ರೈತರ ಸಂಕಷ್ಟಗಳಿಗೆ ಸೂಕ್ತ ಸಮಯದಲ್ಲಿ ಬೆಳೆ ಪರಿಹಾರ ದೊರಕಲಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೨೧: ರೈತರು ನೊಂದು, ಬೆಂದು, ಕಷ್ಟ ಸಹಿಸಿಕೊಂಡು, ಪರಿಸರದ ಜೊತೆ ವಿಕೋಪಗಳ ಜೊತೆ, ಮಳೆರಾಯನ ಜೊತೆ ಹೋರಾಡಿಕೊಂಡು, ಬದುಕು ಸಾಗಿಸುತ್ತಿರುವ ರೈತನ ಸಂಕಷ್ಟಗಳಿಗೆ ಪರಿಹಾರ ಒದಗಿಸುವುದು ಸಹ ಸರ್ಕಾರದ ಒಂದು ಕರ್ತವ್ಯವಾಗಿದೆ. ಅನ್ನದಾತ, ದೇಶದ ಬೆನ್ನೆಲುಬು ರೈತನನ್ನ ರಕ್ಷಿಸಿಕೊಂಡು, ಅವನ ಬದುಕಿಗೊಂದು ಆಶ್ರಯವಾಗಬೇಕಾದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ವಿನಂತಿಸಿಕೊಂಡಿದ್ದಾರೆ.ಬರಗಾಲದಲ್ಲಿ ರೈತನಿಗೆ ಒಂದಿಷ್ಟು ಸಂಕಟವಾದರೆ, ಅತಿ ಹೆಚ್ಚು ಮಳೆಗಾಲದಲ್ಲೂ ಸಹ, ರೈತನ ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾನೆ. ಉತ್ತ್ತು ಬಿತ್ತಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ, ಮತ್ತೊಂದಿಷ್ಟು ಸಂಕಷ್ಟಗಳಿಗೆ ರೈತ ಈಡಾಗುತ್ತಾನೆ. ವರ್ಷಕ್ಕೆ ನಾಲ್ಕು ತಿಂಗಳು ಬರಗಾಲದಲ್ಲಿ, ನಿರುದ್ಯೋಗದಲ್ಲಿ ಬದುಕು ಸಾಗಿಸುವ ರೈತನಿಗೆ ಸಾಕಷ್ಟು ಗ್ರಾಮೀಣ ಉದ್ಯೋಗವನ್ನು ಸಹ ಹೊಂದಿಸಿ ಕೊಡಬೇಕಾಗುತ್ತದೆ. ಗ್ರಾಮೀಣ ಉದ್ಯೋಗಗಳನ್ನ ಮರು ಸ್ಥಾಪನೆ ಮಾಡಿ, ರೈತನು ಉತ್ಪಾದನೆ ಮಾಡಿದ ವಸ್ತುಗಳನ್ನ ಖರೀದಿ ಮಾಡಿ, ಸಾರ್ವಜನಿಕರು ರೈತನಿಗೆ ಸಹಾಯ ಹಸ್ತ ಚಾಚಬಹುದು ಎಂದಿದ್ದಾರೆ.ಗಾಂಧೀಜಿಯವರ ಕಾಲದಿಂದಲೂ ಸಹ ರೈತನ ಸಂಕಷ್ಟಗಳಿಗೆ ಪರಿಹಾರ ಸೂಚಿಸಲು ಪ್ರಯತ್ನಗಳಾದವು. ಆದರೆ ಇವ್ಯಾವನ್ನು ಸಹ ಸರಿಯಾಗಿ ಅನುಷ್ಠಾನಕ್ಕೆ ತರದಲೆ, ರೈತ ಇನ್ನು ಸಂಕಷ್ಟಗಳ ಸರಮಾಲೆಯಲ್ಲಿ ಬದುಕನ್ನ ಸಾಕಿಸುತ್ತಿದ್ದಾರೆ. ಬೆಳೆ ವಿಮೆ, ಇಳುವರಿ ಕಡಿಮೆಯಾದಾಗ ಪರಿಹಾರ, ರೋಗರುಜಿನಗಳಿಂದ ಬೆಳೆ ಹಾನಿ ಮಾಡಿದಾಗ ಪರಿಹಾರ, ಪರಿಸರದಲ್ಲಿ ಆಗುವ ಅನಾಹುತಗಳಿಗೆ ಪರಿಹಾರ, ಇವೆಲ್ಲವೂ ಸಹ ಈಗ ಇನ್ಸೂರೆನ್ಸ್ ಕಂಪನಿಗಳು ಸಹ ರೈತರಿಗೆ ಬೆನ್ನೆಲುಬು ಹಾಗೆ ನಿಲ್ಲಲು ಪ್ರಯತ್ನಿಸುತ್ತಿವೆ. ಆದರೆ ಅವು ಸಹ ತಮ್ಮ ಸ್ವಾರ್ಥಕ್ಕಾಗಿ, ರೈತರಗೆ ಸಹಾಯ ಹಸ್ತ ಚಾಚುತ್ತೇನೆ ಎಂಬ ನಾಟಕವಾಡದೇ, ನೈಜವಾಗಿ ಅವರ ಸಂಕಷ್ಟಗಳಿಗೆ ಪರಿಹಾರ ಸೂಚಿಸಿ, ಅವರನ್ನ ಬಲಿಷ್ಠ ಗೊಳಿಸುವ ಮಟ್ಟಿಗೆ ಕೆಲಸ ಮಾಡಬೇಕಾಗಿದೆ ಎಂದಿದ್ದಾರೆ.ರೈತರು ಉತ್ಪಾದನೆ ಮಾಡುವ ವಸ್ತುಗಳನ್ನ ಸರಿಯಾದ ದರದಲ್ಲಿ ಮಧ್ಯವರ್ತಿಗಳು ಕೊಂಡುಕೊಂಡು, ಅವರನ್ನ ರಕ್ಷಿಸಬೇಕಾಗಿದೆ. ರೈತನ ಶೋಷಣೆಯನ್ನ ಮಾಡಿ, ನಾವು ಯಾವುದೇ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ರೈತನಿಗೆ ಬೇರೊಂದು ಉಗ್ಯೋಗದ ಬದುಕು ಸಹ ಸಾಧ್ಯವಿಲ್ಲ. ನಗರದಲ್ಲಿ ನಡೆಯುವ ಎಲ್ಲಾ ವ್ಯಾಪಾರದ ವಸ್ತುಗಳಿಗೂ ಸಹ, ಮೂಲವಸ್ತುಗಳನ್ನ ತಂದು ಒದಗಿಸುವುದೇ ರೈತರು. ಬೆಳಗ್ಗೆ ಎದ್ದ ತಕ್ಷಣ, ರೈತರ ತಂದು ಹಾಕುವ ವಸ್ತುಗಳಿಂದಲೇ, ನಗರದ ಸಾಕಷ್ಟು ವ್ಯಾಪಾರಸ್ಥರು ಜೀವನ ನಿರ್ವಹಣೆ ಮಾಡುತ್ತಾರೆ. ಸೊಪುö್ಪ ತರಕಾರಿಗಳು ಎಲ್ಲವೂ ಸಹ ರೈತರಿಂದಲೇ ಉತ್ಪಾದನೆಯಾಗಿ, ನಗರಕ್ಕೆ ಬರುವುದು. ನಗರಗಳು ರೈತರ ಶೋಷಣೆಗೆ ನಿಂತರೆ, ರೈತರನ್ನ ಯಾರು ರಕ್ಷಿಸಲಾರರು. ನಮ್ಮವರಿಂದಲೇ ನಮ್ಮವರ ಶೋಷಣೆಯಾಗುವುದನ್ನು ನಾವು ತಡೆಯಬೇಕು. ಗ್ರಾಮಗಳನ್ನ ಶೋಷಿತಗೊಳಿಸಿ, ನಗರಗಳು ಶ್ರೀಮಂತ ಗೊಳ್ಳುತ್ತಿವೆ ಎಂದು ಗಾಂಧೀಜಿಯವರು ದೂರಿದ್ದÀರು. ಅದು ಈಗಲೂ ಸಹ ಸತ್ಯವಾಗಿ ಕಾಣುತ್ತಿದೆ ಎಂದಿದ್ದಾರೆ.ನಗರಗಳು ವಿಜೃಂಭಿಸುತ್ತಿರುವುದು, ಅವರ ತಮ್ಮ ಸ್ವಂತ ದುಡಿಮೆಯಿಂದಲ್ಲ, ಗ್ರಾಮೀಣ ಜನರ ಶೋಷಣೆಯಿಂದ ಎಂದು ಅವರು ಮಾತನಾಡಿದ್ದರು. ನಗರಗಳ ಅಭಿವೃದ್ಧಿಗೆ ಪಶ್ಚಿಮಾತ್ಯದಿಂದ ಯಾವುದೇ ಹಣಕಾಸು ಲಭ್ಯವಿಲ್ಲ, ಅದು ನಮ್ಮ ಭಾರತದ ಏಳು ಲಕ್ಷ ಹಳ್ಳಿಗಳಿಂದಲೇ ಸಂಪಾದಿಸಿಕೊಳ್ಳುತ್ತಿರುವುದು. ಹಾಗಾಗಿ ರೈತರ ಬೆನ್ನ ಮೇಲೆ ಸವಾರಿ ಮಾಡುವುದನ್ನು ಬಿಟ್ಟು, ಅವರ ಸಂಕಷ್ಟಗಳಿಗೆ ಜನರು ಸ್ಪಂದಿಸಬೇಕು ಎಂದು ಗಾಂಧೀಜಿಯವರು ಕರೆ ನೀಡಿದ್ದರು. ಆ ಸಂದರ್ಭದಲ್ಲಿ ಚರಕ, ಖಾದಿ ಬಗ್ಗೆ ಹೆಚ್ಚಿನ ಒತ್ತುಕೊಟ್ಟು, ಗ್ರಾಮೀಣ ಜನರು ಬಟ್ಟೆಗಳನ್ನು ಸಹ ಉತ್ಪಾದನೆ ಮಾಡಿ, ನಗರದ ಜನರಿಗೆ ಸಪ್ಲೆöÊ ಮಾಡಲಿ ಎಂದು ವಿನಂತಿಸಿಕೊAಡಿದ್ದರು. ಇಡೀ ದೇಶ ಅಂದು ಖಾದಿ ತೊಟ್ಟು, ಗ್ರಾಮೀಣ ಜನರಿಗೆ, ಹತ್ತಿ ಬೆಳೆಗಾರರಿಗೆ ಸಹಕಾರ ನೀಡಿತ್ತು. ಆ ಸಿದ್ಧಾಂತವನ್ನು ಈಗ ಮತ್ತೆ ನಾವು ಬೆಳಕಿಗೆ ತಂದು, ರೈತರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ.
