ನಿವೃತ್ತ ಶಿಕ್ಷಕರಿಗೆ ಸನ್ಮಾನ
ಶಿರಹಟ್ಟಿ,ಜು.22: ಗುರುವಿನ ಅನುಗ್ರಹವಿಲ್ಲದೇ ಮುಕ್ತಿ ಹೊಂದಲು ಸಾಧ್ಯವಿಲ್ಲ ಎಂದು ಬಿಜೆಪಿನಗರ ಘಟಕದ ಆದ್ಯಕ್ಷ ನಾಗರಾಜ ಲಕ್ಕುಂಡಿ ಹೇಳಿದರು.
ಅವರು ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರವನ್ನು ನೆರವೇರಿಸಿ ಮಾತನಾಡಿದರು.
ನಮ್ಮ ಜೀವನದ ಅಂತ್ಯವರೆಗಿನ ಪಯಣವನ್ನು ಸುಲಭಗೊಳಿಸಿಕೊಳ್ಳಲು ಗುರುವಿನ ಅನುಗ್ರಹ ಹೊಂದಿರಬೇಕಾಗಿರುವುದು ಅಗತ್ಯವಿದೆ. ಜೊತೆಗೆ ಅವರ ಜೀವನ ನಮಗೆಲ್ಲ ಮಾದರಿಯಾಗಿದ್ದು, ಅವರನ್ನು ನೆನಪಿಸಿಕೊಳ್ಳವುದು ಸೌಭಾಗ್ಯವಾಗಿದೆ. ಅವರನ್ನು ಗೌರವಿಸುವುದು ನಮ್ಮೆಲ್ಲರ ಸಂಸ್ಕøತಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎನ್ ಆರ್.ಕುಲಕರ್ಣಿ ಹೆಚ್.ಎಮ್.ದೇವಗೇರಿ, ಕೆ.ಎ.ಬಳಿಗೇರ,ಫಕ್ಕಿರೇಶ ರಟ್ಟಿಹಳ್ಳಿ, ಬಸವರಾಜ ತುಳಿ, ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಚ್.ಎಮ್.ದೇವಗೇರಿ, ಎನ್,.ಆರ್.ಕುಲಕರ್ಣಿ, ನಿಂಗಪ್ಪ ಕರಿಗಾರ, ಕೆ.ಎ.ಬಳಿಗೇರ, ಎಮ್.ಆರ್.ಢಾಲಾಯತ್, ಸಿ.ಪಿಕಾಳಗಿ, ಗುರು ಸರ್ಜಾಪೂರ, ಐ.ಜಿ.ಬಡಿಗೇರ,ರಾಮಪ್ಪ ಕಮತ ಮುಂತಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಅಕ್ಬರಸಾಬ ಯಾದಗೇರಿ, ನಂದಾ ಪಲ್ಲೇದ, ರಾಮಣ್ಣ ಕಂಬಳಿ, ಬಸವರಾಜ ತುಳಿ, ಗುಳಪ್ಪ ಕರಿಗಾರ, ಫಕ್ಕಿರೇಶ ಕರಿಗಾರ, ಅಶೋಕ ವರವಿ, ಪರಶುರಾಮ ಡೊಂಕಬಳ್ಳಿ ವೀರಣ್ಣ ಅಂಗಡಿ,ಮುಂತಾದವರು ಉಪಸ್ಥಿತರಿದ್ದರು.