ನರೋಣಾದಲ್ಲಿ ಪೌಷ್ಟಿಕ ಮಾಸಾಚರಣೆ
ಕಲಬುರಗಿ,ಸೆ.28: ಅಳಂದ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ಯೋಜನೆ ವತಿಯಿಂದ ನರೋಣ ವಲಯದ ಪೌಷ್ಟಿಕ ಮಾಸಾಚರಣೆ ಕಾರ್ಯಕ್ರಮವನ್ನು ನರೋಣ ಗ್ರಾಮದ ಸಿದ್ಧಾರೂಢ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.ವಲಯದ ಮೇಲ್ವಿಚಾರಕಿ ಮೀನಾಕ್ಷಿ ಡಿ ಹಿರೇಮಠ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ನರೋಣ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದಮ್ಮ ಬಿ ರಾಗಿ, ಗ್ರಾಮದ ಪ್ರಮುಖರಾದ ರಾಜುರಾಗಿ, ಶಾಲಾ ಮುಖ್ಯ ಗುರು ಹನುಮಂತರಾವ್ ಗೋಳ, ಅಂಬಿಕಾ ಕಲಶೆಟ್ಟಿ , ನರೋಣ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗುರುಶಾಂತಪ್ಪ, ಕಿರಿಯ ಆರೋಗ್ಯ ಸಹಾಯಕರಾದ ಅಶೋಕ್ ಪೂಜಾರಿ, ಜಯಶ್ರೀ ಹಾಗೂ ಶೈಲಾಬಾಯಿ ನರೋಣ ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿ, ಬಾಣಂತಿಯರು, ಕಿಶೋರಿಯರು ಭಾಗವಹಿಸಿದ್ದರು.ಮೇಲ್ವಿಚಾರಕ ಮೀನಾಕ್ಷಿ ಹಿರೇಮಠ ಅವರು ಪೌಷ್ಟಿಕ ಆಹಾರ ರಕ್ತ ಹೀನತೆ ಅನ್ನ ಪ್ರಾಷಣ ಮಾತೃವೃಂದನ ಹಾಗೂ ಇನ್ನಿತರ ಇಲಾಖೆಯ ಕಾರ್ಯಕ್ರಮಗಳು ಮಾಹಿತಿ ನೀಡಿದರು.