ಡೆಂಗ್ಯೂ ಜಾಗೃತಿ ಜಾಥಾ
ಬಾಗಲಕೋಟೆ,ಜು.22: ಬಿ.ವಿ.ವಿ.ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್ ಶಿಬಿರಾರ್ಥಿಗಳಿಂದ ಡೆಂಗ್ಯೂ ಜಾಗೃತಿ ಜಾಥಾ ಮಾಡಲಾಯಿತು.
ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವತಿಯಿಂದ 2023-24 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ದತ್ತು ಗ್ರಾಮ ಮುಚಖಂಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಶಿಬಿರಾರ್ಥಿಗಳು ಡೆಂಗ್ಯೂ ಜಾಗೃತಿ ಜಾಥಾ ಮಾಡಿದರು. ಗ್ರಾಮದ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಜಾಥಾ ಗ್ರಾಮದ ಪ್ರಮುಖ ರಸ್ತೆಗಳ ಮುಖಾಂತರ ಸಂಚರಿಸಿ ಡೆಂಗ್ಯೂ ಹರಡುವ, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ವಿಧಾನಗಳ ಬಗ್ಗೆ ಬಿದಿ ನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರಲ್ಲದೆ, ಮೂಢನಂಬಿಕೆ ಹಾಗೂ ರಕ್ತದಾನದ ಮಹತ್ವ ಕುರಿತು ತಿಳಿಸಲಾಯಿತು.
ಎನ್.ಎಸ್. ಅಧಿಕಾರಿ ಡಾ. ಎಂ ಎಂ ಹುದ್ದಾರ, ಡಾ. ಬಸವರಾಜ ಖೋತ, ರವಿ ಬೆಳಗೆರೆ ಹಾಗೂ ಕುಮಾರಿ ಪ್ರಿಯಾಂಕ ಹಾಗೂ ಎಲ್ಲ ಶಿಬಿರಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.
ಸಾಯಂಕಾಲ ನಡೆದ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮುಧೋಳದ ಶ್ರೀ ಎಸ್ ಆರ್ ಕಂಠಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಮ್. ವ್ಹಿ. ಜಿಗಬಡ್ಡಿ ಹಾಗೂ ಡಾ. ಬಸವರಾಜ ಪಿ.ಕುಂಬಾರ ಅವರು ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಜಗನ್ನಾಥ ವ್ಹಿ ಚವ್ಹಾಣ ವಹಿಸಿದ್ದರು. ವೇದಿಕೆ ಮೇಲೆ ಡಾ. ಎಂ ನಂಜುಂಡಸ್ವಾಮಿ, ಡಾ ಬಸವರಾಜ ವ್ಹಿ. ಖೋತ, ಆರ್ ಪಿ ಮೇಲಿನಮನಿ, ಎಂ ಎಚ್ ಜನ್ನಪ್ಪಗೋಳ, ಆರ್. ಎಂ ತ್ಯಾಪಿ ಅವರು ಉಪಸ್ಥಿತರಿದ್ದರು.