ಸದೃಢ ಸಮಾಜ ನಿರ್ಮಾಣದಲ್ಲಿ ಸ್ವಯಂ ಸೇವಕರ ಪಾತ್ರ ಅಪಾರ: ಪಾಟೀಲ್
ಸೈದಾಪುರ:ಜು.22:ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಎನ್‍ಎಸ್‍ಎಸ್ ಸ್ವಯಂ ಸೇವಕರ ಕೊಡುಗೆ ಅಪಾರವಾದುದ್ದು ಎಂದು ಆನೂರು ಬಿ ಗ್ರಾಮದ ಮಲ್ಲಣ್ಣಗೌಡ ಪೆÇೀಲಿಸ್ ಪಾಟೀಲ್ ಅಭಿಪ್ರಾಯಪಟ್ಟರು.
ಸಮೀಪದ ಆನೂರ ಬಿ ಗ್ರಾಮದಲ್ಲಿ ಶ್ರೀ ಬಾಲಾಜಿ ಪದವಿ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಈ ಶಿಬಿರದ ಸಮಯದಲ್ಲಿ, ನೀವು ಸಮಾಜದ ಒಳಿತಿಗಾಗಿ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರಿ, ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ ಕಾರ್ಯಕ್ರಮಗಳಿಂದ ಹಿಡಿದು ಪರಿಸರ ಸಂರಕ್ಷಣೆಯ ಉಪಕ್ರಮಗಳವರೆಗೆ, ನೀವು ಕೈಗೊಳ್ಳುವ ಪ್ರತಿಯೊಂದು ಕಾರ್ಯವು ಸಮುದಾಯದ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರುತ್ತವೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಪೆÇ್ರೀ. ಕಿಶನ್ ರಾಠೋಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್‍ಎಸ್‍ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಮುದಾಯಕ್ಕೆ ಪ್ರಯೋಜನೆವಾಗುವುದಲ್ಲದೆ ನಿಮ್ಮ ವೈಯಕ್ತಿಕ ಬೆಳವಣಿಗೆ ಗಣನಿಯ ಪರಿಣಾಮ ಬೀರುತ್ತದೆ. ನಾಯಕತ್ವ, ತಂಡದ ಕೆಲಸ ಮತ್ತು ಸಮಸ್ಯೆ-ಪರಿಹರಿಸುವಂತಹ ಅಮೂಲ್ಯವಾದ ಜೀವನ ಕೌಶಲ್ಯಗಳನ್ನು ನೀವು ಕಲಿಯುತ್ತಿರಿ ಎಂದು ಹೇಳಿದರು.
ಶಾಲೆಯ ಮುಖ್ಯಗುರು ಹಣಮಂತ್ರಾಯ, ಗೋಪಾಲ ಶೇಖಸಿಂದಿ, ಬಸವರಾಜ, ಶರಣಪ್ಪ, ಮರಿಲಿಂಗ ಪೆÇೀತರಾಜ, ಶ್ರೀನಿವಾಸ, ಮೈಬೂಬಲಿ, ಉಪನ್ಯಾಸಕರಾದ ಮೀನಾಕ್ಷಿ, ಮಂಜುನಾಥ, ಹೊನ್ನಪ್ಪ ಸಗರ, ಮಾರುತಿ, ಅಭಿಲಾಷ, ಸೇರಿದಂತೆ ಆನೂರ ಗ್ರಾಮದ ಹಿರಿಯ ಗಣ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ವೀರಮ್ಮ ಆಸಪಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದರು. ಶಿಬಿರಾರ್ಥಿ ಲಕ್ಷ್ಮಣ ನಿರೂಪಿಸಿದನು. ಉಪನ್ಯಾಸಕ ಬನ್ನಪ್ಪ ವಂದಿಸಿದರು.