ಶರಣರು ಹಾಕಿಕೊಟ್ಟ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ ಗೆಣ್ಣೂರ ಕರೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.22:12ನೇ ಶತಮಾನದ ಶರಣರು ಅನುಸರಿಸಿದ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬಸವಣ್ಣನವರು ಕಾಯಕವೇ ಕೈಲಾಸ ಎಂದು ಸಾರಿದರು. ಅಂದಿನ ಸಮಾಜದಲ್ಲಿದ್ದ ಮೂಢನಂಬಿಕೆ, ಮೌಢ್ಯತೆಯನ್ನು ತೊಡೆದು ಹಾಕಲು ಶರಣರು ವಚನಗಳ ಮೂಲಕ ತಿಳಿಸಿದರು. ಹಡಪದ ಅಪ್ಪಣ್ಣ ಅವರು ಜ್ಞಾನಿಗಳು, ಇದೇ ಜಿಲ್ಲೆಯವರು. ಶರಣರ ವಚನಗಳು ಸಾರ್ವಕಾಲಿಕವಾಗಿವೆ. ಶರಣರ ತತ್ವಾದರ್ಶಗಳನ್ನು ಅವರ ವಚನಗಳ ಸಾರ ಮುಂದಿನ ಪೀಳಿಗೆಗೆ ತಿಳಿಸಬೇಕು. ಶರಣರು ತೋರಿಸಿದ ಜ್ಞಾನ ಪಥದಲ್ಲಿ ನಡೆದು ಜೀವನ ಸಾರ್ಥಕಪಡಿಸಿಕೊಳ್ಳೋಣ ಎಂದು ಹೇಳಿದರು.
ಉಪನ್ಯಾಸ ನೀಡಿದ ಭೀಮಾಶಂಕರ ಹಡಪದ ಅವರು, ಹಡಪದ ಅಪ್ಪಣ್ಣ ಅವರು, ಭಕ್ತಿ ಕಾಯಕದ ಪ್ರತಿರೂಪ ಪರಿಪೂರ್ಣ ವ್ಯಕ್ತಿತ್ವಯುಳ್ಳವರು. ಅವರ ಜೀವನ ಸಂದೇಶಗಳು ದಾರಿದೀಪವಾಗಿವೆ. ಅಪ್ಪಣ್ಣ ಅವರ ವಚನಗಳು ಬದುಕಿಗೆ ಸ್ಫೂರ್ತಿದಾಯಕವಾಗಿವೆ. ಆತ್ಮ ಜ್ಞಾನಯುಳ್ಳ ಅಪ್ಪಣ್ಣ ಅವರು ಧೈರ್ಯ ಹಾಗೂ ಕಾಯಕ ನಿμÉ್ಠಗೆ ಮಾದರಿಯಾಗಿದ್ದರು. ಸುಮಾರು 250ಕ್ಕೂ ಹೆಚ್ಚು ವಚನಗಳ ರಚಿಸಿದ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶಮಯ ಬದುಕು ರೂಢಿಸಿಕೊಳ್ಳಬೇಕು. ಶರಣ ಸಂಸ್ಕೃತಿ ರೂಢಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಕುರಿತ ಕಿರು ನಾಟಕ ಪ್ರದರ್ಶನಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಂಜುಳಾ ಹಿಪ್ಪರಗಿ ಹಾಗೂ ಅವರ ತಂಡ ವಚನ ಗಾಯನ ಪ್ರಸ್ತುಪಡಿಸಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ವಿಭಾಗದ ಅಧಿಕಾರ ಎ.ಬಿ ಅಲ್ಲಾಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಭೀಮಾಶಂಕರ ಹಡಪದ, ಸುಭಾಸ ಕನ್ನೂರ ಉಪಸ್ಥಿತರಿದ್ದರು.
ಮೆರವಣಿಗೆಗೆ ಚಾಲನೆ: ಕಾರ್ಯಕ್ರಮಕ್ಕೂ ಮೊದಲು, ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ವಿಜಯಪುರ ತºಸೀಲ್ದಾರ ಕವಿತಾ ಅವರು ಚಾಲನೆ ನೀಡಿದರು.
ಭವ್ಯ ಮೆರವಣಿಗೆಯು ವಿವಿಧ ಕಲಾತಂಡಗಳೊಂದಿಗೆ ಗಾಂಧಿ, ಬಸವೇಶ್ವರ, ಅಂಬೇಡ್ಕರ ಹಾಗೂ ಕನಸದಾಸ ವೃತ್ತದಿಂದ ಸಾಗಿ, ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಕೊನೆಗೊಂಡು ವೇದಿಕೆ ಕಾರ್ಯಕ್ರಮ ಜರುಗಿತು.