ಗುರು ಪೂರ್ಣಿಮೆ ಮಹೋತ್ಸವ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.22 :ಇಲ್ಲಿನ ವಿವೇಕ ನಗರದ ಶ್ರೀ ಈಶ್ವರ ದೇವಾಲಯದಲ್ಲಿ ಗುರು ಪೂರ್ಣಿಮೆಯ ನಿಮಿತ್ಯವಾಗಿ ಶ್ರೀ ಗುರುಸಂಗಯ್ಯ ಹಿರೇಮಠ ಸ್ವಾಮಿಗಳಿಂದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಗುರು ಪೂರ್ಣಿಮೆ ಅಂಗವಾಗಿ ಬುರಣಾಪೂರದ ಶ್ರೀ ಲಕ್ಷ್ಮಣ ಶಿವಶರಣರಿಂದ ಸಾಮೂಹಿಕ ಶಿವಪಂಚಾಕ್ಷರಿ ಮಹಾಮಂತ್ರ ಜಪಯಜ್ಞೆ ಜರುಗಿತು.
ಈ ಸಂದರ್ಭದಲ್ಲಿ ಜಿ.ಎಸ್. ಹಿರೇಮಠ, ಮಹಾದೇವಿ ಹಿರೇಮಠ, ಚಿಂತಾಮಣಿ ಗುರುಗಳು, ಲತಾ ಚಿಂತಾಮಣಿ, ಬೌರಮ್ಮ ಹೂಗಾರ ಮತ್ತಿತರರು ಉಪಸ್ಥಿತರಿದ್ದರು.