ಪಕ್ಷ ಮಾಸದಲ್ಲಿ ಗರುಡಪುರಾಣ ಶ್ರವಣಮಾಡಬೇಕು: ಪಂ. ಪ್ರಸನ್ನಾಚಾರ್ಯ ಜೋಶಿ
ಕಲಬುರಗಿ,ಸೆ.28:ಹಿರಿಯರನ್ನು ನೆನೆಯುವ ಪಕ್ಷ ಮಾಸದಲ್ಲಿ, ಶ್ರಾದ್ಧ ಪಿಂಡ ಹಾಗೂ ತರ್ಪಣವನ್ನು ನೀಡುವ ಪಿತೃ ಪಕ್ಷದ ಮಾಸದಲ್ಲಿ ಗತಿಸಿದವರಿಗೆ ಮೋಕ್ಷ ಮತ್ತು ಮುಕ್ತಿ ಪ್ರಾಪ್ತಿಗಾಗಿ ಗರುಡ ಪುರಾಣ ಶ್ರವಣ ಮಾಡಬೇಕೆಂದು ಪಂ.ಪ್ರಸನ್ನಾಚಾರ್ಯ ಜೋಶಿ ಹೇಳಿದರು.
ವೇದವ್ಯಾಸ ಸೇವಾ ಪ್ರತಿಷ್ಠಾನದ ವತಿಯಿಂದ ಜಯತೀರ್ಥ ನಗರದ ಶ್ರೀಲಕ್ಷ್ಮಿನಾರಾಯಣ ಮಂದಿರದಲ್ಲಿ ಆಯೋಜಿಸಲಾಗಿದ್ದ ಪ್ರವಚನದಲ್ಲಿ ಅವರು ಗರುಡ ವಿಷ್ಣುವಿನ ವಾಹನ, ವೈಕುಂಠದಲ್ಲಿ ಗರುಡನು ಭಗವಂತನಿಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಬಂದ ಪುರಾಣವೇ ಗರುಡ ಪುರಾಣ. ಹಿಂದೂ ಧರ್ಮದಲ್ಲಿ 18 ಪುರಾಣಗಳಲ್ಲಿ ಗರುಡ ಪುರಾಣವ ಒಂದು. ಇದರಲ್ಲಿ ಆಚಾರ, ಧರ್ಮ ಮತ್ತು ಬ್ರಹ್ಮ ಕಾಂಡ ಎಂದು ವಿಂಗಡಿಸಲಾಗಿದೆ.ಗರುಡ ಪುರಾಣ ಜಗತ್ತಿನಲ್ಲಿ ಪ್ರಸಿದ್ಧಿಯಾಗಿದ್ದು, ನೈಮಿಷಾರಣ್ಯದಲ್ಲಿ ಹೋಮಕ್ಕೆ ಕುಳಿತಿದ್ದ ಶೌನಕರು ಸದ್ಗತಿ ಪ್ರಾಪ್ತಿಗಾಗಿ ಸೂತಾಚಾರ್ಯರನ್ನು ಪ್ರಶ್ನಿಸಿದಾಗ ಅವರು ಗರುಡ ಪುರಾಣ ಹೇಳಿದರು.
ಮನುಷ್ಯನು ಜೀವನಪಯರ್ಂತ ಮಾಡುವ ಕರ್ಮಗಳು ಮರಣ ನಂತರ ಹೇಗೆ ಪರಿಣಾಮ ಬೀರುತ್ತದೆ ಎಂದು ಗರುಡ ಪುರಾಣ ತಿಳಿಸುತ್ತದೆ. ಜೀವಿಗಳ ಸಾವು, ಯಮಲೋಕ ಯಾತ್ರೆ, ಸ್ವರ್ಗ -ನರಕ ಮತ್ತು ಮೋಕ್ಷದ ಬಗ್ಗೆ ಮಾತ್ರವಲ್ಲದೆ
ಗರುಡ ಪುರಾಣವು ನಮಗೆ ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ ಎಂದರು.
ಪ್ರತಿಷ್ಠಾನದ ಕಾರ್ಯದರ್ಶಿ ಅನಿಲ್ ಕುಲಕರ್ಣಿ ವಂದಿಸಿದರು, ಹಿರಿಯರಾದ ರಾಮಾಚಾರ್ಯ ನಗನೂರು, ಸುರೇಶ್ ಕುಲಕರ್ಣಿ, ವಿನುತ ಎಸ್ ಜೋಶಿ, ಜಯತೀರ್ಥ ಶರ್ಮ, ಹನುಮಂತರಾವ ಕುಲಕರ್ಣಿ, ಪ್ರಾಣೇಶ್ ಮುಜುಂದರ್, ಛಾಯಾ ಮುಳೂರ, ಜ್ಯೋತಿ ಲಾತೂರಕರ್, ಜಯಶ್ರೀ ಕುಲಕರ್ಣಿ, ಅರುಂಧತಿ ಜಾಹಾಗಿರದಾರ್, ಸುನಂದಾ ಜೋಶಿ, ರಾಗಿಣಿ, ಅನುರಾಧಾ ಜೋಶಿ ಇದ್ದರು.