ಪೌರಕಾರ್ಮಿಕರನ್ನು ಖಾಯಂಗೊಳಿಸಲು ಆಗ್ರಹ
ಕಲಬುರಗಿ,ಸೆ.28:ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಹುದ್ದೆಗಳನ್ನು ಖಾಯಂಗೊಳಿಸಬೇಕು.ಇನ್ನೂ ಅಗತ್ಯವಿರುವ ಪೌರ ಕಾರ್ಮಿಕರ ನೇಮಕ ಮಾಡಿಕೊಳ್ಳುವದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಇಂದು ನಗರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ( ಮಾಕ್ರ್ಸ್‍ವಾದಿ)ದಿಂದ ಪ್ರತಿಭಟನೆ ನಡೆಸಿ,ಜಿಲ್ಲಾಡಳಿತದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಗುತ್ತಿಗೆ ಪದ್ಧತಿ ಕೈ ಬಿಡಬೇಕು.ನೇರ ಪಾವತಿಯಡಿ ಕಾರ್ಮಿಕರಿಗೆ ವೇತನ ಪಾವತಿಯಾಗಬೇಕು.ಅಧಿಕಾರಿಗಳು ಗುತ್ತಿಗೆದಾರರಿಂದ ಪೌರ ಕಾರ್ಮಿಕರ ಶೋಷಣೆ ತಪ್ಪಬೇಕು. ಉಚಿತ ವಸತಿ,ಶಿಕ್ಷಣ,ಆರೋಗ್ಯದ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಕೆ.ನೀಲಾ, ಶರಣು ಅತನೂರ,ಪಾಂಡುರಂಗ ಮಾವಿನಕರ,ಶ್ರೀಮಂತ ಬಿರಾದಾರ ,ಶರಣಬಸಪ್ಪ ಮಮಶೆಟ್ಟಿ,ಸುಧಾಮಧನ್ನಿ,ವಿರೂಪಾಕ್ಷಪ್ಪ ತಡಕಲ್,ಮೇಘರಾಜ ಕಠಾರೆ ಸೇರಿದಂತೆ ಹಲವರಿದ್ದರು.