ರೈತ ಹುತಾತ್ಮ ದಿನಾಚರಣೆ
ಲಕ್ಷ್ಮೇಶ್ವರ,ಜು 22: ತಾಲೂಕಿನ ಗೋನಾಳ ಗ್ರಾಮದಲ್ಲಿ ರವಿವಾರ ರೈತ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾಮದ ರೈತರಾದ ಫಕೀರ್ ಗೌಡ ಮಣಕಟ್ಟಿ ರಾಮಣ್ಣ ಹುಬ್ಬಳ್ಳಿ ಉಡಚಪ್ಪ ವಾಲಿಕಾರ್ ಎಂಬ ರೈತರು ಬೆಂಗಳೂರಿನಲ್ಲಿ 31 ವರ್ಷಗಳ ಹಿಂದೆ ಜರುಗಿದ್ದ ಅಂತರಾಷ್ಟ್ರೀಯ ರೈತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೋದಾಗ ಹುತಾತ್ಮರಾಗಿದ್ದರು.
ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಗ್ರಾಮದಲ್ಲಿ ರೈತ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ರವಿವಾರ ಮೂವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅವರು ಮಾತನಾಡಿ ರೈತರು ಈ ದೇಶದ ಬೆನ್ನೆಲುಬಾಗಿದ್ದು ಅವರು ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಮಾರುಕಟ್ಟೆ ಸೌಲಭ್ಯ ಸಾರಿಗೆ ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ರೈತರ ಉದ್ದಾರ ಆಗಲು ಸಾಧ್ಯ ಇಂದು ಪ್ರತಿಯೊಬ್ಬ ರೈತರಿಗೂ ಸರ್ಕಾರದ ಯೋಜನೆಗಳು ತಲುಪಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್ ಪಿ ಬಳಿಗಾರ ಮತ್ತು ಶಿರಟ್ಟಿ ಮಂಡಲ್ ಬಿಜೆಪಿ ಅಧ್ಯಕ್ಷ ಸುನಿಲ್ ಮಹಾಂತ ಶೆಟ್ಟರ್ ಗ್ರಾಮದ ಹಿರಿಯರಾದ ಭರ್ಮಣ್ಣ ರೊಟ್ಟಿಗ್ವಾಡ ರೈತರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಯೋಗ ಮತ್ತು ಧ್ಯಾನ ಆಶ್ರಮದ ಶ್ರೀಗಳಾದ ರಮೇಶ ಅಜ್ಜನವರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜನ ಗೌಡ ಕೆಂಚನಗೌಡರ ನಿಂಗಪ್ಪ ಬನ್ನಿ ಅಣ್ಣಪ್ಪ ರಾಮಗಿರಿ ನಿಂಗನಗೌಡ ಮಣಕಟ್ಟಿ ಚಂದ್ರು ಕರಿಗೌಡರ್ ಬಸವರಾಜ ಮಲ್ಲೂರ್ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ ಟಾಕಪ್ಪ ಸಾತಪುತೆ ಈಶಪ್ಪ ಸೊರಟೂರ ಗೋನಾಳ ಗ್ರಾಮ ಘಟಕದ ರೈತ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಗ್ರಾಮದ ಹಿರಿಯರು ಯುವಕರು ಪಾಲ್ಗೊಂಡಿದ್ದರು.
ಬಸವರಾಜ ಮಲ್ಲೂರ್ ಕಾರ್ಯಕ್ರಮ ನಿರ್ವಹಿಸಿದರು.