ವೀರಶೈವ ಮಹಾಸಭಾ ಜಿಲ್ಲಾ ಸಮಿತಿಗೆಅಧ್ಯಕ್ಷರಾಗಿ ಬಿಚ್ಚುಗಲ್ಲು ಪಂಚಾಕ್ಷರಪ್ಪ ಆಯ್ಕೆ
* ಚಾನಾಳ್ ಶೇಖರ್ ಗೆ  ಸೋಲು
* 7791 ಮತದಾರರ ಪೈಕಿ 5868 ಜನರಿಂದ ಮತದಾನ ಶೇ 78.4 ರಷ್ಟು ಮತದಾನ
* ಬೆಳಿಗ್ಗೆ ವರೆಗೆ ನಡೆದ ಮತಗಳ ಎಣಿಕೆ
* ಕಾರ್ಯಕಾರಿಣಿಯಲ್ಲಿ ಚಾನಾಳ್ ಗುಂಪಿಗೆ 22, ಪಂಚಾಕ್ಷರಪ್ಪ ಗುಂಪಿನಿಂದ 8  ಜನ ಆಯ್ಕೆ
ಎನ್.ವೀರಭದ್ರಗೌಡ
ಬಳ್ಳಾರಿ:ಜು,22-  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಸಮಿತಿಗೆ ನಿನ್ನೆ ನಡೆದ ಚುನಾವಣೆಯಲ್ಲಿ  ಹಾಲಿ ಅಧ್ಯಕ್ಷ ಚಾನಾಳ್ ಶೇಖರ್ ವಿರುದ್ದ ಈ ಬಾರಿಯ ನಿರೀಕ್ಷೆಯಂತೆ  ನಗರದ ಎಸ್.ಜಿ.ಕಾಲೇಜಿನ ಉಪನ್ಯಾಸಕ ಬಿಚ್ಚುಗಲ್ಲು ಪಂಚಾಕ್ಷರಪ್ಪ 223  ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಇನ್ನು 30 ಜನರ ಕಾರ್ಯಕಾರಿಣಿಯಲ್ಲಿ 22 ಜನರು ಶೇಖರ್ ಗುಂಪಿನಿಂದ, 8 ಜನರು ಪಂಚಾಕ್ಷರಪ್ಪ ಗುಂಪಿನಿಂದ ಆಯ್ಕೆಯಾಗಿದ್ದಾರೆ.
ಸಹಾಯಕ ಚುನಾವಣಾಧಿಕಾರಿ ಲಿಂಗನಗೌಡ ಅವರು ಬಸವ ಭವನದಲ್ಲಿ ಇಂದು ಮಧ್ಯಾಹ್ನ 12 ನಂತರ ಫಲಿತಾಂಶವನ್ನು ಘೋಷಣೆ ಮಾಡಿದರು.
ಅಧ್ಯಕ್ಷ ಸ್ಥಾನದ ಮತಗಳ ಎಣಿಕೆ ನಡೆಯಿತು. ಕುರುಗೋಡಿನಲ್ಲು ಮಾತ್ರ ಕೊನೆಗೆ ನಡೆದಿದ್ದರಿಂದ ಅಧ್ಯಕ್ಷ ಸ್ಥಾನದ ಫಲಿತಾಂಶ ಮಧ್ಯರಾತ್ರಿ ವೇಳೆಗೆ ಪ್ರಕಟವಾಯ್ತು.   ಶೇಖರ್ ಅವರಿಗೆ 2642 ಮತ ಬಂದರೆ,  ಪಂಚಾಕ್ಷರಪ್ಪ ಅವರಿಗೆ 2865  ಮತಗಳು ಬಂದಿವೆ. ಇನ್ನು ಮೆಣಸಿನ ಈಶ್ವರಪ್ಪ ಅವರಿಗೆ 157 ಮತಗಳು ಬಂದಿವೆ ಎಂದರು. ಸ್ಥಳದಲ್ಲೇ ಇದ್ದ ಅಧ್ಯಕ್ಷ ಅಭ್ಯರ್ಥಿ ಪಂಚಾಕ್ಷರಪ್ಪ ಅವರ ಗುಂಪು ಕೇಕೆ ಹಾಕಿ ಗೆಲುವನ್ನು ಸಂಭ್ರಮಿಸಿತು.
ಈ ವೇಳೆ ಮಾತನಾಡಿದ ಪಂಚಾಕ್ಷರಪ್ಪ ಅವರು, ಇದು ಸಮಸ್ತ ವೀರಶೈವ ಲಿಂಗಾಯತ ಸಮುದಾಯದ ಗೆಲುವು, ಸಂಘಟಿತ ಪ್ರಯತ್ನ, ಶಿಷ್ಯ ವೃಂಧ ಸಹಕಾರ ನನ್ನ ಸೇವೆಯನ್ನು ಪರಿಗಣಿಸಿ ಮತದಾರರು ಆಶಿವರ್ದಿಸಿದ್ದಾರೆ. ನಮ್ಮ ತಂಡಕ್ಕೆ ಬಹುಮತ ಬರದಿದ್ದರೂ, ಗೆದ್ದವರೆಲ್ಲ ನಮ್ಮವರೇ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯದ ಅಭಿವೃದ್ದಿಯ ಕಾರ್ಯಕ್ಕೆ ಪ್ರಯತ್ನಿಸುವೆ ಎಂದರು.
ಚುನಾವಣಾಧಿಕಾರಿಗಳು ಆಯ್ಕೆಯಾದವರಿಗೆ ಶುಭಕೋರಿದರು.
ಶೇಖರ್ ಅವರು ಸಿರುಗುಪ್ಪದಲ್ಲಿ ಮಾತ್ರ ತಮ್ಮ‌ ಪ್ರತಿಸ್ಪರ್ಧಿಗಿಂತ ಹೆಚ್ಚು ಮತ ಪಡೆದರೆ ಉಳಿದಂತೆ ಬಳ್ಳಾರಿ, ಕಂಪ್ಲಿ, ಸಂಡೂರು ಹಾಗು ಕುರುಗೋಡಿನಲ್ಲಿ ಪಂಚಾಕ್ಷರಪ್ಪ ಅವರಿಗೆ ಲೀಡ್ ಬಂದಿದೆ.
ಇನ್ನು  10 ಜನರ ಮಹಿಳಾ ಕಾರ್ಯಕಾರಿಣಿಯಲ್ಲಿ ಚಾನಾಳ್  ಗುಂಪಿಗೆ 8, ಪಂಚಾಕ್ಷರಪ್ಪ ಗುಂಪಿಗೆ 2,
20 ಜನರ ಪುರುಷರ ಕಾರ್ಯಕಾರಿಣಿಯಲ್ಲಿ  ಚಾನಾಳ್ ಗುಂಪಿನಲ್ಲಿ  ಗುಂಪಿಗೆ ಬಹುಮತ ಬಂದಿದೆ.
ನಿನ್ನೆ ನಗರದ ಬಳ್ಳಾರಿಯ ಅಲ್ಲಂ ಸುಮಂಗಳಮ್ಮ‌ ಕಾಲೇಜಿನಲ್ಲಿ ಮತದಾನ ಸಮಯ ಸಂಜೆ 4 ಕ್ಕೆ  ಮುಗಿದರೂ, ಮತದಾನ ಮಾಡುವವರು ಇದ್ದರಿಂದ 5 ಗಂಟೆ ವರೆಗೆ ನಡೆಯಿತು. ನಂತರ ಮತಗಳ ಎಣಿಕೆ ನಡೆಯಿತು.
ಒಂದು ರೀತಿ ಈ ಚುನಾವಣೆ ತೀವ್ರ ಪೈಪೋಟಿಯಿಂದ ಕೂಡಿತ್ತು. ಚಾನಾಳ್ ಶೇಖರ್ ಅವರು ಹಲವು ಅಂಶಗಳ ವಿರೋಧವನ್ನು ಎದುರಿಸಬೇಕಾಯ್ತು. ಅದಕ್ಕಾಗಿ ಪಂಚಾಕ್ಷರಪ್ಪ ಅವರ ಗೆಲುವಿಗೆ ಸಹಕಾರಿಯಾಯ್ತು ಎನ್ನಬಹುದು.
ಮತದಾರರ ಅನಿಸಿಕೆಯಂತೆ,  ಮತದಾರರಲ್ಲಿ ಇರುವ ಬಿಜೆಪಿ ಪಕ್ಷದವರು ಯಾವುದೇ ಕಾರಣಕ್ಕೂ ಶೇಖರ್ ಗೆ ಮತ ನೀಡದಂತೆ ಚರ್ಚಿಸಿ ನಿರ್ಣಯವನ್ನು ಮಾಡಿದ್ದರಂತೆ. ಕಾರಣ ಶೇಖರ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರಿಂದ.
ಇನ್ನು ಲಿಂಗಾಯತರಲ್ಲದವರಿಗೆ ಸದಸ್ಯತ್ವ ನೀಡಲಾಗಿದೆಂಬ ಆರೋಪವನ್ನು ಎದುರಿಸಿದ್ದ.
ಪ್ರತಿಸ್ಪರ್ಧಿ ವಿರುದ್ದ ಕೇಸು ನೀಡುವಂತೆ ಪ್ರೋತ್ಸಾಹಿಸಿದ್ದಾರೆಂಬ ಆರೋಪ. ಅಲ್ಲದೆ ಕಳೆದ  ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರಿಗೆ ಟಿಕೆಟ್ ಕೇಳದೆ ಅಲ್ಲದವರಿಗೆ ಕೊಡುವಂತೆ ಸಮುದಾಯದ ಮುಖಂಡರಿಂದ ಹೇಳಿಕೆ ಕೊಡಿಸಿದ್ದು.   ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಎಸ್.ಜಿ.ಕಾಲೇಜಿನಲ್ಲಿ ಬೃಹತ್ ಸಮಾರಂಭ ನಡೆಸಿದರು ಎಂಬ ಅಂಶಗಳು ವ್ಯಕ್ತವಾಗಿವೆ. ಜೊತೆಗೆ ಅವರು ಮಹಸಭಾದ ಸಂಘಟನೆ, ಜಿಲ್ಲಾ ಸಮಿತಿಗೆ ಸರ್ಕಾರದ ಮಟ್ಟದಲ್ಲಿ ನಿವೇಶನ ಪಡೆಯಲು ನಡೆಸಿದ ಪ್ರಯತ್ನ ಮೊದಲಾದವುಗಳ ಬಗ್ಗೆ ಪ್ರಶಂಸೆಯೂ ಇದೆ.
 ಪಂಚಾಕ್ಷರಪ್ಪ ಅವರ ಗೆಲುವಿಗೆ  ಮತದಾರರು ಶೇಖರ್ ಅವರ  ಮೇಲೆ ಹೊಂದಿದ್ದ ಮುನಿಸು ಮುಖ್ಯ ಕಾರಣವಾಗಿದೆ. ಜೊತೆಗೆ ಅವರ ಶಿಷ್ಯ ವೃಂದದ ಪ್ರಯತ್ನ, ತಂಡದ ಸಂಘಟಿತ ಹೋರಾಟದ ಫಲ ದೊರೆತಿದೆ ಎನ್ನಬಹುದು.
@12bc = ಕಾರ್ಯಕಾರಿಣಿಗೆ ಆಯ್ಕೆಯಾದವರು
@12bc = ಮಹಿಳೆಯರು
ಆನೆ ರೂಪ -3278
ಎಂ.ಕಲ್ಯಾಣಿ -3000
ಯಾಟಿ ಭ್ರಮರಾಂಭ- 2995
ಶಾನವಾಸಪುರ ಅನಿತ- 2930
ನಂದ ಎಸ್.ಪಾಟೀಲ್- 2866
ಪುಷ್ಪಲತಾ ಸಿ.ಎಂ.- 2837
ಎಂ.ವಿಜಯಲಕ್ಷ್ಮಿ- 2784
ವನಜಾಕ್ಷ್ಕಿ-2782
ಹೇಮ‌ ಮಂಜುನಾಥ ಹೊಸರುಮಠ- 2777
ಛಾಯ ಮಂಜುನಾಥ- 2761
ಪುರುಷರು
ಟಿಎಂ.ಕಿರಣ್ ಕುಮಾರಸ್ವಾಮಿ- 3129
ಗೋನಾಳ್ ಎಂ.ನಾಗಭೂಷಣಗೌಡ- 2977
ಯಾಳ್ಪಿ ಮೇಟಿ ದಿವಾಕರಗೌಡ- 2891
ದರೂರು ಸಾಗರ್ ಜಿ.- 2867
ಕೋರಿ ಚೆನ್ನಬಸಪ್ಪ- 2822
ಬಿ.ನಾಗರಾಜ್- 2764
ಯು.ನಂದೀಶ್- 2757
ಗಾಂಗಾವತಿ ವೀರೇಶ್- 2706
ಕೆ.ಪಿ.ಚೆನ್ನಬಸವರಾಜ್ ಕರ್ಚಿಗನೂರು- 2668
ಕನಕಗಿತಿ ರೇಣುಕಪ್ಪ – 2630
ಮದಿರೆ ಕುಮಾರಸ್ವಾಮಿ- 2582
ಎಸ್.ಎಂ. ನಾಗರಾಜಸ್ವಾಮಿ- 2544
ಎನ್.ಚಂದ್ರಮೋಹನ್- 2490
ಎಸ್.ವೈ.ಕಟ್ಟೆಗೌಡಸಂಗನಕಲ್ಲು- 2486
ಹೆಚ್.ಆರ್.ಮಲ್ಲಿಕಾರ್ಜುನಗೌಡ ಹಲಕುಂದಿ.- 2466
ಸುರೇಶ್ ಗೌಡ ಕೆ.-2428
ಶಿಕುಮಾರ್ ಕೆ.ಎಂ.- 2412
ಡಿ.ಅರುಣ್ ಕುಮಾರ್- 2401
ಆರ್. ಪ್ರಭುಶೇಖರಗೌಡ- 2391
ಪಿ.ಮಲ್ಲಿಕಾರ್ಜುನ- 2385