ಗ್ರಾ.ಪಂ ವ್ಯಾಪ್ತಿಯ   ನರೇಗಾ ಕೂಲಿ ಕಾರ್ಮಿಕರಿಗೆ  100 ದಿನ ಕೆಲಸ ನೀಡಲು ಆಗ್ರಹ
ಸಂಜೆವಾಣಿ ವಾರ್ತೆ
ಬಳ್ಳಾರಿ,ಜು,22-  ಗ್ರಾ.ಪಂ ವ್ಯಾಪ್ತಿಯ   ನರೇಗಾ ಕೂಲಿ ಕಾರ್ಮಿಕರಿಗೆ  100 ದಿನ ಕೆಲಸ ನೀಡಲು ಆಗ್ರಹಿಸಿ ಏಐಕೆಕೆಎಂಎಸ್ ಬಳ್ಳಾರಿ ಜಿಲ್ಲಾ ಸಮಿತಿ ಕಲ್ಲುಕಂಬ ಗ್ರಾ.ಪಂ. ಕಛೇರಿ ಮುಂದೆ ಪ್ರತಿಭಟನೆ ನಡೆಸಿತು.
ನಂತರ   ಕಲ್ಲುಕಂಬ ಗ್ರಾ.ಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ಬೇಡಿಕೆಗಳ ಈಡೇರಿಕೆಗೆ ಓತ್ತಾಯಿಸಿದರು.
ಬೇಡಿಕೆಗಳು:-
ಪ್ರತಿ ಕುಟುಂಬಕ್ಕೂ 100 ದಿನ ಕೆಲಸ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು.,  ಸಂಪೂರ್ಣ ಕೂಲಿ 349 ರೂ ಈ ಕೂಡಲೇ ಎಲ್ಲಾ ಕಾರ್ಮಿಕರಿಗೆ ನೀಡಬೇಕು, ಹಾಗೂ ಕೆಲಸದ ಸ್ಥಳಗಳಲ್ಲಿ ಕುಡಿಯುವ ನೀರು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿಕೊಳ್ಳಲಾಯಿತು . ಈ ಸಂದರ್ಭದಲ್ಲಿ ಏಐಕೆಕೆಎಂಎಸ್ ಬಳ್ಳಾರಿ ಜಿಲ್ಲಾ ಸಮಿತಿ ಅಧ್ಯ ಕ್ಷ ಗೋವಿಂದ್,  ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ನರೇಗಾ ಕಾರ್ಮಿಕರು ಉಪಸ್ಥಿತರಿದ್ದರು.