ಹಡಪದ ಅಪ್ಪಣ್ಣನವರ ವೃತ್ತದಲ್ಲಿ ಜಯಂತಿ ಆಚರಣೆ
ಬೀದರ್ :ಜು. 22:ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸಂಘದಿಂದ ಮಹಾತ್ಮ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಭಾನುವಾರ ಬೆಳಿಗ್ಗೆ 8 ಗಂಟೆಗೆ ನಗರದ ಸಿಎಂಸಿ ಬಡಾವಣೆಯಲ್ಲಿನ ಹಡಪದ ಅಪ್ಪಣ್ಣನವರ ವೃತ್ತದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರಾರ್ಥನೆಯೊಂದಿಗೆ ಜಯಂತಿ ಕಾರ್ಯಕ್ರಮ ಆರಂಭಗೊಂಡು ಹಡಪದ ಅಪ್ಪಣ್ಣನವರ ಪುತ್ತಳಿಗೆ ಪೂಜೆ ಸಲ್ಲಿಸಿ ಹೂಮಾಲೆ ಅರ್ಪಿಸಿ, ಷಟಸ್ಥಲ ಧ್ವಜಾರೋಹಣದೊಂದಿಗೆ ಮಾಡಲಾಯಿತು.
ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸಂಘದ ಜಿಲ್ಲಾಧ್ಯಕ್ಷರಾದ ಪ್ರಭುರಾವ ತರನಳ್ಳಿ ವಕೀಲರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಚಂದನಹಳ್ಳಿ, ಬೀದರ್ ತಾಲೂಕು ಅಧ್ಯಕ್ಷ ಸುಭಾಶ ಹಳ್ಳಿಖೇಡ (ಕೆ), ಕಾರ್ಯದರ್ಶಿ ಹಣಮಂತರಾವ ಹುಣಜಿ ಹಾಗೂ ಪದಾಧಿಕಾರಿಗಳಾದ ಹಡಪದ ಅಪ್ಪಣ್ಣ ಸಮಾಜದ ಪ್ರಮುಖರಾದ ಶಿವರಾಜ ಹೊಚಕನಳ್ಳಿ, ಶಿವಕುಮಾರ ಚಿದ್ರಿ, ಪ್ರದೀಪ ಔರಾದ್, ಶಾಂತಕುಮಾರ ಆಣದೂರ, ವಿಜಯಕುಮರ ಹಿಲಾಲಪೂರ, ರಾಜಶೇಖರ ವರವಟ್ಟಿ, ಮಲ್ಲಿಕಾರ್ಜುನ ಬೇನಚಿಂಚೋಳಿ, ಮಡೇಪ್ಪ ಕಾಳಗೆ, ಶಿವಶರಣಪ್ಪ ಚಳಕಾಪೂರ, ಪಾರ್ವತಿ, ಪ್ರೇಮಲಾ, ಸುವರ್ಣ, ಲಕ್ಷ್ಮಿ, ಸಂಗೀತಾ, ಕವಿತಾ, ಕನ್ಯಾಕುಮಾರಿ, ಮಲ್ಲಮ್ಮ, ಮಹಾದೇವಿ, ಸೋಮೇಶ್ವರಿ, ನಂದಿನಿ, ದಿವ್ಯ, ಕವಿತಾ, ಮತ್ತು ಶ್ರೀದೇವಿ ಹಾಗೂ ಗಂಗಯ್ಯ ಸ್ವಾಮಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಮಹೇಶ ಗೋಂದೆಗಾವ, ಭೀಮರಾವ ಮಂಗಲಗಿ ಹಾಗೂ ಪದಾಧಿಕಾರಿಗಳು ಹಾಗೂ ಬಡಾವಣೆಯ ಹಲವಾರು ಜನರು ಭಾಗವಹಿಸಿದ್ದರು.