಸಮೂಹದಿಂದ ಭಜನಾ ಕಾರ್ಯಕ್ರಮ ಹಾಗೂ ಮಹಾ ಆರತಿ ಕಾರ್ಯಕ್ರಮಗಳು ಜರುಗಿದವಲ್ಲದೇ ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾ ಪ್ರಸಾದ ವಿತರಿಸಲಾಯಿತು.
ಶ್ರೀಮತಿ ಸಜ್ಜನ ಪ್ರಾರ್ಥಿಸಿದರು. ಶಿಕ್ಷಕ ರಾಘವೇಂದ್ರ ಕುಲಕರ್ಣಿ ನಿರೂಪಿಸಿದರು. ಆನಂದ ಕುಲಕರ್ಣಿ ವಂದಿಸಿದರು.