ಗುರು ಪೂರ್ಣಿಮೆಯ ನಿಮಿತ್ಯ ಧಮ್ಮ ಉಪದೇಶ
ಆಳಂದ: ಜು.22:ಪಟ್ಟಣದ ಸಿದ್ಧಾರ್ಥ ದೀಕ್ಷಾ ಭೂಮಿಯಲ್ಲಿ ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿರುವ ಭಗವಾನ ಬುದ್ಧರ ಮೂರ್ತಿಗೆ ಪೂಜೆ ಸಲ್ಲಿಸಿ ಅಮರಜ್ಯೋತಿ ಭಂತೇಜಿ ಯವರು ಧಮ್ಮ ಉಪದೇಶ ನೀಡಿದರು .
ಬಾಬುರಾವ ಅರುಣೋದಯ ಮಾತನಾಡಿ ಬೌದ್ಧರ ಜೀವನ ಶೈಲಿಯಲ್ಲಿ ಜೀವನ ಸಾಗಿಸಬೇಕು ಬಸವ ಬುದ್ದ ಅಂಬೇಡ್ಕರರವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕಲ್ಯಾಣಿ ದೇವಂತಗಿ, ಆನಂದರಾಯ ಗಾಯಕವಾಡ,ಜೈಭೀಮ ದೊಡ್ಡಮನಿ, ಡಾ ಅವಿನಾಶ ದೇವನೂರ, ದೇವೇಂದ್ರ ಹಂಗರಗಿ, ಮಹಾದೇವ ಜಿಡ್ಡೆ, ತುಕಾರಾಮ ಭಾವಿಮನಿ, ಲಕ್ಷ್ಮಣನಡಗೇರಿ ಶಿವಪ್ಪ ತೋಳೆ ಮುಂತಾದವರು ಉಪಸ್ಥಿತರಿದ್ದರು