ಸಹಸ್ರಾರು ಭಕ್ತರಿಂದ ಜಿಡಗಾ ಶ್ರೀಗೆ ಗುರುವಂದನೆ ಅರ್ಪಣೆ
ಆಳಂದ:ಜು.22: ಜಿಡಗಾ ನವಕಲ್ಯಾಣಮಠದಲ್ಲಿ ಭಾನುವಾರ ಗುರು ಪೂರ್ಣಿಮೆ ಅಂಗವಾಗಿ ಭಕ್ತಾದಿಗಳು ಆಯೋಜಿಸಿದ್ದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ಗುರುವಂದನೆ ಕಾರ್ಯಕ್ರಮವು ಭಾಗವಹಿಸಿದ್ದ ಸಹಸ್ರಾರು ಸಂಖ್ಯೆಯ ಭಕ್ತಗಣಂಗಳು ಶಾಲು, ಪಲ ಪುಷ್ಟ ಅರ್ಪಿಸಿ ತಮ್ಮ ಭಕ್ತಿ ಭಾವ ಮರೆದರು.
ನೆರೆಯ ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತಾದಿಗಳು ಆಯೋಜಿಸಿದ್ದ ಬೃಹತ್ ಸಮಾರಂಭದಲ್ಲಿ ನಡೆದ ಸಂಗೀತ ಕಾರ್ಯಕ್ರಮ, ಶಿವಯೋಗಿ ಸಿದ್ಧರಾಮೇಶ್ವರ ಮತ್ತು ಡಾ. ಮುರುಘರಾಜೇಂದ್ರ ಶ್ರೀಗಳವರ ಕುರಿತಾದ ಸಮಾಜ ಕಾರ್ಯಗಳು ಮತ್ತು ಪವಾಡಗಳು ಸ್ಮರಿಸಲಾಯಿತು.
ಇದೇ ವರ್ಷ ಜಿಡಗಾ ಶ್ರೀಮಠದಿಂದ ಆರಂಭಿಸಿದ ಶಿವಯೋಗಿ ಜ್ಞಾನ ಮಂದಿರ ಉಚಿತ ವಸತಿ ಶಾಲೆಯ 120 ಮಕ್ಕಳಲ್ಲಿ ಸಾಂಕೇತಿಕವಾಗಿ ಐವರು ಮಕ್ಕಳು ಗುರುವಂದನಾ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅಲ್ಲದೆ, ನಮ್ಮಂತಹ ಬಡಮಕ್ಕಳಿಗೆ ಉಚಿತ ವಸತಿ ಶಾಲೆಯ ಅನುಕೂಲ ಕಲ್ಪಸಿ ನಮ್ಮ ಶೈಕ್ಷಣಿಕ, ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ಪ್ರೇರಪಿಸುವ ಶ್ರೀಗಳು ನಮ್ಮ ಬಾಳಗಿ ಬೆಳಕು ನೀಡಿದ್ದಾರೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಬೃಹತ್ ಸಭೆಯಲ್ಲೇ ಈ ವಸತಿ ಸಹಿತಿ ಉಚಿತ ಶಿಕ್ಷಣದ ಕುರಿತಾದ ಶ್ರೀಮಠಕ್ಕೆ ಶಾಲೆಗೆ ಪ್ರವೇಶ ಪಡೆದ ಮಕ್ಕಳ ಇಂದು ತಿಂಗಳಕಾಲದ ಚಟಿವಟಿಕೆಯ ವಿಡಿಯೋ ಚಿತ್ರೀಕರಣವನ್ನು ಪ್ರದರ್ಶಿಸಿದಾಗ ಭಕ್ತಾದಿಗಳ ಶ್ರೀಕಾರ್ಯಕ್ಕೆ ಜೈಕಾರ ಹಾಕಿ ಮನ ತಣ್ಣಿಸಿಕೊಂಡರು.
ಭಕ್ತಾದಿಗಳಿಂದ ಗುರುವಂದನೆ ಸ್ವೀಕರಿಸಿದ ನಂತರ, ಶ್ರೀಗಳು ಆಶೀರ್ವಚನ ನೀಡಿದ ಅವರು, “ಸಮಾಜದಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸುವ ಕಾರ್ಯವು ಮಹತ್ವದ್ದು. ಎಲ್ಲರೂ ಈ ಕಾರ್ಯಕ್ಕೆ ಬೆಂಬಲ ನೀಡಬೇಕು. ಧಾರ್ಮಿಕತೆಯೊಂದಿಗೆ ಶಾಂತಿಯಾಗಿರಲು ನಮ್ಮ ಹೆಜ್ಜೆಗಳನ್ನು ಇಡಬೇಕು,” ಎಂದು ಹೇಳಿದರು.
ಡಾ. ಮುರುಘರಾಜೇಂದ್ರ ಅಪ್ಪಂಗಳವರು ಬಡ ಮಕ್ಕಳ ಸಿಎಂ ಎಂದು ಜಂಗಮ ಸಂಘ ರಾಷ್ಟ್ರೀಯ ನಾಯಕ ಎಂ.ಡಿ. ಬದ್ರಿನಾಥ್ ಮತ್ತು ಆಂಧ್ರ ಟಿಡಿಪಿ ಪ್ರಧಾನ ಕಾರ್ಯದರ್ಶಿ ಕೋನಾಲ್ ಗೋಪಾಲ್ ರೆಡ್ಡಿ ಜೈಕಾರ ಹಾಕಿ ಭಕ್ತರನ್ನು ಹುರಿದುಂಬಿಸಿ ಉಚಿತ ವಸತಿ ಸಹಿತ ಶಿಕ್ಷಣ ಒದಗಿಸುವ ಮೂಲಕ ಅತ್ಯುತ್ತಮ ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯವನ್ನು ಮಾಡುತ್ತಿದ್ದಾರೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲಾ ಆಡಳಿತಾಧಿಕಾರಿ ಮಹಾದೇವ ಬೆಳ್ಳನ್ ಹಾಗೂ ಅಮೂಲ್ಯ ಹಿರೇಮಠ ಅವರು ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಹೂವಿನಹಳ್ಳಿ ಶ್ರೀ ಗುರುಲಿಂಗಯ್ಯಾ ಸ್ವಾಮಿ, ಶ್ರೀ ಜೇಮಸಿಂಗ್ ಮಹಾರಾಜ್, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ, ರೇವಣಸಿದ್ಧಪ್ಪ ನಾಗೂರೆ, ಬಸವೇಶ್ವರ ಕೃಷಿ ಕೇಂದ್ರದ ರಾಜಶೇಖರ ಪಾಟೀಲ, ಗುರುಶರಣ ಪಾಟೀಲ ಕೊರಳ್ಳಿ, ಮಹೋನಗೌಡ ಪಾಟೀಲ, ಪುರಸಭೆ ಸದಸ್ಯ ಈರಣ್ಣಾ ಹತ್ತರಕಿ, ಡಾ. ಸಂಗ್ರಾಮ ಬಿರಾದಾರ, ಡಾ. ರಾಜೇಂದ್ರ ರೆಡ್ಡಿ, ಪ್ರಬುದ್ಧ ಪಾಟೀಲ, ಅಣ್ಣಪ್ಪಗೌಡ ಪಾಟೀಲ, ಮುರುಲೀಧರ ಎಕಲಾರಕರ್ ಅನೇಕರು ಪಾಲ್ಗೊಂಡಿದ್ದರು. ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು, ರಾಜಕೀಯ ಗಣ್ಯರು, ಹರುಗುರು ಚರಮೂರ್ತಿಗಳು ಶ್ರೀಗಳನ್ನು ಶಾಲು ಹೂವಿನ ಹಾರ ಅರ್ಪಿಸಿ ನಮನ ಸಲ್ಲಿಸಿದರು.
ಸಾವಿರ ಮಕ್ಕಳ ಉಚಿತ ಶಿಕ್ಷಣ ವಸತಿ ಉದ್ದೇಶ:
“ಜಿಡಗಾ ಶ್ರೀ ಮಠವು ಸರ್ವ ಜಾತಿಯ ಬಡ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ನೀಡುವ ಮಹತ್ತಾದ ಉದ್ದೇಶ ಹೊಂದಿದೆ. ಈ ಶೈಕ್ಷಣಿಕ ವರ್ಷದಲ್ಲಿ 120 ವಿದ್ಯಾರ್ಥಿಗಳನ್ನು ಎಂಟು ಜಿಲ್ಲೆಗಳಿಂದ ಪ್ರವೇಶ ಮಾಡಲಾಗಿದೆ. ಹಂತ ಹಂತವಾಗಿ ಸಾವಿರ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ನೀಡುವ ಧೇಯೋದ್ದೇಶದೊಂದಿಗೆ ನಾವು ಗುರುಕುಲ ಮಾದರಿಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ವ್ಯಕ್ತಿತ್ವ, ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವ ಗುರಿಯನ್ನು ಹೊಂದಿದ್ದೇವೆ,” “ಈ ಮಹತ್ವದ ಕಾರ್ಯಕ್ಕೆ ಭಕ್ತರು ದಾನ ಧರ್ಮದ ಮೂಲಕ ಕೈಜೋಡಿಸಬೇಕು. ಶ್ರೀಮಠವು ಭಾವೈಕ್ಯತೆ ಮತ್ತು ಸಂಸ್ಕøತಿಕ ಜಾತ್ಯತೀತತೆಯ ಮಠವಾಗಿದ್ದು, ನಮ್ಮ ಹಿರಿಯ ಗುರುವರ್ಯರಾದ ಶಿವಯೋಗಿ ಸಿದ್ಧರಾಮೇಶ್ವರರ ಕಾರ್ಯವನ್ನು ಮುಂದುವರಿಸುತ್ತಿದೆ. ಭಕ್ತಾದಿಗಳು ತಮ್ಮ ತನು, ಮನ, ಧನಗಳಿಂದ ಸೇವಾ ಭಾವ ಕೈಗೊಂಡು, ಗುರುವಿನ ಕೃಪೆಗೆ ಕರ್ತಾರ್ಥರಾಗಬೇಕು,” ಶ್ರೀಮಠವು ಆರ್ಥಿಕವಾಗಿ ಸಂಪತ್ತಿನಿಂದ ಕೂಡಿದ್ದು, ಸಮಾಜದ ಧಾರ್ಮಿಕ ಕಾರ್ಯಗಳಲ್ಲಿ ನಿರಂತರ ತೊಡಗಿಸಿಕೊಂಡಿದೆ. ನಮ್ಮೆಲ್ಲರ ಹಾರೈಕೆ, ಪೆÇ್ರೀತ್ಸಾಹ ಮತ್ತು ಸೇವೆಯಿಂದ ಈ ಮಠವು ಇನ್ನಷ್ಟು ಮಹತ್ತರ ಕಾರ್ಯಗಳನ್ನು ನಡೆಸಲು ಸಾಧ್ಯವಾಗುತ್ತದೆ,”
ಡಾ. ಮುರುಘರಾಜೇಂದ್ರ ಸ್ವಾಮೀಜಿ
ಜಿಡಗಾ ನವಕಲ್ಯಾಣ ಮಠ