ಹೆಚ್.ಎಲ್.ಸಿ. ಕಾಲುವೆಗೆ ಇಂದು  ನೀರು ಬಿಡುಗಡೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಜು,22- ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಜಂಟಿ ಕಾಲಿವೆಯಾಗಿರುವ ತುಂಗಭದ್ರ ಬಲದಂಡೆಯ ಮೇಲ್ಮಟ್ಟದ(ಹೆಚ್ ಎಲ್ ಸಿ) ಕಾಲುವೆಗೆ ಇಂದು ಬೆಳಿಗ್ಗೆ : 9:30 ಕ್ಕೆ ತುಂಗಭದ್ರ ಮಂಡಳಿಯ ಮುಖ್ಯ ಕಾರ್ಯದರ್ಶಿ ಓ.ಆರ್.ಕೆ.ರೆಡ್ಡಿ ಇವರು ಪೂಜೆ ಸಲ್ಲಿಸಿ ಕಾಲುವೆಗೆ ಡ್ಯಾಂನಿಂದ ನೀರನ್ನು ಹರಿ  ಬಿಟ್ಟಿದ್ದಾರೆ.
ಈ ವೇಳೆ ರೆಡ್ಡಿ ಅವರು. ತುಂಗಭದ್ರ ಜಲಾಶಯವು ತುಂಬುತ್ತಿದ್ದು ನಾಡಿದ್ದು ಜು.24 ರಂದು ಎಲ್ಲಾ ಗೇಟುಗಳನ್ನು ಎತ್ತಿ ನದಿಗೆ ನೀರನ್ನು ಬಿಡಲಾಗುವುದು. ಅದಕ್ಕಾಗಿ ನದಿಯ ದಡದಲ್ಲಿ ವಾಸಿಸುವ ರೈತರು. ಸಾರ್ವಜನಿಕರು, ಸುರಕ್ಷಿತ ಸ್ಥಳಗಳಿಗೆ ತಲುಪಲು ಸಿದ್ದರಾಗಬೇಕೆಂದು ಹೇಳಿದ್ದಾರೆ.
ತುಂಗಭದ್ರ ಮಂಡಳಿಯ ಸುಪ್ರಿಂಟೆಂಡೆಂಟ್ ಇಂಜಿನಿಯರ್ ಶ್ರೀ ಶ್ರೀಕಾಂತ್‌ ರೆಡ್ಡಿ, ಎಕ್ಸಿಕ್ಯೂಟಿ ಇಂಜಿನಿಯರ್ ಶ್ರೀ ರವಿಚಂದ್ರ, ಸಬ್ ಡಿವಿಜನ್ ಅಧಿಕಾರಿಗಳಾದ  ಗೋಪಿ,  ಗಣೇಶ್, ಕೃಷ್ಣಮೂರ್ತಿ, ಸೆಕ್ಷನ್ ಆಫೀಸರ್  ರಾಘವೇಂದ್ರ, ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಈ ವೇಳೆ ಇದ್ದರು.
One attachment • Scanned by Gmail