ಕೈಗಾರಿಕೆ ಸ್ಥಾಪನೆಗಾಗಿ 658 ಎಕರೆ ಭೂಸ್ವಾಧೀನ
ಕಲಬುರಗಿ,ಜು.22- ಕಲಬಯರಗಿ ಮತ್ತು ಯಾದಗಿರ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪನೆಯ ಉದ್ದೇಶದಿಂದ ಕಳೆದ ಐದು ವರ್ಷಗಳಲ್ಲಿ ಒಟ್ಟು 658.42 ಎಕರೆ ಜಮೀನನ್ನುಜ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಅವರು, ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ ಸದಸ್ಯ ಬಿ.ಜಿ.ಪಾಟೀಲ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.
ಕಲಬುರಗಿಯಲ್ಲಿ 607.13 ಮತ್ತು ಯಾದಗಿರ ಜಿಲ್ಲೆಯಲ್ಲಿ 51.29 ಎಕರೆ ಭೂಸ್ವಾಧಿನ ಮಾಡಲಾಗಿದ್ದು, ಕಲಬುರಗಿಯ ಕಮಪನೂರ ರಸ್ತೆಯಲ್ಲಿ ಮೂರನೆ ಹಂತದಲ್ಲಿ 21.54 ಎಕರೆ ಜಮೀನ ಸ್ವಾಧೀನ ಹಾಗೂ 29 ಯುನಿಟ್ ಗಳಿಗೆ ಹಂಚಿಕೆ ಮಾಡಲಾಗಿದೆ.
2ನೇ ಹಂತದಲ್ಲಿ ನಾಲ್ಕು ಯುನಿಟ್‍ಗಳಲ್ಲಿ 15 ಎಕರೆ ಜಮೀನು ಬಳಸಲಾಗಿದ್ದು, ಒಟ್ಟಾರೆ 35 ಯುನಿಟ್ ಸ್ಥಾಪನೆಗೆ 36.22 ಎಕರೆ ಜಮೀನು ಹಂಚಿಕೆ ಮಾಡಲಾಗಿದೆ.
ಯಾದಗೀರ ಜಿಲ್ಲೆಯಲ್ಲಿ ಕಡೇಚೂರ 185 ಯುನಿಟ್ ಗಳಿಗೆ 571.22 ಎಕರೆ ಜಮೀನ ಹಂಚಿಕೆ ಮಾಡಲಾಗಿದೆ. ಎಂದು ಸಚಿವರು ಪ್ರಶ್ನೆಗೆ ಉತ್ತರಿಸಿದ್ದಾರೆ.
ಭೂಮಿ ಕಳೆದುಕೊಂಡ ರೈತರಿಗೆ ಒಪ್ಪಂದದ ದರದಲ್ಲಿ ಭೂ ಪರಿಹಾರ ನಿಗದಿಪಡಿಸಿ ವಿತರಿಸಲಾಗಿದೆ. ಒಪ್ಪಂದ ದರದಲ್ಲಿ ಒಪ್ಪದಿರುವ ಭೂಮಾಲೀಕರಿಗೆ ಸಾಮಾನ್ಯ ಐತೀರ್ಪು ರಚಿಸಿ ನಿಯಮಾನುಸಾರ ನ್ಯಾಯಾಲಯಕ್ಕೆ ಠೇವಣಿ ಇರಿಸಲಾಗಿದೆ ಯಾದಗಿರಿ ಜಿಲ್ಲೆಯ ಕಡೇಚೂರ 51.29 ಎಕರೆಗೆ ಸಂಬಂಧಿಸಿದಂತೆ ಪ್ರತಿ ಎಕರೆಗೆ 17 ಲಕ್ಷ ರೂ.ಗಳ ಭೂಪರಿಹಾರ ಪಾವತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.