ಹಡಪದ ಸಮಾಜದ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ: ಸಮಾಜದ ಮುಖಂಡರಿಂದ ಪ್ರತಿಭಟನೆ
ವಿಜಯಪುರ,ಸೆ.28: ಹುಬ್ಬಳ್ಳಿಯ ನೀಲಮ್ಮ ಹಡಪದ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವದನ್ನು ಖಂಡಿಸಿ ವಿಜಯಪುರ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ (ರಿ) ವಿಜಯಪುರ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಇತ್ತೀಚೆಗೆ ಹುಬ್ಬಳಿಯ ನಗರದಲ್ಲಿ ನಮ್ಮ ಹಿಂದುಳಿದ ಸಮಾಜದ ಹಡಪದ ಸಮಾಜಕ್ಕೆ ಸೇರಿದ ನೀಲಮ್ಮ ಹಡಪದ ಅವರ ಮೇಲೆ ದುಷ್ಕರ್ಮಿಯೊಬ್ಬ ಮಾರಣಾಂತಿಕ ಹಲ್ಲೆಯನ್ನು ನಡೆಸಿ ಜೀವ ಬೆದರಿಕೆ ಮತ್ತು ಚಾಕೂವಿನಿಂದ ಇರುದು ಹತ್ಯೆಗೆ ಪ್ರಯತ್ನ ಪಟ್ಟಿದ್ದು, ದುಷ್ಕರ್ಮಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತಾಗಬೇಕು ಎಂದು ಪ್ರತಿಭಟನೆ ನೇತೃತ್ವ ವಹಿಸಿದ ಸಮಾಜದ ಮುಖಂಡರು ಹೇಳಿದರು.
ಹಿಂದುಳಿದ ಸಮಾಜಕ್ಕೆ ಸಾಮಾಜಿಕ ನ್ಯಾಯ ಇಲ್ಲದೇ ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಕ್ಷೌರಿಕ ವೃÀತ್ತಿಯ ಆಧಾರದ ಮೇಲೆ ಸಮಾಜದಲ್ಲಿ ಅತಿ ಹಿಂದುಳಿದ ಸಮಾಜವಾದ ಈ ಸಮುದಾಯಕ್ಕೆ ಸಾಮಾಜಿಕ ಜೀವನದಲ್ಲಿ ಅಗೌರವ ಮೇಲಿಂದ ಮೇಲೆ ರಾಜ್ಯದಲ್ಲಿ ನಡೆಯುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಹೀಗಾಗಿ ಈ ಹುಬ್ಬಳ್ಳಿಯ ನಗರದಲ್ಲಿ ನಡೆದ ಘಟನೆಯಿಂದಾಗಿ ಕ್ಷೌರಿಕ ಸಮುದಾಯದ ಮಕ್ಕಳು ಮತ್ತು ಮಹಿಳೆಯರಿಗೆ ಸೂಕ್ತ ಭದ್ರತೆಯನ್ನು ನೀಡಬೇಕು. ಕಾರಣ ಹಲ್ಲೆಗೊಳಗಾದ ಮಹಿಳೆಯ ಕುಟುಂಬಕ್ಕೆ ಭದ್ರತೆ ನೀಡಿ ಹಲ್ಲೆ ನಡೆಸಿದ ದುಷ್ಕರ್ಮಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸಾಮಾಜಿಕ ನ್ಯಾಯದ ಅಡಿಯಲ್ಲಿ ಮಹಿಳೆಯರಿಗೆ ಜೀವನೋಪಾಯಕ್ಕೆ ಅರ್ಥಿಕ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಎಂ.ಬಿ. ಅರ್ಜುಣಗಿ, ಜಿಲ್ಲಾಧ್ಯಕ್ಷÀ ವಿರೂಪಾಕ್ಷಿ ಕತ್ನಳ್ಳಿ ಜಿಲ್ಲಾ ಉಪಾಧ್ಯಕ್ಷರಾದ ಶಾಂತಾನಂದ ದೇವೂರ, ಬಾಬು ಹಡಪದ, ಜಿಲ್ಲಾ ಕಾರ್ಯಧ್ಯಕ್ಷ ಶಿವಾನಂದ ನಾವಿ ಜಿಲ್ಲಾ ಕೋಶಾಧ್ಯಕ್ಷ ನಿಂಗಪ್ಪ ನಾವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉತ್ನಾಳ, ಜಿಲ್ಲಾ ಸಂಚಾಲಕÀ ಮಲ್ಲೇಶಿ ನಾವಿ, ನಗರ ಸಂಚಾಲಕÀ ಬಸವರಾಜ ಬೆಕಿನಾಳ, ಸಿಂದಗಿ ಪುರಸಭೆಯ ಮಾಜಿ ಸದಸ್ಯರಾದ ಚಂದ್ರಶೇಖರ ಅಮಲಿಹಾಳ, ಬಸವರಾಜ ಬ್ಯಾಲ್ಯಾಳ, ಈರಣ್ಣ ಹಡಪದ, ಚಿದಾನಂದ ತೊರವಿ, ಧರೆಪ್ಪ ನಾವಿ, ಓಂಕಾರ ನಾವಿ, ರಾಜು ಯಂಕಂಚಿ, ಶರಣು ಹಡಪದ, ಶರಣಬಸು ಮಾಶ್ಯಾಳ. ರವಿ ಹಂಜಗಿ ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.