ಅಸಮಾನತೆ ವಿರುದ್ಧ ಧ್ವನಿ ಅಗತ್ಯ
ಧಾರವಾಡ,ಜು.22:ಮಹಿಳೆಯರನ್ನು ಇಂದಿಗೂ ಎರಡನೇದರ್ಜೆಯ ಪ್ರಜೆಯಂತೆ ಸಾಮಾಜಿಕ ವ್ಯವಸ್ಥೆ ಪರಿಗಣಿಸುತ್ತಿರುವುದು ಬದಲಾಗದೇ ಹೋದರೆದೇಶದ ಪ್ರಗತಿಗೆ ಮಾರಕವಾಗುವುದುಎಂದುಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು, ಶ್ರೀ ಸತ್ಯಸಾಯಿ ಮಹಿಳಾ ಕಾಲೇಜು ಸಹಯೋಗದಲ್ಲಿ, ಕಾಲೇಜಿನ ಸಭಾಭವನದಲ್ಲಿ ಆಯೋಜಿಸಿದ್ದ `ಇಂದಿನ ಸ್ತ್ರೀ’ ಅಭಿಪ್ರಾಯ ಮಂಡನೆಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ದೇಶದಜನಸಂಖ್ಯೆಯಲ್ಲಿಅರ್ಧದಷ್ಟಿರುವ ಮಹಿಳೆಯರು ಇಂದುಎಲ್ಲರಂಗದಲ್ಲೂ ಪ್ರಗತಿಯನ್ನು ಸಾಧಿಸುತ್ತಿದ್ದರೂ ನ್ಯಾಯಬದ್ಧವಾಗಿ ಸಿಗಬೇಕಾದ ಗೌರವ, ಸ್ಥಾನಮಾನ, ಅವಕಾಶಗಳಿಂದ ವಂಚಿತವಾಗುತ್ತಿದ್ದಾರೆ. ಗ್ರಾಮೀಣ ಮಹಿಳೆ ಪುರುಷನಗಿಂತಲೂ ಹೆಚ್ಚು ಕೆಲಸ ಮಾಡುತ್ತಿದ್ದರೂ ಅವಳಿಗೆ ನೀಡುವ ಹಣ ಪುರುಷರಿಗಿಂತಕಡಿಮೆ.ಇಂಥ ಹಲವು ತಾರತಮ್ಯಗಳನ್ನು ಇಂದಿನ ಮಹಿಳೆಯರು ಯಾಕೆ ಹೀಗೆ ಎಂದು ಅವಲೋಕಿಸಬೇಕು.ಈ ಅಸಮಾನತೆ ವಿರುದ್ಧಧ್ವನಿ ಎತ್ತಬೇಕಾಗಿದೆ.
ಸಂಪನ್ಮೂಲ ವ್ಯಕ್ತಿಡಾ. ವಿ. ಶಾರದಾಅಭಿಪ್ರಾಯ ಮಂಡಿಸುತ್ತಾ, ಇಂದಿನ ಮಹಿಳೆ ತಂತ್ರಜ್ಞಾನದ ಮುನ್ನಡೆಯಿಂದಾಗಿ ಸಾಕಷ್ಟು ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಹೊರಬರಲು ಇಂದಿನ ಸ್ತ್ರೀಯರು ಗಟ್ಟಿಗಿತ್ತಿಯರಾಗಿತಮ್ಮ ಸ್ವಂತಿಕೆಯನ್ನು ಕಾಯ್ದುಕೊಳ್ಳಬೇಕೆಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಡಾ.ಅರುಣಾ ಹಳ್ಳಿಕೇರಿ ಮಾತನಾಡುತ್ತಾ, ಇಂದಿನ ಮಹಿಳೆ ಅತ್ಯಂತ ತಾಳ್ಮೆಯಿಂದ ತನಗೆ ಬಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಮ್ಮ ಸಮಾಜದಲ್ಲಿಕುಟುಂಬ ವ್ಯವಸ್ಥೆ ಹಾಳಾಗುತ್ತದೆಂದು ಹೇಳಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಶಾರದಾ ಕೌದಿ ಅವರು, ಬಸವಣ್ಣನವರಕಾಲದಲ್ಲಿ ಹೇಗೆ ಸ್ತ್ರೀಯರು ದಿಟ್ಟತನದಿಂದ ಪುರುಷರಿಗೆ ಸಮಾನವಾಗಿಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸಮಾನವಾಗಿ ನಿಂತರೋಅದೇರೀತಿ ಇಂದಿನ ಸ್ತ್ರೀ ಕೂಡ ಸಮಾನತೆಯನ್ನು ಸಾಧಿಸುವಲ್ಲಿ ಪ್ರಯತ್ನಿಸಬೇಕೆಂದರು.
ಜಿ.ಎಂ.ಕೋಟಿಗೌಡರ ಇಂದಿನ ಸ್ತ್ರೀ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಶ್ರಮಪಟ್ಟು ಪ್ರಯತ್ನಿಸಿ ಸಾಧನೆಯತ್ತ ಸಾಗಬೇಕೆಂದರು.
ಕಾಲೇಜಿನ ಅನೇಕ ವಿದ್ಯಾರ್ಥಿನಿಯರು ಇಂದಿನ ಸ್ತ್ರೀ ಕುರಿತು ವೈವಿಧ್ಯಮಯರೀತಿಯಲ್ಲಿತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.ಉತ್ತಮಅಭಿಪ್ರಾಯ ಮಂಡನೆಗಳಿಗೆ ಬಹುಮಾನ ಘೋಷಿಸುವ ಸಲುವಾಗಿ ಮಂಗಳಾ ಚಿಗಟೇರಿ, ರುದ್ರಾಕ್ಷಿ ಹಟ್ಟಿಹೊಳಿ ಮತ್ತು ಸೌಮ್ಯ ಡಿ. ಕೆಂಗಾನವರ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.
ಕಾಲೇಜಿನ ಪ್ರಾಚಾರ್ಯ ಅಶ್ವಿನಿ ಇಂಚಲ ಅಧ್ಯಕ್ಷತೆಯನ್ನು ವಹಿಸಿದ್ದರು.ಮಹಿಳಾ ಮಂಟಪದ ಸಂಚಾಲಕಿ ಡಾ.ಶೈಲಜಾಅಮರಶೆಟ್ಟಿಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸುತ್ತಾ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿ ಸರ್ವರನ್ನು ಸ್ವಾಗತಿಸಿದರು.ಕಾಲೇಜಿನ ಪ್ರಾಧ್ಯಾಪಕಿ ವಂದನೆಗಳನ್ನು ಸಲ್ಲಿಸಿದರೆ ಜ್ಯೋತಿ ಭಾವಿಕಟ್ಟಿ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ನಿರ್ಮಲಾಚಿಗಟೇರಿ, ಬೇವಿನಕಟ್ಟಿ, ಕಾಲೇಜಿನ ಪ್ರಾಧ್ಯಾಪಕ ವೃಂದದವರು ಮತ್ತುಇನ್ನಿತರರುಕಾರ್ಯಕ್ರಮದಲ್ಲಿ ಹಾಜರಿದ್ದರು.