ಶರಣ ಮಂಟಪದಲ್ಲಿ ಗುರುಪೂರ್ಣಿಮೆ ಆಚರಣೆ
ಆಳಂದ:ಜು.22: ಪಟ್ಟಣದ ಶರಣನಗರದ ಸದ್ಗುರು ಶ್ರೀ ರೇವಣಸಿದ್ಧ ಶಿವಶರಣ ಮಂಟಪದಲ್ಲಿ ಭಕ್ತಾದಿಗಳು ಸೇರಿ ಗುರುಪೂರ್ಣಿಮೆ ಅಂಗವಾಗಿ ಪೀಠಾಧಿಪತಿ ಶ್ರೀ ಚನ್ನಬಸವ ಪಟ್ಟದೇವರಿಗೆ ಗುರುವಂನೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಭಕ್ತಾದಿಗಳು ನೀಡಿದ ಗುರುವಂದನೆ ಸ್ವೀಕರಿಸಿ ಆಶೀರ್ವನ ನೀಡಿದ ಶ್ರೀ ಚನ್ನಬಸವ ಪಟ್ಟದೇವರು, ಗುರು ಸಿದ್ಧರೂಢರ, ಸದ್ಗುರು ರೇವಣಸಿದ್ಧ ಶಿವಶರಣರು ಸೇರಿದಂತೆ ಪಂರಪರೆಯ ಎಲ್ಲ ಶಿವಶರಣರ ತತ್ವಗಳಾಚರಣೆಯ ಮೂಲಕ ಸರ್ವರು ಸನ್ಮಾರ್ಗದಲ್ಲಿ ಮುನ್ನೆಡೆದು ಒಳ್ಳೆಯ ಬದುಕು ಸಾಗಿಸಬೇಕು. ಧರ್ಮ ಮಾರ್ಗದಲ್ಲಿ ನಡೆದರೆ ಸಂಸ್ಕಾರ ಒಳ್ಳೆಯ ವಿಚಾರ ಸುಖ ಶಾಂತಿ ಮಾನಿಸಿಕ ನೆಮ್ಮದಿ ನಾಂದಿಯಾಗಲಿದೆ ಎಂದು ಹೇಳಿದರು.
ಗುರುವಿಗಿಂತ ಯಾರು ದೊಡ್ಡವರಲ್ಲ ಗುರುಗಳು ತಮ್ಮ ಭಕ್ತರ, ಶಿಷ್ಯರ ಉದ್ದಾರಕ್ಕಾಗಿ ಜೀವನವೀಡಿ ಬದಕನ್ನು ಸವೆಸಿ ಸನ್ಮಾರ್ಗ ತೋರಿದ್ದಾರೆ. ಅವರ ಹಾಕಿಕೊಟ್ಟ ಮಾರ್ಗವೇ ಅಂತಿವಾಗಿ ಆಚರಣೆಗೆ ತರಬೇಕು ಎಂದು ಹೇಳಿದರು.
ಮುಖಂಡ ಸೂರ್ಯಕಾಂತ ತಟ್ಟಿ, ಸಿದ್ಧರೂಢ ಮಠದ ಧರ್ಮಲಿಂಗ ಜಗದಿ ಸೇರಿದಂತೆ ಅನೇಕ ಶರಣ, ಶರಣಿಯಲ್ಲಿ ಪಾಲ್ಗೊಂಡು ಗುರುವಿನ ಪುಷ್ಪಾರ್ಚನೆ, ಭಜನೆ, ಮಹಾಂಗಳಾರುತಿ ಕೈಗೊಂಡು ದರ್ಶನಾಶೀರ್ವಾದ ಪಡೆದರು.