ದಲಿತ ಸೇನೆ ರಾಜ್ಯಾಧ್ಯಕ್ಷರಾಗಿ ಕುಡಕಿ ಆಯ್ಕೆ
ಕಲಬುರಗಿ,ಜು.22-ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷರಾಗಿ ಸಾಮಾಜಿಕ ಹೋರಾಟಗಾರ ದತ್ತಾತ್ರೇಯ ಕುಡಕಿ ಅವರು ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
ಇಲ್ಲಿನ ಕನ್ನಡ ಭವನದಲ್ಲಿ ಇಂದು ನಡೆದ ಸೇನೆಯ ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತಾದ ನಿರ್ಣಯ ಕೈಗೊಳ್ಳಲಾಯಿತು.
ನಿಕಟಪೂರ್ವ ರಾಜ್ಯಾಧ್ಯಕ್ಷ ಬಾಬುರಾವ್ ಅರುಣೋದಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆನಂದರಾಯ ಗಾಯಕವಾಡ, ಕುಡಕಿ ಹೆಸರನ್ನು ಸೂಚಿಸಿದ ಬಳಿಕ ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ತಮ್ಮ ಸರ್ವಾನುಮತದ ಅನುಮೋದನೆ ವ್ಯಕ್ತಪಡಿಸಿದರು.
ಇದೇ ವೇಳೆ ರಾಜ್ಯ ಉಪಾಧ್ಯಕ್ಷರಾಗಿ ಆನಂದರಾಯ ಗಾಯಕವಾಡ, ಜಿಲ್ಲಾಧ್ಯಕ್ಷರಾಗಿ ಚನ್ನವೀರ ಕಾಳೆಕಿಂಗೆ, ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಸಂಜುಕುಮಾರ್ ಕಾಂಬಳೆ ಅವರನ್ನು ಆಯ್ಕೆ ಮಾಡಲಾಯಿತು.
ಅಂಬಾಜಿ ಪಿ.ಮೇಟಿ, ರಾಜೇಂದ್ರ ಗಾಯಕವಾಡ, ಮಲ್ಲಿಕಾರ್ಜುನ ಎಸ್.ಖನ್ನಾ, ಮಂಜುನಾಥ ಕಂಠಿ, ಶರಣು ಖನ್ನಾ, ಧನರಾಜ್ ಬೀದರ್, ಗೌತಮ ಕಾಂಬ್ಳೆ, ಭೋಜರಾಜ ಜುಬ್ರೆ, ಭೀಮಾಶಂಕರ ಕದಂ, ವಿಠ್ಠಲ ಕೋಣೆಕರ್ ಇನ್ನಿತರರು ಉಪಸ್ಥಿತರಿದ್ದರು.