ಹೊಟ್ಟೆ ನೋವು ತಾಳದೆ ವ್ಯಕ್ತಿ ಆತ್ಮಹತ್ಯೆ
ಕಲಬುರಗಿ,ಸೆ.28-ಹೊಟ್ಟೆ ನೋವು ತಾಳದೆ ಮನೆಯ ಜಂತಿಗೆ ನೇಣು ಹಾಕಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನಕಿರಣಗಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಭೀಮು ತಂದೆ ಸಾಯಬಣ್ಣ ಈರಬಾ ಆತ್ಮಹತ್ಯೆಗೆ ಶರಣಾದವರು.
ಒಕ್ಕಲುತನ ಮಾಡುತ್ತಿದ್ದ ಭೀಮು ಅವರು ಕಳದೆ 2-3 ವರ್ಷಗಳಿಂದ ಹೊಟ್ಟೆಬೇನೆಯಿಂದ ಬಳಲುತ್ತಿದ್ದರು. ಅಲ್ಲಲ್ಲಿ ತೋರಿಸಲಾಗಿತ್ತು. ಆದರೆ ಹೊಟ್ಟೆ ಬೇನೆ ಕಡಿಮೆಯಾಗಿರಲಿಲ್ಲ. ಹೊಟ್ಟೆ ಬೇನೆ ತಾಳದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ಸರಬಮ್ಮ ಈರಬಾ ಅವರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ. ತನಿಖೆ ನಡೆದಿದೆ.