ಚುನಾವಣಾ ಉಸ್ತುವಾರಿಯಾಗಿ   ಹಿರಿಯೂರಿನ ಜಿ ದಾದಾಪೀರ್  ನೇಮಕ
ಸಂಜೆವಾಣಿ ವಾರ್ತೆ
ಹಿರಿಯೂರು. ಜು. 21- ಮುಂಬರುವ ಶಿಗ್ಗಾವಿ ವಿಧಾನಸಭೆ  ಉಪಚುನಾವಣೆಗೆ ಉಸ್ತುವಾರಿಯಾಗಿ  ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ  ಕಾಂಗ್ರೆಸ್ ಕಾರ್ಯದರ್ಶಿ  ಹಿರಿಯೂರು ಕಾಂಗ್ರೆಸ್ ಸಮಿತಿಯಲ್ಲಿ ಹಲವಾರು ವರ್ಷಗಳಿಂದ ಸಾಕಷ್ಟು ಪ್ರಗತಿಪರ ಕೆಲಸ ಕಾರ್ಯಗಳನ್ನು ನಿರ್ವಹಿಸಿರುವ ವಿವಿಧ  ಸಂಘ ಸಂಸ್ಥೆಗಳ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ಜನಾನುರಾಗಿರುವ ಹಿರಿಯೂರಿನ ಜಿ. ದಾದಾಪೀರ್  ರವರಿಗೆ  ಕರ್ನಾಟಕ ಪ್ರದೇಶ್ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಮಹಮ್ಮದ್ ಹ್ಯಾರಿಸ್  ನಲಪಾಡ್ ನೇಮಕ ಮಾಡಿ ಆದೇಶಿಸಿರುತ್ತಾರೆ.