ಎಸ್ಸಿ, ಎಸ್ಟಿ ನೌಕರರ ಜಿಲ್ಲಾ ಸಭೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.22:ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಸÀಭೆ ಜರುಗಿತು.
ಈ ಸಭೆಯಲ್ಲಿ ಜಿಲ್ಲಾ ಸಮನ್ವಯ ಸಮಿತಿಯ ಪದಾಧಿಕಾರಿಗಳ ಪುನರ್ ಆಯ್ಕೆ ಮಾಡುವುದು, ಆಯಾ ತಾಲೂಕಿನ ಪದಾಧಿಕಾರಿಗಳನ್ನು ಪುನರ್ ಆಯ್ಕೆ ಮಾಡುವುದು, ಸಮನ್ವಯ ಸಮಿತಿಯ ಸದಸ್ಯತ್ವ ಮಾಡುವುದು, ತಾಲೂಕಾ ಮಟ್ಟದ ಮಹಿಳಾ ಘಟಕ, ಜಿಲ್ಲಾ ಮಟ್ಟದ ಮಹಿಳಾ ಘಟಕ ರಚನೆ ಮಾಡುವುದು, ಇದೇ ತಿಂಗಳಲ್ಲಿ ರಾಜ್ಯ ಮಟ್ಟದಲ್ಲಿ ಸಮನ್ವಯ ಸಮಿತಿಯ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಏರ್ಪಡಿಸುವುದು, ಅಗಸ್ಟ್ ತಿಂಗಳಲ್ಲಿ ರಾಜ್ಯ ಮಟ್ಟದ ನೌಕರರ ಶಿಬಿರ ಆಯೋಜನೆ ಮಾಡುವುದು ಇವೇ ಮುಂತಾದ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯ ಅಂಗೀಕರಿಸಲಾಯಿತು.
ಇದೇ ಸಂದÀರ್ಭದಲ್ಲಿ ಸಮನ್ವಯ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ ಬಿ.ಟಿ. ವಾಘಮೋರೆ, ಬಸವನಬಾಗೇವಾಡಿಯ ತಾಲೂಕಾಧ್ಯಕ್ಷ ಪ್ರಭು ಢವಳಗಿ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕೋಶಾಧ್ಯಕ್ಷರನ್ನಾಗಿ ಮಹೇಶ ಹೊನ್ನಾಕಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಬಿ.ಹೆಚ್. ನಾಡಗಿರಿ ಮಾತನಾಡಿ, ಈ ಸಮನ್ವಯ ಸಮಿತಿ ರಾಜ್ಯ ಮಟ್ಟದಲ್ಲಿ ಒಳ್ಳೆಯ ಕಾರ್ಯ ನಿರ್ವಹಿಸುತ್ತಿದೆ ಮತ್ತು ಎಲ್ಲಾ ಜಿಲ್ಲೆಗಳಲ್ಲಿ ರಚನೆ ಆಗಿರುತ್ತದೆ ಮತ್ತು ವಿಜಯಪುರ ಜಿಲ್ಲೆಯಲ್ಲಿ ಎಕೈಕ ಎಸ್ಸಿ ಎಸ್ಟಿ ನೌಕರರ ಸಂಘ ಇರುವುದು. ಇದು ರಾಜ್ಯ ಮಟ್ಟದಲ್ಲಿ ಮಾನ್ಯತೆ ಪಡೆದ ಸಂಘವಾಗಿದೆ ಎಂದರು
ವೇದಿಕೆಯಲ್ಲಿ ಗೌರವಾಧ್ಯಕ್ಷÀ ಬಸವಂತ ಗುಣದಾಳ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಹೊಸಮನಿ, ಉಪಾಧ್ಯಕ್ಷ ರವಿ ಯಲಡಗಿ, ನೀಜು ಮೇಲಿನಕೇರಿ, ಬಿ.ಟಿ. ವಾಘ್ಮೋರೆ, ಬಸವನಬಾಗೇವಾಡಿಯ ತಾಲೂಕಾಧ್ಯಕ್ಷ ಪ್ರಭು ಢವಳಗಿ. ಗಣೇಶ ಕಾಂಬಳೆ, ಸೂರ್ಯವಂಶಿ ಮಾದರ, ನಾಗರಾಜ ಬರಗುಡಿ, ಜಿಲ್ಲಾ ಪದಾಧಿಕಾರಿಗಳಾದ ಎಂ.ಎಮ್.ಮುಂಡೆವಾಡಿ, ಎಸ್,ಎಂ. ಡೋಣಿ ಮತ್ತಿತರರು ಇದ್ದರು.