ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಹುಮನಾಬಾದ್:ಜು.22:ಪಟ್ಟಣದ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ನಿಮಿತ್ಯ ಡಾ. ಸಿದ್ದು ಶಾಸಕ ಸಿದ್ದು ಪಾಟೀಲ್ ಸಮ್ಮುಖದಲ್ಲಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಅರ್ಪಿಸಿ ನಮನ, ಸಲ್ಲಿಸಲಾಯಿತು.
ಬಳಿಕ ಡಾ. ಶಾಸಕ ಸಿದ್ದು ಪಾಟೀಲ್ ಮಾತನಾಡಿ ಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರು ಪ್ರಮುಖ ಪಾತ್ರವಹಿಸಿದ್ದರು. ಅವರ ತತ್ವಾದರ್ಶ ಇಂದಿಗೂ ಅನನ್ಯವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಹಸನಾಗುತ್ತದೆ. ಅಪ್ಪಣ್ಣನವರ ಜೀವನ, ತತ್ವ, ಸಿದ್ದಾಂತಗಳನ್ನು ಎಲ್ಲರಿಗೂ ತಿಳಿಸಲು ಜಯಂತಿಯನ್ನು ಆಚರಿಸಲಾಗುತ್ತಿದೆ. ಶರಣರ ವಚನಗಳನ್ನು ಆದರ್ಶವಾಗಿಟ್ಟುಕೊಂಡು ಬದುಕು ರೂಪಿಸಿಕೊಳ್ಳಬೇಕು. ಅಪ್ಪಣ್ಣನವರು ಒಬ್ಬ ಸೇವಾಯೋಗಿ, ಕಾಯಕನಿರತ ಶರಣರಾಗಿದ್ದಾರೆ. ಅಂಥಹ ಮಹಾನ್ ಶರಣರು ನಡೆದು ಬಂದ ದಾರಿಯಲ್ಲಿ ಸಾಗಿದರೆ ಜೀವನ ಸಾರ್ಥಕ ಸಾರ್ಥಕವಾಗುತ್ತದೆ. ಅವರ ಸ್ಮರಣೆಗೂ ಅರ್ಥಪೂರ್ಣತೆ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅಂಜುಮ್ ತಬಸುಮ್, ಗ್ರೇಡ್ 2 ತಹಸಿಲ್ದಾರ್ ಮಂಜುನಾಥ ಪಂಚಾಳ , ಹಡಪದ ಸಮಾಜದ ಅಧ್ಯಕ್ಷರಾದ ಶಿವಶಂಕರ ಹಡಪದ, ರೇವಣಸಿದ್ದ ಹಡಪದ, ಕಲ್ಲಪ್ಪಾ ಹಡಪದ, ಮಲ್ಲಿಕಾರ್ಜುನ ಹಡಪದ, ಉಮೇಶ ಹಡಪದ, ಪರಮೇಶ ಹಡಪದ, ಈರಪ್ಪಾ ಹಡಪದ, ಆಕಾಶ ಹಡಪದ ,ಸೇರಿದಂತೆ ಹಡಪದ ಸಮಾಜದ ಮುಖಂಡರು ಇದ್ದರು.