ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೌಷ್ಠಿಕ ಆಹಾರ ಮುಖ್ಯ
ಬಾಗಲಕೋಟೆ,ಜು.22: ಮಕ್ಕಳ ಸರ್ವಾಂಗಿಣ ಬೆಳವಣಿಗೆಗೆ ಪೌಷ್ಠಿಕ ಆಹಾರ ಅತಿ ಮುಖ್ಯವಾಗಿದ್ದು, ಸಜ್ಜಲಶ್ರೀ ಆರೋಗ್ಯ ಮಹಾವಿದ್ಯಾಲಯ ಗ್ರಾಮೀಣ ಭಾಗದಲ್ಲಿ ಗ್ರಾಮ ಸ್ವಚ್ಚತೆ, ಮಕ್ಕಳಲ್ಲಿ ಪೌಷ್ಠಿಕ ಆಹಾರ ಜಾಗೃತಿ ಮೂಡಿಸುತ್ತದೆ ಎಂದು ಪ್ರಾಧ್ಯಾಪಕ ರೇಣುಕರಾಜ ನಾಗಮ್ಮನವರ ಹೇಳಿದರು.
ಬ.ವಿ.ವ.ಸಂಘದ ಸಜ್ಜಲಶ್ರೀ ನರ್ಸಿಂಗ ಆರೋಗ್ಯ ವಿಜ್ಞಾನಗಳ ಮಹಾವಿದ್ಯಾಲಯದ, ಸಮುದಾಯ ಆರೋಗ್ಯ ಶೂಶ್ರುಷಾ ವಿಭಾಗದ ವತಿಯಿಂದ, ಕೆಲವಡಿ ಹಾಗೂ ತಿಮ್ಮಸಾಗರ ಗ್ರಾಮಗಳ ಎಲ್ಲ ನಾಲ್ಕು ಅಂಗನವಾಡಿ ಮಕ್ಕಳಲ್ಲಿ ಪೌಷ್ಠಿಕ ಆಹಾರದ ಮಹತ್ವ ಮತ್ತು ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಅಪೌಷ್ಠಿಕತೆ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ, ಕಣ್ಣಿನ ಸಮಸ್ಯೆ ಹಾಗೂ ಹೃದಯ ಸಂಬಂಧಿ ಸಮಸ್ಯಗಳಿಗೆ ಕಾರಣವಾಗುತ್ತದೆ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೌಷ್ಠಿಕ ಆಹಾರ ಮುಖ್ಯವಾಗಿ ಬೇಕು ಎಂದ ಅವರು ಆಹಾರಗಳಾದ ಹಸಿರು ತರಕಾರಿ, ಹಾಲು, ಮೊಟ್ಟೆ, ಅಕ್ಕಿ ರಾಗಿ ಗಂಜಿ ಸೇವನೆಯ ಮಹತ್ವ ವಿವಸಿದರು.
ವಿಭಾಗದ ಮುಖ್ಯಸ್ಥೆ ಶಿಲ್ಪಾ ಎನ್ ಕೂಗಲಿ ಹಾಗೂ ಪ್ರಾದ್ಯಾಪಕರಾದ ಡಾ|| ರಾಜಶೇಖರ ಹೀರೆಗೌಡರ, ಜಗದೀಶ ಹೀರೆಮಠ, ಕಿರಣ ಕಲಕಬಂಡಿ ಹಾಗೂ ಎಲ್ಲ ನಾಲ್ಕು ಅಂಗನವಾಡಿಯ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತಿಯ ಸದಸ್ಯರು ಸೇರಿದಂತೆ ಎರಡೂ ಗ್ರಾಮಗಳ ಎಲ್ಲ ನಾಲ್ಕು ಅಂಗನವಾಡಿಗಳ ಅರವತ್ತಕ್ಕೂ ಹೆಚ್ಚು ಐದು ವರ್ಷದೊಳಗಿನ ಮಕ್ಕಳು ತಮ್ಮ ಪಾಲಕರೊಂದಿಗೆ ಭಾಗವಹಿಸಿದ್ದರು.