ರಾಷ್ಟ್ರೀಯ ಬಸವಸೈನ್ಯದಿಂದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ
ಬಸವನಬಾಗೇವಾಡಿ:ಜು.22:ಶರಣ ಹಡಪದ ಅಪ್ಪಣ್ಣನವರು ಜಾತಿ ಧರ್ಮ ವರ್ಣರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ್ ಹೇಳಿದರು
ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ್ಣನವರ 890ನೆಯ ಜಯಂತೋತ್ಸವದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಶರಣರ ಕಾಯಕ ಬದುಕು ಯುವ ಪೀಳಿಗೆಗೆ ದಾರಿ ದೀಪವಾಗಬೇಕು ಶರಣರು ಯಾತಕ್ಕಾಗಿ ಹೋರಾಟ ಮಾಡಿದರು ಅದರ ಉದ್ದೇಶದ ಬಗ್ಗೆ ತಿಳಿದುಕೊಳ್ಳಬೇಕಿದೆ.ಅದರ ಬಗ್ಗೆ ಹೆಚ್ಚು ಬೆಳಕು ಚೆಲ್ಲುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು. ಅವರ ವಚನವನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಇವೆಲ್ಲವೂ ಸಾಧ್ಯ ಎಂದರು. ಇಂದಿನ ದಿನಗಳಲ್ಲಿ ಹೆಜ್ಜೆ ಹೆಜ್ಜೆಗೂ ಮೋಸ ವಂಚನೆ ನಡೆಯುತ್ತಿವೆ 12ನೆಯ ಶತಮಾನದಲ್ಲಿ ಶರಣರಿಗೂ ಕೂಡಾ ಮೋಸವಾಗಿತ್ತು ಈಗಲೂ ಸಮಾಜದಲ್ಲಿ ಅನ್ಯಾಯಗಳು ಮುಂದುವರಿಯುತ್ತಿವೆ ಅದರಿಂದ ಹೊರ ಬರಬೇಕಾದರೆ ಶಿವಶರಣ ಹಡಪದ ಅಪ್ಪಣ್ಣನವರ ಆದರ್ಶವನ್ನು ನಮ್ಮ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಹಡಪದ ಅಪ್ಪಣ್ಣ ಒಂದೇ ಸಮುದಾಯಕ್ಕೆ ಸೀಮಿತವಲ್ಲ ಮಾನವ ಜನಾಂಗಕ್ಕೆ ಸಂದೇಶ ನೀಡಿದ್ದಾರೆ ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು ಹಡಪದ ಅಪ್ಪಣ್ಣನವರ ಜಯಂತಿ ಜಯಂತಿಗೆ ಸೀಮಿತಗೊಳಿಸದೆ ಕ್ರಾಂತಿಕಾರಿ ಜಯಂತಿಯಾಗಿ ಹೊರಹೊಮ್ಮಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೈನ್ಯದ ತಾಲೂಕ ಘಟಕದ ಅಧ್ಯಕ್ಷರಾದ ಸಂಜು ಬಿರಾದಾರ್ ಮುಖಂಡರಾದ ಶ್ರೀಕಾಂತ್ ಕೊಟ್ರಶೆಟ್ಟಿ ನಿಂಗಪ್ಪ ಅವಟಿ ಮನ್ನಾನ ಶಾಬಾದಿ ಅರವಿಂದ್ ಗೊಳಸಂಗಿ ಮಂಜುನಾಥ್ ಜಾಲಗೇರಿ ಪ್ರಶಾಂತ್ ಮುಂಜಾನೆ ಬಸನಗೌಡ ಪಾಟೀಲ್ ಮಾಂತೇಶ್ ಹೆಬ್ಬಾಳ ಮಲ್ಲು ಪಟ್ಟಣಶೆಟ್ಟಿ ಅಣ್ಣಾರಾಯ್ ಪತಂಗಿ ಬಸವರಾಜ್ ಅಳ್ಳಗಿ ವೆಂಕಟೇಶ್ ಕರಾಡೆ ಸಂತೋಷ್ ಚಿಂಚೋಳ್ಳಿ ವೀರೇಶ್ ಗಬ್ಬೂರ್ ಅರುಣ ಗೊಳಸಂಗಿ ಮಹೇಶ್ ಪತ್ತಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು