ಮನೆತನಗಳ ಅಧ್ಯಯನ ಇಂದಿನ ಅಗತ್ಯತೆ: ಪ್ರೊ. ಎಚ್.ಎಂ ಕಡಕೋಳ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.22: ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಗೌಡರೇ ಮುಖ್ಯಸ್ಥರು. ಗ್ರಾಮದ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಗೌಡರೇ ಮುಖ್ಯಸ್ಥರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಗ್ರಾಮದ ಎಲ್ಲಾ ನಿರ್ಣಯಗಳನ್ನು ಗೌಡರೇ ಕೈಗೊಳ್ಳುತ್ತಿದ್ದರು ಎಂದು ವಿಶ್ರಾಂತ ಪ್ರಾಧ್ಯಾಪಕ ಪೆÇ್ರ. ಎಚ್.ಎಂ. ಕಡಕೋಳ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ, ತಾಲೂಕಾ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಪೆÇ್ರ ಸಿದ್ದಣ್ಣ ಬೀಡಗೊಂಡ ರಚಿಸಿದ “ವಿಜಯಪುರ ಜಿಲ್ಲೆಯ ಗೌಡ ಮನೆತನಗಳ ಆಡಳಿತ ಮತ್ತು ಸಂಸ್ಕೃತಿ” ಎಂಬ ಸಂಶೋಧನಾತ್ಮಕ ಕೃತಿಯನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಾ, ಬ್ರಿಟಿಷರ ಕಾಲದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಪ್ರತಿ ಗ್ರಾಮಗಳಲ್ಲಿ ಗೌಡರದೇ ಆಡಳಿತ ಇತ್ತೆಂದು ನಮ್ಮೆಲ್ಲರ ಪೂರ್ವಜರಿಂದ ತಿಳಿದು ಬರುತ್ತದೆ ಎಂದರು.
ಕೃತಿಯನ್ನು ಪರಿಚಯಿಸಿದ ವಿಜಯಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಆನಂದ ಕುಲಕರ್ಣಿ ಅವರು ಮಾತನಾಡುತ್ತಾ, ಇದೊಂದು ಮೌಲಿಕ ಕೃತಿ. ಗ್ರಾಮೀಣ ಭಾಗದ ಬಹುತೇಕ ವಿಚಾರಗಳನ್ನು ಈ ಕೃತಿ ಒಳಗೊಂಡಿದೆ. ಲೇಖಕರು ಸಂಶೋಧನೆಯ ಎಲ್ಲ ಆಯಾಮಗಳನ್ನು ಈ ಕೃತಿಯಲ್ಲಿ ಅಳವಡಿಸಿರುವುದು ಕೃತಿಯ ವೈಶಿಷ್ಟ್ಯ. ಲಿಂಗಾಯತ , ಬ್ರಾಹ್ಮಣ, ಕುರುಬ, ಕಬ್ಬಲಿಗ, ರೆಡ್ಡಿ, ಒಕ್ಕಲಿಗ, ಮುಂತಾದವರು ಗೌಡರಾಗಿದ್ದರು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕÀ ಡಾ. ರಾಜಶೇಖರ ಬೆನಕನಹಳ್ಳಿ ಮಾತನಾಡುತ್ತಾ, ಲೇಖಕ ಪೆÇ್ರ ಸಿದ್ದಣ್ಣ ಬೀಡಗೊಂಡ ಇವರಿಂದ ಇನ್ನೂ ಅನೇಕ ಸಂಶೋಧನಾತ್ಮಕ ಕೃತಿಗಳು ಹೊರಬರಲಿ, ಕೃತಿಯನ್ನು ಕಂಡು ತೆಗೆದುಕೊಳ್ಳುವುದಕ್ಕಿಂತ ಕೊಂಡು ಓದುವುದು ಉತ್ತಮ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಸ್ವಾಗತಿಸಿದರು. ಮಮತಾ ಮುಳಸಾವಳಗಿ ನಿರೂಪಿಸಿದರು. ಸುನಯನಾ ದೇಶಪಾಂಡೆ ಹಾಗೂ ಸಂಗೀತಾ ಹಿರೇಮಠ ವಚನ ಗಾಯನ ಮಾಡಿದರು. ಮೆಹತಾಬ್ ಕಾಗವಾಡ ವಂದಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ. ಬಸವರಾಜ ಹಡಪದ, ರಾಜೇಸಾಬ ಶಿವನಗುತ್ತಿ, ಪೆÇ್ರ. ಸಿದ್ರಾಮಯ್ಯ ಲಕ್ಕುಂಡಿಮಠ, ಪ್ರಾಚಾರ್ಯರಾದ ಡಾ. ಆರ್. ಎಸ್. ಕಲ್ಲೂರಮಠ, ಡಾ. ಪಿ.ಬಿ ಬಿರಾದಾರ, ಲಕ್ಷ್ಮೀ ಮೋರೆ, ರಮೇಶ ಬಳ್ಳೊಳ್ಳಿ, ನಾಥೂರಾಮ ಜಾಧವ, ಡಾ. ರಾಘವೇಂದ್ರ ಗುರ್ಜಾಲ, ಬಿ.ಎಂ. ಆಜೂರ, ಕೆ.ಎಸ್. ಹಣಮಾಣಿ, ಟಿ.ಆರ್. ಹಾವಿನಾಳ, ಎಸ್.ಎಲ್ ಇಂಗಳೇಶ್ವರ, ಶ್ರೀಕಾಂತ ನಾಡಗೌಡ, ಅಶೋಕ ಬಾಳಿಕಾಯಿ, ಡಾ. ನಾರಾಯಣ ಬಗಲಿ, ಡಾ ನೀಲಕಂಠ ಹಳ್ಳಿ, ಡಾ ಶ್ರೀಶೈಲ ಪೂಜಾರಿ, ಸಂಗಮೇಶ ಬಗಲಿ, ಶಿವಾನಂದ ಸಾಂಗೋಲಿ, ನವೀನಗೌಡ ಬಿರಾದಾರ, ಸುಖದೇವಿ ಅಲಬಾಳಮಠ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಲೇಖಕÀ ಪೆÇ್ರ. ಸಿದ್ದಣ್ಣ ಬೀಡಗೊಂಡ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವಿಸಲಾಯಿತು. ಸಿದ್ರಾಮಯ್ಯ ಲಕ್ಕುಂಡಿಮಠ. ಕೆ. ಸುನಂದ, ಬಸವರಾಜ ರಬಿನಾಳ, ಶ್ರೀಕಾಂತ ನಾಡಗೌಡ ಉಪಸ್ಥಿತರಿದ್ದರು.