ಶ್ವೇತ ವಸ್ತ್ರ ಧರಿಸಿ, ಕ್ಷೀರ ಬಣ್ಣದ ಮಹತ್ವ ಸಾರಿದ ವಿದ್ಯಾರ್ಥಿಗಳು
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೨೧; “ಬಿಳಿಬಣ್ಣ ಎಂದರೆ ಶಾಂತಿಯ ಸಂಕೇತ, ಪರಿಶುದ್ದತೆಯ ಪ್ರತೀಕವೆಂಬಂತೆ” ಶ್ರೀ ವಾಸವಿ ರಾಷ್ಟ್ರೀಯ ವಿದ್ಯಾಲಯದಲ್ಲಿ ನರ್ಸರಿ ವಿಭಾಗದ ಮಕ್ಕಳು ಬಿಳಿಯ ಬಣ್ಣದ ವಸ್ತ್ರವನ್ನು ಧರಿಸಿ “ಮಿಲ್ಕ್ ಡೇ” ಯನ್ನು ಆಚರಿಸಿದರು.ಈ ಕಾರ್ಯಕ್ರಮದಲ್ಲಿ ವಿದ್ಯಾ¸ ಸಂಸ್ಥೆಯ ಅಧ್ಯಕ್ಷರಾದ  ಹೆಚ್.ಅನಿಲ್‌ಕುಮಾರ್‌, ಕಾರ್ಯದರ್ಶಿಗಳಾದ ಟಿ ಎಂ ಉಮಾಪತಯ್ಯ, ಖಜಾಂಚಿಗಳಾದ  ಪ್ರವೀಣ್ ಹುಲ್ಲುಮನೆ ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ  ರಶ್ಮಿ ಬಿ  ಗೋಮಾತೆಯಲ್ಲಿರುವ ಹಾಲಿನ ಪೌಷ್ಟಿಕಾಂಶಗಳ ಬಗ್ಗೆ ತಿಳಿಸಿದರು. ಹಾಗೂ ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.