ವೀರಗಲ್ಲಿಗೆ ಮಾಲಾರ್ಪಣೆ
ನವಲಗುಂದ,ಜು.22: ನವಲಗುಂದ ತಾಲ್ಲೂಕಿನ ಅಳಗವಾಡಿಯ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿನ ಸ್ಮಾರಕಕ್ಕೇ ಕರ್ನಾಟಕ ಕಾರ್ಯನಿರ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನರವರು ಮಾಲಾರ್ಪಣೆ ಮಾಡಿದರು
ಈ ವೇಳೆ ಮಾತನಾಡಿದ ಅವರು ಈ ಭಾಗದ ರೈತರ ಜೀವನಾಡಿ ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿ ಹಾಗೂ ರಾಜ್ಯದ್ಯಂತ ಹುತಾತ್ಮ ರೈತರ ಸ್ಮಾರಕ ಹಾಗೂ ರೈತ ಹುತಾತ್ಮ ದಿನಾಚರಣೆಯನ್ನು ಎಲ್ಲ ಸರಕಾರಿ ಕಚೇರಿಯಲ್ಲಿ ಆಚರಿಸುವಂತೆ ಸರಕಾರಕ್ಕೆ ಒತ್ತಾಯಿಸಿದರು.
ಮೆಣಸಿನಕಾಯಿ ಬೀಜ ಖರೀದಿಗೆ ಹೋದ ರೈತರ ಮೇಲೆ ಬಳ್ಳಾರಿ ಲಾಠಿ ಚಾರ್ಜ್ ಹಾಗೂ ಹಾವೇರಿಯಲ್ಲಿ ರೈತ ಮೇಲಿನ ಗೋಲಿ ಬಾರ್ ಮಾಡಿದ್ದು ಖಂಡಿಸುತ್ತೇವೆ ರೈತರ ಮೇಲೆ ದಾಖಲಾದ ಎಲ್ಲ ಪ್ರಕರಣಗಳನ್ನು ಹಿಮಾಪಡೆಯಬೇಕು ಎಂದ ಅವರು ರೈತರ ಹೋರಾಟಕ್ಕೆ ಪತ್ರಕರ್ತರು ನಿರಂತರವಾಗಿ ಬೆಂಬಲ ನೀಡುತ್ತೇವೆ ಎಂದರು.
ಈ ವೇಳೆಯಲ್ಲಿ ಪತ್ರಕರ್ತರಾದ ಯಲ್ಲಪ್ಪ ಭೋವಿ, ವಾಸುದೇವ ಮುರಗಿ, ಬಸವರಾಜ ಗುಡ್ಡದ ಕೇರಿ, ಪ್ರವೀಣ ಗಿಡಸಕ್ಕನವರ, ಸುನೀಲ ಕರಗೋಲ, ನಂದೀಶ ಸಂಗಟಿ, ಬಾಬಾಜಾನ್ ಶಿರಕೋಳ, ಶಿವು ನಾಯಕ, ಚಂದ್ರು ಕೊಟಗಿ, ಗಂಗಾಧರ್ ಕತ್ತಿ, ಧರ್ಮರಾಜ ಗುಳೇದ, ಸಂಜು ಗುರಿಕಾರ, ಶಂಕರ ಸುಭೆದಾರಮಠ, ಅನೇಕರು ಉಪಸ್ಥಿತರಿದ್ದರು